ತುಮಕೂರು:
ತಾಲ್ಲೂಕಿನ ದೊಡ್ಡಸಾರಂಗಿಪಾಳ್ಯದ ನಿವಾಸಿ ಗಂಗಣ್ಣನವರ ಪತ್ನಿ ಬಸಮ್ಮ ಅವರು 11.7.13 ರಂದು ಬೆಳಗ್ಗೆ ತೋಟದಲ್ಲಿ ಕಳೆ ತೆಗೆಯುತ್ತಿದ್ದಾಗ ಆರೋಪಿ ಉಮೇಶ್ ಎಂಬಾತ ಚಿನ್ನದ ಸರವನ್ನು ದೋಚುವ ಉದ್ದೇಶದಿಂದ ಮೋಟಾರ್ ಬೈಕ್‍ನಲ್ಲಿ ಬಂದು ಬಸಮ್ಮ ಅವರಿಗೆ ಚಾಕು ತೋರಿಸಿ ಆಕೆಯ ಕೊರಳಿನಲ್ಲಿದ್ದ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಳ್ಳಲೆತ್ನಿಸಿದಾಗ ಬಸಮ್ಮ ಅವರು ಸರವನ್ನು ಭದ್ರವಾಗಿ ಹಿಡಿದುಕೊಂಡರು.
ಕೂಡಲೇ ಆರೋಪಿ ಬಸಮ್ಮ ಅವರನ್ನು ಚಾಕುವಿನಿಂದ ಗಾಯಗೊಳಿಸಿ ಆಕೆಯ ಕೊರಳಿನಲ್ಲಿದ್ದ 16 ಗ್ರಾಂ ತೂಕದ ತುಂಡಾದ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆಂದು ಆಗಿನ ತನಿಖಾಧಿಕಾರಿ ಮರಿಯಪ್ಪ ಮತ್ತು ರವಿ ಎಂಬುವರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಸದರಿ ಪ್ರಕರಣವು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ತುಮಕೂರು ಇಲ್ಲಿ ನಡೆದು ಅಭಿಯೋಜನೆಯ ಪರವಾಗಿ ಸಾಕ್ಷಿದಾರರ ವಿಚಾರಣೆಯಾಗಿದ್ದು, ನ್ಯಾಯಾಧೀಶರಾದ ರಾಜೇಂದ್ರ ಬದಾಮಿಕರ್ ಅವರು ಆರೋಪಿ ಉಮೇಶ್‍ನಿಗೆ 7 ವರ್ಷಗಳ ತೀವ್ರ ಸ್ವರೂಪದ ಶಿಕ್ಷೆ ವಿಧಿಸಿ ತೀರ್ಪು ನೀಡಿರುತ್ತಾರೆ. ಕೆ.ಎಚ್.ಶ್ರೀಮತಿ ಅವರು ಅಭಿಯೋಜಕರ ಪರವಾಗಿ ವಾದ ಮಂಡಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
