ಗುಬ್ಬಿ:
ಚುನಾವಣೆಗಳಲ್ಲಿ ಸೋಲು ಮತ್ತು ಗೆಲವು ಸಾಮಾನ್ಯ ಅಂತಹದರಲ್ಲಿ ಪರಾಭವಗೊಂಡ ಕೋಪಕ್ಕೆ ಇನ್ನೂಬ್ಬರ ಮೇಲೆ ದುಂಡಾವರ್ತನೆ ತೋರುವುದು ಸರಿಯಲ್ಲ ಇಂತಹವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಮುಖಂಡ ಎಸ್.ಡಿ.ದಿಲೀಪ್‍ಕುಮಾರ್ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆಸಿದ ಸುದ್ದಿ ಗೋಷ್ಟಿಯಲ್ಲಿ ಮಾತನಾಡಿದ ಅವರು ನಮ್ಮ ಮುಖಂಡರಾದ ದಯಾನಂದ ಅವರ ಅಂಗಡಿಗೆ ನುಗ್ಗಿ ದಾಂದಲೆ ಮಾಡಿದ್ದಾರೆ ಅಲ್ಲದೆ ಜೀವ ಬೆದರಿಕೆ ಹಾಕಿದ್ದಾರೆ ಇದು ಪ್ರಜಾ ಪ್ರಭುತ್ವ ವ್ಯವಸ್ಥೆಗೆ ವಿರುದ್ದವಾದುದಾಗಿದೆ ಕೂಡಲೆ ಸಂಬಂಧಿಸಿದ ಅಧಿಕಾರಿಗಳು ಮತ್ತು ಪೋಲೀಸರು ಸೂಕ್ತ ಕ್ರಮಗಳನ್ನು ಕೈಗೊಂಡು ದಾಂದಲೆ ನಡೆಸಿ ಜೀವ ಬೆದರಿಕೆ ಹಾಕಿರುವವರನ್ನು ಬಂದಿಸಿ ದಯಾನಂದ್ ಅವರಿಗೆ ಸೂಕ್ತ ಭದ್ರತೆ ಒದಗಿಸುವಂತೆ ಒತ್ತಾಯಿಸಿದರು.
ಅಂಗಡಿಗೆ ನುಗ್ಗಿ ವಸ್ತುಗಳನ್ನು ನಾಶ ಮಾಡಿರುವ 9 ಜನರ ಮೇಲೆ ಈಗಾಗಲೆ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು ಎಫ್.ಐ.ಆರ್ ದಾಖಲು ಮಾಡಲಾಗಿದೆ ಪೋಲೀಸರು ಈ ಬಗ್ಗೆ ಗಂಭೀರ ಚಿಂತನೆ ನಡೆಸಿ ಸರಿಪಡಿಸಬೇಕು ಎಂದು ಒತ್ತಾಯಿಸಿದ ಅವರು ಈಗಾಗಲೆ ಪೊಲೀಸ್ ವರಿಷ್ಠಾಧಿಕಾರಿಗಳಿಗೂ ತಿಳಿಸಲಾಗಿದೆ ಮುಂದಿನ ದಿನದಲ್ಲಿ ಯಾವುದೆ ಗಲಾಟೆ ಮತ್ತು ಗಲಭೆಗಳು ನಡೆಯದಂತೆ ನೋಡಿಕೊಳ್ಳುವಂತೆ ಒತ್ತಾಯಿಸಿದರು.
ವರ್ತಕರ ಸಂಘದ ಅಧ್ಯಕ್ಷ ದಯಾನಂದ್ ಮಾತನಾಡಿ ಪಟ್ಟಣ ಪಂಚಾಯ್ತಿ ಚುನಾವಣೆಯ ಫಲಿತಾಂಶ ಬಂದ ಸಂಜೆ ನಮ್ಮ ಅಂಗಡಿಗೆ ಬಂದಂತಹ ಬಿಜೆಪಿ ಪಕ್ಷದ ಅಭ್ಯರ್ಥಿ ಹರೀಶ್ ಬೆಂಬಲಿಗರು ಬಂದು ನಮ್ಮ ಅಂಗಡಿಗೆ ಎಕಾಏಕಿ ನುಗ್ಗಿ ಸುಮಾರು 50 ಸಾವಿರಕ್ಕೂ ಹೆಚ್ಚು ಮೌಲ್ಯದ ವಸ್ತುಗಳನ್ನು ನಾಶ ಮಾಡಿದ್ದಾರೆ ಪಕ್ಷೇತರ ಅಭ್ಯರ್ಥಿ ನರಸಿಂಹಮೂರ್ತಿ ಗೆಲುವಿಗೆ ಶ್ರಮಿಸಿದ್ದಿಯಾ ನಮಗೆ ಇದರಿಂದ 15 ಲಕ್ಷ ಹಣ ನಷ್ಟವಾಗಿದೆ. ಪ್ರಜಾಪ್ರಭುತ್ವ ದೇಶದಲ್ಲಿ ಯಾರು ಯಾರಿಗೆ ಬೇಕಾದರೂ ಸಹಾಯ ಮಾಡಬಹುದು ಆದರೆ ಗುಬ್ಬಿಯಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇಲ್ಲದಂತಾಗಿದೆ ಎಂದು ತಿಳಿಸಿದ ಅವರು ನನಗೆ ಜೀವ ಬೆದರಿಕೆ ಇದೆ ನನಗೆ ಹಾಗೂ ನನ್ನ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಬೇಕು ಎಂದು ತಿಳಿಸಿದರು.
ಸುದ್ದಿ ಗೋಷ್ಟಿಯಲ್ಲಿ ಮುಖಂಡರಾದ ಸಿದ್ದಲಿಂಗಮೂರ್ತಿ, ಮಧುಸೂದನ್, ಬಸವಲಿಂಗಯ್ಯ, ನರಸಿಂಹಮೂರ್ತಿ, ಪರಮೇಶ್, ಲೋಕೇಶ್, ಹರ್ಷ, ಶಿವಣ್ಣ ಇತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ