ಕೊಪ್ಪಳ:
ತನ್ನ ಅತ್ತಿಗೆ ಸೋಲಿನಿಂದಾಗಿ ಉದ್ರೇಕಗೊಂಡ ಮೈದುನನೋರ್ವ ಜೆಡಿಎಸ್ ಕಾರ್ಯಕರ್ತನ ತಾಯಿಯನ್ನೇ ಚಾಕುವಿನಿಂದ ಇರಿದಿರುವ ಘಟನೆ ಕೊಪ್ಪಳ ನಗರದಲ್ಲಿ ಇಂದು ನಡೆದಿದೆ.
ಚುನಾವಣೆಯಲ್ಲಿ ಸೋಲುಂಡ ತನ್ನ ಅತ್ತಿಗೆಯ ಸೋಲಿಗೆ ಕಾರಣರಾದ ರೆಹಮದ್.ಬಿ. ಮತ್ತು ಅವರ ಪುತ್ರರು ಜೆಡಿಎಸ್ ಗೆಲುವುಗೆ ಶ್ರಮಿಸಿದ್ದರು. ಇದರಿಂದ ಕುಪಿತಗೊಂಡ ಸೈಯದ್ ನಿಜಾಮುದ್ದೀನ್ ಹುಸೇನಿ ಅವರು ರೆಹಮತ್ ಬಿ. ಅವರ ತಾಯಿಯನ್ನು ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ, ಈ ಆರೋಪಿಯೊಂದಿಗಿದ್ದ ಹಾಬಿ ಹುಸೇನಿ ಅವರನ್ನು ಕೊಪ್ಪಳ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದ್ದು, ಪ್ರಕರಣವನ್ನು ದಾಖಲಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ