ಗುಬ್ಬಿ ಪಟ್ಟಣ ಪಂಚಾಯತಿ ಚುನಾವಣೆ ಫಲಿತಾಂಶ

ಗುಬ್ಬಿ:

         ಪಟ್ಟಣ ಪಂಚಾಯತಿ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು 19 ಕ್ಷೇತ್ರಗಳಲ್ಲಿ 10 ಜೆಡಿಎಸ್, 6 ಬಿಜೆಪಿ 2 ಕಾಂಗ್ರೆಸ್ ಹಾಗೂ 1 ಪಕ್ಷೇತರ ಅಭ್ಯರ್ಥಿ ಗೆಲವು ಪಡೆಯುವುದರ ಮೂಲಕ ಗುಬ್ಬಿ ಪಟ್ಟಣ ಪಂಚಾಯತಿ ಜೆಡಿಎಸ್ ಪಕ್ಷ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ.
ಕಳೆದ ಭಾರಿ 17 ವಾರ್ಡಗಳಿದ್ದ ಪಟ್ಟಣ ಪಂಚಾಯ್ತಿ ಈ ಭಾರಿ 19 ವಾರ್ಡಗಳಾಗಿದ್ದು ಮೂರು ಪಕ್ಷಗಳು ಸೇರಿದಂತೆ ಪಕ್ಷೇತರ ಅಭ್ಯರ್ಥಿಗಳು ಸೇರಿ ಒಟ್ಟು 68 ಅಭ್ಯರ್ಥಿಗಳು ಚುನಾವಣ ಕಣದಲ್ಲಿದ್ದರು ಈ ಭಾರಿ ಮೀಸಲಾತಿ ಬದಲಾವಣೆಯಾದ ಹಿನ್ನಲೆಯಲ್ಲಿ ಹಿಂದೆ ಗೆಲವು ಪಡೆದಿದ್ದ ಸದಸ್ಯರು ಬೇರೆ ಭಾಗದಲ್ಲಿ ನಿಲ್ಲುವಂತಹ ಪರಿಸ್ಥಿತಿ ಒದಗಿತ್ತು ಅದರೂ ಕೆಲವರು ಬೇರೆ ವಾರ್ಡಗಳಲ್ಲಿ ನಿಂತು ಜಯಗಳಿಸಿದರೆ ಮತ್ತೆ ಕೆಲವರು ಸೋಲನ್ನು ಅನುಭವಿಸುವಂತಾಗಿದೆ.

          ಸಚಿವರು ಜೆಡಿಎಸ್ ಪಕ್ಷದವರಾಗಿರುವುದರಿಂದ ಚುನಾವಣಾ ಕಣ ಪ್ರತಿಷ್ಠೆಯ ಕಣವಾಗಿತ್ತು ಜೆಡಿಎಸ್ 19 ವಾರ್ಡಗಳಿಗೂ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿತ್ತು 10 ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಬಿಜೆಪಿ ಪಕ್ಷವು 16 ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ತಮ್ಮದೆ ಆದ ವರ್ಚಸ್ಸಿನಲ್ಲಿ ಚುನಾವಣೆ ಎದುರಿಸಿತ್ತು 6 ಅಭ್ಯರ್ಥಿಗಳು ಜಯಗಳಿಸಿದ್ದು, ಕಾಂಗ್ರೆಸ್ ಪಕ್ಷದಿಂದ 19 ವಾರ್ಡಗಳಲ್ಲಿ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದರು ಆದರೆ ಇಬ್ಬರು ಅದರಲ್ಲೂ ಪತಿ ಪತ್ನಿ ಜಯಶಾಲಿಯಾಗಿದ್ದಾರೆ. ಪಕ್ಷೇತರರಾಗಿ ಸ್ಪರ್ಧಿಸಿದ್ದರವರ ಫೈಕಿ ಒಬ್ಬರು ಜಯಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
         ಪಟ್ಟಣದಲ್ಲಿ 15700 ಮತದಾರರಿದ್ದು ಚುನಾವಣೆಯಲ್ಲಿ 12461 ಮತದಾರರು ಮತ ಚಲಾಯಿಸಿದ್ದರು. ಚಲಾವಣೆಗೊಂಡ ಮತಗಳ ಪೈಕಿ ಜೆಡಿಎಸ್‍ಗೆ 6173, ಬಿಜೆಪಿಗೆ 3356, ಕಾಂಗ್ರೆಸ್‍ಗೆ 1803 ಪಕ್ಷೇತರರಿಗೆ 1065 ಹಾಗೂ ನೋಟಾ 64 ಮತಗಳು ಬಿದ್ದಿವೆ.
ಚುನಾವಣಾ ಫಲಿತಾಂಶ ಹೊರಬರುತ್ತಿದ್ದಂತೆಯೆ ವಿಜೇತರಾದವರು ತಮ್ಮ ಬೆಂಬಲಿಗರೊಂದಿಗೆ ಪಟಾಕಿ ಸಿಡಿಸಿ. ಸಿಹಿ ಹಂಚುವ ಮೂಲಕ ವಿಜಯೋತ್ಸವ ಆಚರಿಸಿದರು.
ಪಟ್ಟಣ ಪಂಚಾಯ್ತಿ ಚುನಾವಣೆಯಲ್ಲಿ ವಿಜೇತರಾದ ಸದಸ್ಯರ ವಿವರ. 

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link