ಛಲವೊಂದಿದ್ದಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಏನನ್ನು ಬೇಕಾದರೂ ಸಾಧಿಸಬಲ್ಲರು: ಎಸ್. ಪಿ. ಮುದ್ದಹನುಮೇಗೌಡರು

ತುಮಕೂರು

ಗ್ರಾಮೀಣ ಭಾಗದ ವಿದ್ಯಾರ್ಥಿಗಳುತಾವೆದುರಿಸಿದ ಬದುಕಿನಕಾರ್ಪಣ್ಯಗಳಿಂದಒಂದು ಭಾವನಾತ್ಮಕ ಪ್ರಬುದ್ಧತೆಯನ್ನು ಪಡೆದಿರುತ್ತಾರೆ.ಇದುಅವರಿಗೆ ಭವಿಷ್ಯದ ಸಂಕೀರ್ಣತೆಯನ್ನು ಮತ್ತುಒದಗಿಬರಬಹುದಾದ ಹಲವುಕ್ಲಿಷ್ಟ ಸವಾಲುಗಳನ್ನು ಸಮಯೋಚಿತವಾಗಿ ನಿಭಾಯಿಸಲುಅಗತ್ಯವಿರುವ ಮಾನಸಿಕ ಸ್ಥೈರ್ಯವನ್ನು ನೀಡಿರುತ್ತದೆ.ಇದರಿಂದಾಗಿ ನಗರಗಳಲ್ಲಿಅಭsÀ್ಯಯಿಸುತ್ತಿರುವ ವಿದ್ಯಾರ್ಥಿಗಳಿಗಿಂತಗ್ರಾಮೀಣ ಭಾಗದ ವಿದ್ಯಾರ್ಥಿಗಳೇಯಶಸ್ವೀಯಾಗುವಸಾಧ್ಯತೆಅಧಿಕಎಂದುತುಮಕೂರು ಲೋಕಸಭಾ ಸದಸ್ಯರಾದಎಸ್. ಪಿ.ಮುದ್ದಹನುಮೇಗೌಡರವರುಅಭಿಪ್ರಾಯಪಟ್ಟರು.ಅವರುತುರುವೇಕೆರೆತಾಲ್ಲೂಕಿನದಂಡಿನಶಿವರದಶ್ರೀ ಹೊನ್ನಾದೇವಿ ಸರ್ಕಾರಿ ಪ್ರಥಮದರ್ಜೆಕಾಲೇಜಿನ2018-19ನೇ ಸಾಲಿನ ಕ್ರೀಡಾ ಮತ್ತು ಸಾಂಸ್ಕøತಿಕಚಟುವಟಿಕೆಗಳು ಹಾಗೂಎನ್.ಎಸ್.ಎಸ್, ರೋವರ್ಸ್ಸ್, ಯುವರೆಡ್‍ಕ್ರಾಸ್, ರೆಡ್‍ರಿಬನ್ ಮತ್ತಿತರಘಟಕಗಳಉದ್ಘಾಟನೆ ಮತ್ತು ಪ್ರಥಮ ಪದವಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನುಉದ್ಘಾಟಿಸಿ ಮಾತನಾಡುತ್ತಿದ್ದರು. ಗ್ರಾಮೀಣ ವಿದ್ಯಾರ್ಥಿಗಳು ನಗರದಯಾವುದೇ ವಿದ್ಯಾರ್ಥಿಗಿಂತತಾವುಕೀಳು ಎಂಬ ಭಾವನೆಯನ್ನುತೊಡೆದುಹಾಕಬೇಕೆಂಬ ಸಲಹೆ ನೀಡುತ್ತಾ ವಿದ್ಯಾರ್ಥಿಗಳಲ್ಲಿಛಲವೊಂದಿದ್ದರೆಎಲ್ಲ ಸಮಸ್ಯೆಗಳನ್ನು ಮೀರಿಹೇಗೆದುರ್ಲಭವಾದಯಶಸ್ಸನ್ನು ಸಾಧಿಸಬಹುದೆಂದುಅವರುಸ್ವಾನುಭವದಿಂದ ಹೆಕ್ಕಿದ ನಿದರ್ಶನಗಳ ಮೂಲಕಶ್ರೋತೃಗಳಿಗೆತಿಳಿಯಪಡಿಸಿದರು.
ಸಮಾರಂಭದ ಮುಖ್ಯಅತಿಥಿಗಳಾಗಿಆಗಮಿಸಿದ್ದತುಮಕೂರು ವಿವಿಯ ಡಿ. ವಿ.ಗುಂಡಪ್ಪಕನ್ನಡಅಧ್ಯಯನಕೇಂದ್ರದ ಪ್ರಾಧ್ಯಾಪಕರಾದ ಪ್ರೊ.ಡಿ. ವಿ. ಪರಮಶಿವಮೂರ್ತಿಯವರು ಮಾತನಾಡಿಗ್ರಾಮೀಣ ಭಾಗದ ವಿದ್ಯಾರ್ಥಿಗಳ ಮುಗ್ಧತೆಅವರನ್ನುಅನವಶ್ಯಕವಾದ ಪ್ರಲೋಭನೆಗಳಿಂದಚಿತ್ತವಿಕ್ಷಿಪ್ತರಾಗದಂತೆತಡೆಯುತ್ತದೆ.ಇದರ ಸಂಪೂರ್ಣ ಲಾಭವÀನ್ನು ವಿದ್ಯಾರ್ಥಿಗಳು ಪಡೆದುಅಭ್ಯುದಯಕಾಣಬೇಕೆಂದು ಹೆಚ್ಚಾಗಿ ವಿದ್ಯಾರ್ಥಿಗಳಿಂದಲೇತುಂಬಿದ್ದ ಸಭೆಯನ್ನುಉತ್ತೇಜಿಸಿದರು.ಇಂದಿನಯುವಜನರುಆಧುನಿಕತೆಯಆಡಂಬರದದಾಸರಾಗದೇಗ್ರಾಮದ ನಿಜ ಬದುಕಿನಸತ್ವವನ್ನೇ ಮೂರ್ತವಾಗಿಸಿಕೊಂಡಿರುವಜಾನಪದ ಲೋಕದಅನ್ವೇಷÀಣೆಯಲ್ಲೂತೊಡಗಬೇಕೆಂಬ ಸಲಹೆಯಿತ್ತರು.ವಿಶೇಷಆಹ್ವಾನಿತರಾಗಿ ಸಮಾರಂಭಕ್ಕೆಆಗಮಿಸಿದ್ದದಂಡಿನಶಿವರಗ್ರಾಮದ ಪ್ರಮುಖರಾದಗಂಗಾಧರಗೌಡರು ಹಾಗೂ ಶÀಂಕರೇಗೌಡರು ಸಭೆಯನ್ನುದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿಕಾಲೇಜುಯುಜಿಸಿಯ 12ಬಿ ಪರಿಚ್ಛೇದದಡಿಗುರುತಿಸಿಕೊಳ್ಳುವಲ್ಲಿ ಸಂಸದರು ನೆರವಾದದನ್ನು ಸ್ಮರಿಸಲಾಯಿತು.ಕಾಲೇಜಿನಸಿಬ್ಬಂದಿವರ್ಗಗ್ರಾಮಸ್ಥರೊಡಗೂಡಿಎಸ್. ಪಿ.ಮುದ್ದಹನುಮೇಗೌಡರವರನ್ನು, ಪ್ರೊ. ಪರಮಶಿವಮೂರ್ತಿಯವರನ್ನಾದಿಯಾಗಿ, ಗ್ರಾಮದ ಪದವಿ ಪೂರ್ವಕಾಲೇಜಿನರಾಜ್ಯಶಾಸ್ತ್ರಅಧ್ಯಾಪಕರಾದ ನಿವೃತ್ತಿಯಅಂಚಿನಲ್ಲಿರುವಶಿವಣ್ಣನವರನ್ನುಮತ್ತುಅದೇಕಾಲೇಜಿನಿಂದಇತ್ತೀಚೆಗೆ ವರ್ಗಾವಣೆಗೊಂಡಕನ್ನಡವಿಭಾಗದಶಿವಪ್ಪರವರನ್ನು ಸನ್ಮಾನಿಸಿಗೌರವಿಸಲಾಯಿತು. ಅಂತೆಯೇಕಳೆದ ಶೈಕ್ಷಣಿಕ ವರ್ಷದಲ್ಲಿ ವಿಶೇಷ ಸಾಧನೆಗೈದ ವಿದ್ಯಾರ್ಥಿಗಳನ್ನುಕಾಲೇಜಿನ ವತಿಯಿಂದ ಪುರಸ್ಕರಿಸಲಾಯಿತು.ಈ ಕಾರ್ಯಕ್ರಮವನ್ನು ಸಾಂಸ್ಕøತಿಕ ಸಂಚಾಲಕರಾದಎನ್. ಎಸ್.ರವಿಕುಮಾರ್‍ಅವರು ನಡೆಸಿಕೊಟ್ಟರು.ಸಮಾರಂಭದಅಧ್ಯಕ್ಷತೆಯನ್ನುಕಾಲೇಜಿನ ಪ್ರಾಂಶುಪಾಲರಾದಎನ್. ಪಿ.ಶಿವಾನಂದಯ್ಯವನವರು ವಹಿಸಿದ್ದರು.ಇತಿಹಾಸ ಪ್ರಾಧ್ಯಾಪಕರಾದಕೆ. ಲಕ್ಷ್ಮೀರಂಗಯ್ಯನವರು ಪ್ರಾಸ್ತಾವಿಕ ನುಡಿಗಳನ್ನಾಡಿದರು.ಕಾಲೇಜುಅಭಿವೃದ್ಧಿ ಸಮಿತಿಯ ಸದಸ್ಯರಾದಉಮೇಶ್‍ರವರು ಮತ್ತುಪದವಿ ಪೂರ್ವಕಾಲೇಜಿನ ಪ್ರಾಂಶುಪಾಲರಾದ ಪ್ರಕಾಶ್‍ರವರುಉಪಸ್ಥಿತರಿದ್ದರು.ತೃತೀಯ ಬಿ.ಕಾಂ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಎನ್.ಎಸ್.ಎಸ್‍ಅಧಿಕಾರಿಗಳಾದಶ್ರೀನಿವಾಸ್ ಟಿ. ಸ್ವಾಗತಿಸಿದರು.ರೆಡ್‍ರಿಬನ್‍ಅಧಿಕಾರಿರಾಣಿ ಬಿ. ಆರ್.ವಂದಿಸಿದರು.ಪ್ರಭಾಸ್ ನಿರೂಪಿಸಿದರು.ಉದ್ಘಾಟನಾ ಸಮಾರಂಭದಂತ್ಯದಲ್ಲಿ ವಿದ್ಯಾರ್ಥಿಗಳಿಂದ ಸಾಂಸ್ಕøತಿಕಕಾರ್ಯಕ್ರಮಗಳುಜರುಗಿದವು.ಕಾಲೇಜಿನ ಬೋಧಕ ಬೋಧಕೇತರ ವರ್ಗ ಶ್ರಮಿಸಿಏರ್ಪಡಿಸಿದ್ದ ಸಮಾರಂಭವು ಸುಂದರವಾಗಿ ಸಂಪನ್ನಗೊಂಡಿತು.
          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link