ಜಗಳೂರು ತಾಲ್ಲೂಕನ್ನು ಪುನಃ ಚಿತ್ರದುರ್ಗ ಜಿಲ್ಲೆಗೆ ಮರು ಸೇರ್ಪಡೆಗೊಳಿಸಬೇಕು-ನಿವೃತ್ತ ಪ್ರಾಂಶುಪಾಲ ಯಾದವರೆಡ್ಡಿ

ಜಗಳೂರು;

   ಮುಂದುವರಿದ ತಾಲ್ಲೂಕುಗಳ ಮಧ್ಯೆ ಸೌಲಭ್ಯ ಪಡೆಯುವುದು ಕಷ್ಟಕರದ ಕೆಲಸ. ಜಿಲ್ಲೆಯಲ್ಲಿ ಅತ್ಯಂತ ಹಿಂದುಳಿದ ತಾಲ್ಲೂಕಿಗೆ ಮೂಲ ಯೋಜನೆಗಳ ಜಾರಿ ಮಾಡುವಲ್ಲಿ ಸರ್ಕಾರಗಳು ವಿಫಲವಾಗಿದ್ದರಿಂದ ಜಗಳೂರು ತಾಲ್ಲೂಕನ್ನು ಪುನಃ ಚಿತ್ರದುರ್ಗ ಜಿಲ್ಲೆಗೆ ಮರು ಸೇರ್ಪಡೆಗೊಳಿಸಬೇಕೆಂದು ನಿವೃತ್ತ ಪ್ರಾಂಶುಪಾಲ ಯಾದವರೆಡ್ಡಿ ಒತ್ತಾಯಿಸಿದರು.

   ಜಗಳೂರು ತಾಲ್ಲೂಕು ಚಿತ್ರದುರ್ಗ ಜಿಲ್ಲೆಗೆ ಮರು ಸೇರ್ಪಡೆ ಹೋರಾಟ ಸಮಿತಿ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ನೇತೃತ್ವ ವಹಿಸಿ ತಹಶೀಲ್ದಾರ್ ಮೂಲಕ ಸಕಾರಕ್ಕೆ ಮನವಿ ಸಲ್ಲಿಸಿ ಅವರು ಮಾತನಾಡಿದರು.

   ಜಗಳೂರು ತಾಲ್ಲೂಕನ್ನು ದಾವಣಗೆರೆ ಜಿಲ್ಲೆಗೆ ಸೇರಿಸಿ 20 ವರ್ಷ ಕಳೆದರೂ ಸಹ ಅಭಿವೃದ್ದಿ ಅನ್ನುವುದು ಮರೀಚಿಕೆಯಾಗಿದೆ. ರಾಜ್ಯದಲ್ಲಿಯೇ ಅತ್ಯಂತ ಬರಪೀಡಿತ ಪ್ರದೇಶವಾದರೂ ಯಾವುದೇ ಅಗತ್ಯ ಸೌಲಭ್ಯಗಳು ದೊರಯುತ್ತಿಲ್ಲ. ಇದಕ್ಕೆ ಕಾರಣ ನೀರಾವರಿ ಪ್ರದೇಶ ವ್ಯಾಪ್ತಿಯಲ್ಲಿನ ದಾವಣಗೆರೆ ಜಿಲ್ಲೆಗೆ ತಾಲ್ಲೂಕು ಸೇರ್ಪಡೆಯಾಗಿರುವುದೇ ಕಾರಣವಾಗಿದೆ. ಪಕ್ಷಾತೀತ, ಜಾತ್ಯಾತೀತ ಹೋರಾಟದ ಮೂಲಕ ಸರಕಾರದ ಗಮನ ಸೆಳೆಯಲು ಸಂಘಟಿತ ಹೋರಾಟ ಅಗತ್ಯವಾಗಿದ್ದು, ರಾಜ್ಯ ಸರಕಾರ ಕಣ್ತೆರೆಯಬೇಕೆಂದರು.

  ಮಾಜಿ ಶಾಸಕ ಎಚ್.ಪಿ.ರಾಜೇಶ್ ಮಾತನಾಡಿ, ಈ ಹಿಂದೆ ಶಾಸಕರಾಗಿ ಆಡಳಿತ ನಡೆಸಿದ್ದ ಅಶ್ವತ್ಥರೆಡ್ಡಿ, ಎಂ.ಬಸಪ್ಪನವರು ಜಗಳೂರು ತಾಲ್ಲೂಕನ್ನು ದಾವಣಗೆರೆ ಜಿಲ್ಲೆಗೆ ಸೇರ್ಪಡೆಗೊಳಿಸುವುದನ್ನು ವಿರೋಧಿಸಿದ್ದರು. ಅದು ಬಿಟ್ಟರೆ ಕಳೆದ 20 ವರ್ಷಗಳ ಕಾಲ ಇದೇ ಸ್ಥಿತಿ ಮುಂದುವರೆದಿದೆ. ನಾನು ಅಧಿಕಾರದಲ್ಲಿದ್ದ ಅವಧಿಯಲ್ಲಿ ನನ್ನ ಕೈಲಾದಷ್ಟು ತಾಲ್ಲೂಕಿನ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ನಡೆದಿದೆ. ಬಡಪೀಡಿತ ಪ್ರದೇಶ ಅಭಿವೃದ್ಧಿಯಾಗಬೇಕಾದರೆ ಮೂಲ ಯೋಜನೆಗಳಾದ ಭದ್ರಾ ಮೇಲ್ದಂಡೆ ಯೋಜನೆ, 52 ಕೆರೆಗಳಿಗೆ ನೀರು ತುಂಬಿಸುವ ಯೋಜನೆ, ರೈಲು ಮಾರ್ಗ ಯೋಜನೆಗಳು ಜಾರಿಯಾಗಬೇಕಾದರೆ ಜಗಳೂರು ತಾಲ್ಲೂಕು ಚಿತ್ರದುರ್ಗ ಜಿಲ್ಲೆಗೆ ಮರು ಸೇರ್ಪಡೆ ಮಾಡುವ ಅಗತ್ಯತೆ ಇದೆ ಎಂದರು.

   ಈ ಸಂದರ್ಭದಲ್ಲಿ ಹೋರಾಟ ಸಮಿತಿಯ ಮುಖಂಡರಾದ ಸಿ.ತಿಪ್ಪೇಸ್ವಾಮಿ, ತಿಮ್ಮಾರೆಡ್ಡಿ, ಓಬಣ್ಣ, ಲಕ್ಷ್ಮಣ, ಲುಕ್ಮಾನ್‍ಖಾನ್, ಆರ್.ಓಬಳೇಶ್, ನಾಗಲಿಂಗಪ್ಪ, ಲಿಂಗರಾಜು, ಮಹಾಲಿಂಗಪ್ಪ, ಕರವೇ ಅಧ್ಯಕ್ಷ ಮಹಾಂತೇಶ್, ಜಗದೀಶ್, ಶ್ರೀಹರ್ಷ, ಹಟ್ಟಿ ತಿಪ್ಪೇಸ್ವಾಮಿ, ಬಿ.ಟಿ.ಹನುಮಂತರೆಡ್ಡಿ, ರಮೇಶ್‍ರೆಡ್ಡಿ, ಸತೀಶ್‍ರೆಡ್ಡಿ, ಮಂಜುನಾಥ್ ಸೇರಿದಂತೆ ಇತರರು ಇದ್ದರು.

Recent Articles

spot_img

Related Stories

Share via
Copy link