ಜನತೆಗೆ ಬಿಜೆಪಿ ಅಭಿವೃದ್ಧಿಯ ಬಗ್ಗೆ ಮನದಟ್ಟು ಮಾಡಬೇಕು – ಶಾಸಕ

 ಜಗಳೂರು:

      ಕ್ಷೇತ್ರದ ಶಾಸಕರನ್ನು ಅಧಿಕ ಮತಗಳನ್ನು ನೀಡಿ ಆಯ್ಕೆ ಮಾಡಿರುವ ಪಟ್ಟಣದ ಜನತೆಗೆ ಬಿಜೆಪಿ ಅಭಿವೃದ್ಧಿಯ ಬಗ್ಗೆ ವಿಶ್ವಾಸವಿದ್ದು, ಮತದಾರರ ಮನೆ ಮನೆಗೆ ಮನದಟ್ಟು ಮಾಡಬೇಕೆಂದು ಕ್ಷೇತ್ರದ ಶಾಸಕ ಎಸ್.ವಿ.ರಾಮಚಂದ್ರ ಹೇಳಿದರು.

      ಪಟ್ಟಣದಲ್ಲಿ ಕಾಂಗ್ರೇಸ್ ಮುಖಂಡರು ಮಾಜಿ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷರನ್ನು ಬಿಜೆಪಿಗೆ ಸೇರ್ಪಡೆ ಹಾಗೂ ಪಟ್ಟಣ ಪಂಚಾಯಿತಿ ಬಿಜೆಪಿ ಅಭ್ಯರ್ಥಿಗಳ ಚುನಾವಣೆ ಪ್ರಚಾರ ಸಂಬಂದ ಕರೆದಿದ್ದ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

      ಪಟ್ಟಣ ಪಂಚಾಯಿತಿಯಲ್ಲಿ ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ ದ್ವಿಮುಖ ರಸ್ತೆ ,ಕುಡಿಯುವ ನೀರಿನ ವ್ಯವಸ್ಥೆ, ಖಾಸಗಿ ಹಾಗೂ ಸರ್ಕಾರಿ ಬಸ್ ನಿಲ್ದಾಣ, ಪಾರ್ಕಗಳು, ಮನೆಗಳು ಸೇರಿದಂತೆ ಜನರೊಂದಿಗೆ ನಿರಂತರ ಸಂಪರ್ಕ ಹೊಂದುವ ಮೂಲಕ ಮಾಧರಿ ಪಟ್ಟಣ ಪಂಚಾಯಿತಿ ಮಾಡಲು ಶ್ರಮಿಸಿದ್ದೇನೆ. ಬಿಜೆಪಿ ಶಾಸಕರು, ಸಂಸದರು ಇದ್ದಾರೆ. ಹೆಚ್ಚಿನ ಅಭಿವೃದ್ಧಿಗೆ ಬಿಜೆಪಿ ಅಭ್ಯರ್ಥಿಗಳು ಪಟ್ಟಣದ ಮತದಾರರಲ್ಲಿ ಮನೆ ಮನೆಗೆ ಹೋಗಿ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಹಾಗೂ ಬಿಜೆಪಿ ಸರ್ಕಾರ ಇದ್ದಾಗ ಮಾಡಿರುವ ಅಭಿವೃದ್ಧಿ ಕಾರ್ಯಗಳು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಾಡಿರುವ ಜನಪ್ರಿಯ ಕೆಲಸಗಳನ್ನು ಮನ ಮುಟ್ಟುವಂತೆ ತಿಳಿಸಬೇಕೆಂದು ಬಿಜೆಪಿ ಅಭ್ಯರ್ಥಿಗಳಿಗೆ ಕಿವಿ ಮಾತು ಹೇಳಿದರು. ಬಿಜೆಪಿ ಅಭಿವೃದ್ಧಿಗೆ ಮನ ಸೋತು ಕಾಂಗ್ರೇಸ್ ಮುಖಂಡರುಗಳು ಮಾಜಿ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷರಾದ ಚಂದ್ರಪ್ಪ, ಎರಡು ದಿನಗಳ ಹಿಂದೆ ಮಹಾಲಿಂಗಪ್ಪ ಸೇರಿದಂತೆ ಮೊದಲಾದವರು ನನ್ನ ಸಮ್ಮುಖದಲ್ಲಿ ಬಿಜೆಪಿ ಸೇರಿದ್ದಾರೆ. ಈ ಬಾರಿ ಜಗಳೂರು ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದವರು ವಿಶ್ವಾಸವ್ಯಕ್ತ ಪಡಿಸಿದರು.

      ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯರಾದ ಎಸ್.ಕೆ.ಮಂಜುನಾಥ, ತಾ.ಪಂ.ಸದಸ್ಯರುಗಳಾದ ಸಿದ್ದೇಶ್, ಬಸವರಾಜು, ಶಂಕ್ರನಾಯ್ಕ್, ಎ.ಪಿ.ಎಂ.ಸಿ.ಸದಸ್ಯರಾದ ಸುರಡ್ಡಿಹಳ್ಳಿ ಶರಣಪ್ಪ, ಮಾಜಿ ಜಿ.ಪಂ.ಸದಸ್ಯರಾದ ಹೆಚ್.ನಾಗರಾಜು, ಬಿಜೆಪಿ ಯುವ ಮೋರ್ಚದ ಅಧ್ಯಕ್ಷ ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಜೆ.ವಿ.ನಾಗರಾಜು, ಸೋಮನಹಳ್ಳಿ ಶ್ರೀನಿವಾಸ್, ವಕೀಲರಾದ ಮಂಜಣ್ಣ, ಬಿಸ್ತುವಳ್ಳಿ ಬಾಬು, ಬಿಜೆಪಿ ಅಭ್ಯರ್ಥಿಗಳು ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link