ಜನಪದ ಕಲಾಯಾತ್ರೆ

ತುರುವೇಕೆರೆ:

            ಜನಪದ ಮತ್ತು ರಂಗಭೂಮಿ ಕಲೆ ಅಳಿವಿನ ಅಂಚಿನಲ್ಲಿದ್ದು ಇತ್ತೀಚಿನ ದಿನಗಳಲ್ಲಿ ಇಂತಹ ಸಂಘಸಂಸ್ಥೆಗಳು ಸಮಾವೇಶ ನಡೆಸುವುದು ಕಷ್ಟ ಸಾದ್ಯವಾಗಿದೆ ಎಂದು ತುಮಕೂರು ಕ.ಸಾ.ಪ ಜಿಲ್ಲಾಧ್ಯಕ್ಷರಾದ ಬ.ಹ.ರಮಾಕುಮಾರಿ ಕಳವಳ ವ್ಯಕ್ತಪಡಿಸಿದರು.
            ಕರ್ನಾಟಕ ರಾಜ್ಯ ಕಲಾವಿದರ ಒಕ್ಕೂಟ, ಕನ್ನಡ ಮತ್ತು ಸಂಸ್ಕತಿ ಇಲಾಖೆ, ಕರ್ನಾಟಕ ಸರ್ಕಾರ ಸೇರಿದಂತೆ ಇತರೆ ಸಹಕಾರದ ವತಿಯಿಂದ ತುರುವೇಕೆರೆ ವಿಧಾನ ಸಭಾ ಕ್ಷೇತ್ರದ ಕಲ್ಲೂರು ಗ್ರಾಮದಲ್ಲಿ ಏರ್ಪಡಿಸಿದ್ದ ಜನಪದ ಕಲಾಯಾತ್ರೆ, ನಾಟಕೋತ್ಸವ ಹಾಗೂ ರಾಜ್ಯ ಕಲಾವಿದರ ಬೃಹತ್ ಸಾಂಸ್ಕøತಿಕ ಸಮಾವೇಶದಲ್ಲಿ ಪಾಲ್ಗೋಂಡು ಮಾತನಾಡಿದ ಅವರು ಮಾದ್ಯಮಗಳಲ್ಲಿ ಪ್ರಕಟವಾಗಿರುವಂತೆ ಬೆಂಗಳೂರಿನ ಕೆಲವೇ ಸಂಘ ಸಂಸ್ಥೆಗಳಿಗೆ ಅನುಧಾನ ಬಿಡುಗಡೆ ಮಾಡಿರುವುದು ಎಷ್ಠರ ಮಟ್ಟಿಗೆ ಸರಿ. ಗ್ರಾಮೀಣ ಭಾಗದಲ್ಲಿ ಸಂಘಟಿತಗೊಂಡಂತಹ ಸಂಘಸಂಸ್ಥೆಗಳನ್ನು ಗುರ್ತಿಸಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಗರಿಷ್ಟ ಪ್ರಮಾಣದಲ್ಲಿ ಪ್ರೋತ್ಸಾಹ ನೀಡಬೇಕಾಗಿದೆ. ಗ್ರಾಮೀಣ ಭಾಗದ ಜನಪದ ಮತ್ತು ರಂಗಭೂಮಿ ಕಲಾವಿದರು ಇಂತಹ ಸಂಘಟನೆಗಳೊಂದಿಗೆ ಒಗ್ಗೂಡಿ ಸರ್ಕಾರದಿಂದ ಬರುವ ಸವಲತ್ತುಗಳನ್ನು ಸದುಪಯೋಗಪಡಿಸಿಕೊಳ್ಳಿ ಎಂದರು.
           ಕರ್ನಾಟಕ ರಾಜ್ಯ ಕಲಾವಿದರ ಒಕ್ಕೂಟದ ರಾಜ್ಯಾಧ್ಯಕ್ಷ ಗುಬ್ಬಿವೀರೇಶ್ ಪ್ರಾಸ್ತಾವಿಕ ನುಡಿಗಳನ್ನಾಡಿ ಇಡೀ ರಾಜ್ಯಾದ್ಯಂತ 15 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಜನಪದ ಮತ್ತು ರಂಗಭೂಮಿ ಕಲಾವಿದರನ್ನು ಸಂಘಟಿಸಿ ಅವುಗಳ ಮುಖಾಂತರ ಸಮವೇಶಗಳನ್ನು ನಡೆಸುವುದರೊಂದಿಗೆ ಕಲಾವಿದರ ಶಕ್ತಿ ವೃದ್ದಿಗೊಳಿಸುತ್ತಾ ಬರುತ್ತಿದ್ದು ಮುಂದೆ ನಡೆಸುವ ಸಮಾವೇಶ ಹಾಗು ಹೋರಾಟಗಳಲ್ಲಿ ಲಕ್ಷಾಂತರ ಕಲಾವಿದರು ಕೈಜೋಡಿಸುವಂತೆ ಮನವಿ ಮಾಡಿದರಲ್ಲದೆ ಇತ್ತೀಚಿನ ದಿನಗಳಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಕಠಿಣ ನಿಯಮಗಳನ್ನು ಜಾರಿಗೆ ತರುವ ಮೂಲಕ ಪ್ರಾಮಾಣಿಕ ಸಂಘಟನೆಗಳಿಗೆ ಪ್ರೋತ್ಸಹ ನೀಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.
ಇದೇ ಸಂಧರ್ಭದಲ್ಲಿ ಗ್ರಾಮೀಣ ಭಾಗದ ಅನೇಕÀ ಕಲಾವಿದರಿಗೆ “ರಂಗ ಕಲಾರತ್ನ ಹಾಗು ಜನಪದ ರತ್ನ” ಬಿರುದು ನೀಡಿ ಸನ್ಮಾನಿಸಲಾಯಿತು.
          ಕಾರ್ಯಕ್ರಮಕ್ಕೂ ಮೊದಲು ಗ್ರಾಮದ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಾಲಯದಿಂದ ಕಲಾಯಾತ್ರೆ ಪ್ರಾರಂಭಗೊಂಡು ನಂದಿದ್ವಜ, ಚಿಟ್ಟಮೇಳ, ವೀರಗಾಸಿ, ಕಹಳೆ, ನಾಸಿಕ್ ಡೋಲ್. ಕೀಲುಕುದುರೆ, ಸೋಮನಕುಣಿತ, ಕೋಲಾಟ, ತತ್ವಪದ, ಅರೆವಾದ್ಯ, ಜಾನಪದ, ಭಜನಾ ತಂಡಗಳು, ಗಾರುಡಿಗೊಂಬೆ, ಗಾಯನತಂಡಗಳು, ರಂಗಗೀತೆತಂಡಗಳು ಸೇರಿದಂತೆ ನೂರಾರು ಜಾನಪದ ಕಲಾತಂಡಗಳೊಂದಿಗೆ ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯಿತು. ಸಂಜೆ 7 ಕ್ಕೆ ಅಣ್ಣಯ್ಯಪ್ಪ ಸಂಗಡಿಗರಿಂದ ಗಂಗೇಗೌರಿ ಎಂಬ ಸುಂದರ ಪೌರಾಣಿಕ ನಾಟಕ ಮನೋಜ್ಞವಾಗಿ ಮೂಡಿಬಂತು.
           ಕಾರ್ಯಕ್ರಮದಲ್ಲಿ ಬೆ. ಗ್ರಾ. ಜಿಲ್ಲಾ ಕಲಾವಿದರ ಸಂಘದ ಅಧ್ಯಕ್ಷ ರಬ್ಬನಹಳ್ಳಿ ಕೆಂಪಣ್ಣ, ತುಮಕೂರು ಜಿಲ್ಲಾ ಒಕ್ಕೂಟದ ಅಧ್ಯಕ್ಷ ಚೆಲುವರಾಜು, ಮೇಘಶ್ಯಾಮ ಮಹಿಳಾ ಕಲಾವಿದರ ಸಂಘದ ಅಧ್ಯಕ್ಷೆ ರಮ್ಯಮೋಹನ್, ತಾ.ಪಂ. ಮಜಿ ಅಧ್ಯಕ್ಷೆ ಭಾರತಿಸುರೇಶ್, ತುರುವೇಕೆರೆ ತಾ|| ಒಕ್ಕೂಟದ ಕಲ್ಲೂರು ಶ್ರೀನಿವಾಸ್, ವಿ.ತೇಜಸ್ ಕುಮಾರ್, ತೆವಡೆಹಳ್ಳಿ ರುದ್ರೇಶ್ ಸೇರಿದಂತೆ ಅನೇಕ ಕಲಾವಿದರು ಉಪಸ್ಥಿತರಿದ್ದರು.

Recent Articles

spot_img

Related Stories

Share via
Copy link