ಜನಪರ ಪ್ರಣಾಳಿಕೆಗೆ ಕ್ಷೇತ್ರದ ಮತದಾರರು ಕಾರಣ :ಡಾ.ಜಿ.ಪರಮೇಶ್ವರ್

ಕೊರಟಗೆರೆ :

     ಕ್ಷೇತ್ರದ ಜನರ ಸಾಮಾಜಿಕ ಸಮಸ್ಯೆಗಳು, ಅವರ ಕೂಗಿನ ಆಧಾರದ ವೇಳೆ ಉತ್ತಮವಾದ ಪ್ರಣಾಳಿಕೆಯನ್ನು ಸಿದ್ದಗೊಳಿಸಲು ಸಾಧ್ಯವಾಯಿತು. ಇದು ರಾಜ್ಯಕ್ಕೆ ಕೊರಟಗೆರೆಯ ಮತದಾರರು ಕೊಟ್ಟ ಕೊಡುಗೆ ಡಾ.ಜಿ.ಪರಮೇಶ್ವರ್ ತಿಳಿಸಿದರು.

     ಅವರು ಗುರುವಾರ ಕೋಳಾಲ, ಚಿನ್ನಹಳ್ಳಿ, ಮಾವತ್ತೂರು ಮತ್ತು ವಜ್ಜನ ಕುರಿಕೆ ಗ್ರಾಮ ಪಂಚಾಯ್ತಿ ಕೇಂದ್ರಗಳಲ್ಲಿ ಚುನಾವಣಾ ಪ್ರಚಾರದ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿದಾಗ ಮೇಲಿನಂತೆ ತಿಳಿಸಿದರು. ಜನರಲ್ಲಿ ನನ್ನ ಬಗ್ಗೆ ನಂಬಿಕೆ-ವಿಶ್ವಾಸ ಇರುವುದನ್ನು ಕ್ಷೇತ್ರದಲ್ಲಿ ಸಂಚಾರ ಮಾಡಿದಾಗ ಕಂಡುಕೊAಡಿದ್ದೇನೆ. ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿರುವ ಅಂಶಗಳು ರಾಜ್ಯಕ್ಕೆ ಅಲ್ಲದೆ ಕೊರಟಗೆರೆಯ ಧ್ವನಿಗೂ ಆದ್ಯತೆ ನೀಡಿದಂತೆಯೆ ಆಗಿದೆ ಎಂದರು.

    ಚುನಾವಣಾ ಪ್ರಚಾರದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಜಿ.ಪರಮೇಶ್ವರ್ ಅವರು, ಜನರಲ್ಲಿ ನನ್ನ ಬಗ್ಗೆ ನಂಬಿಕೆ-ವಿಶ್ವಾಸ ಇರುವುದನ್ನು ಕ್ಷೇತ್ರದಲ್ಲಿ ಸಂಚಾರ ಮಾಡಿದಾಗ ಕಂಡುಕೊAಡಿದ್ದೇನೆ. ಪ್ರಣಾಳಿಕೆ ಯಲ್ಲಿ ಪ್ರಸ್ತಾಪಿಸಿರುವ ಅಂಶಗಳು ರಾಜ್ಯಕ್ಕೆ ಅಲ್ಲದೆ ಕೊರಟಗೆರೆಯ ಧ್ವನಿಗೂ ಆದ್ಯತೆ ನೀಡಿದಂತೆಯೆ ಆಗಿದೆ ಎಂದರು.

   ಬಡವರ್ಗಕ್ಕೆ ಅಗತ್ಯ 10 ಕೆ.ಜಿ. ಪಡಿತರ ಧಾನ್ಯ, ಗ್ಯಾಸ್ ಬೆಲೆ ಇಳಿಕೆಗೆ ಕ್ರಮ, ಅಭಿವೃದ್ಧಿಗೆ ಒತ್ತು ಮತ್ತು ಭ್ರಷ್ಟಾಚಾರ ಮುಕ್ತ ಆಡಳಿತಕ್ಕಾಗಿ ಅಧಿಕಾರ ನೀಡುವಂತೆ ಮತದಾರರಲ್ಲಿ ಮನವಿ ಮಾಡಿದರು. ಕೋಳಾಲ ಮತ್ತು ಚಿನ್ನಹಳ್ಳಿ ಪಂಚಾಯ್ತಿಗಳಲ್ಲಿ ಮತ ಯಾಚನೆ ಮಾಡುವಾಗ ಹಿರಿಯ ಮಹಿಳೆಯರು ಆಶೀರ್ವದಿಸಿದ್ದು ವಿಶೇಷವಾಗಿತ್ತು. ಪ್ರೀತಿ-ಆದರದಿಂದ ಮನೆಗೆ ಬರಮಾಡಿಕೊಂಡು, ಫಲಗಳನ್ನು ನೀಡಿ, ಬೆಂಬಲ ವ್ಯಕ್ತಪಡಿಸಿದರು.

     ಕೊರೋನದಂತಹ ಸಂಕಷ್ಟದ ಸಮಯ ಸೇರಿದಂತೆ 5 ವರ್ಷಗಳಲ್ಲಿ ಕ್ಷೇತ್ರದ ಮೂಲೆಮೂಲೆಯಲ್ಲಿ ಸುತ್ತಾಡಿ, ಜನರ ನೋವಿನ ಕೂಗಿಗೆ ಸ್ಪಂದಿಸಿದ್ದೇನೆ. ನಾನು ಯಾವುದೇ ವೈಯಕ್ತಿಕ ಹಿತಾಸಕ್ತಿಗೆ ಜನರನ್ನು ಬಳಸಿಕೊಳ್ಳದೆ ಕಾಯಕ ಮಾಡಿದ್ದೇನೆ. ಅದಕ್ಕೆ ಕೂಲಿ ರೂಪದಲ್ಲಿ ನನಗೆ ತಮ್ಮ ಮತ ನೀಡಿ ಎಂದು ಮತದಾರರಲ್ಲಿ ಮನವಿ ಮಾಡಿದರು.

ಮೆಟ್ರೋ ಯೋಜನೆ ಪ್ರಸ್ತಾಪ :

      ನೀರಾವರಿಗೆ ಎತ್ತಿನ ಹೊಳೆ ಯೋಜನೆ ನಮ್ಮ ತಾಲ್ಲೂಕಿನ ಮೂಲಕವೆ ಹಾದು ಹೋಗುತ್ತದೆ. ಈ ಯೋಜನೆಯಿಂದ 109 ಕೆರೆಗಳಿಗೆ ನೀರು ತುಂಬಿಸಲು ಅನುಕೂಲವಾಗಲಿದೆ. ತುಮಕೂರು ನಗರಕ್ಕೆ ಹೊಂದಿಕೊಂಡಿರುವ ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಇನ್ನೂ ಹೆಚ್ಚಿನ ಪ್ರಗತಿ ತರಲು ಮೆಟ್ರೋ ಸೇವೆಯನ್ನು ಈ ಪ್ರದೇಶಕ್ಕೆ ವಿಸ್ತರಣೆ ಮಾಡುವ ಅಂಶಗಳನ್ನು ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ತಂದಿರುವುದು ಕ್ಷೇತ್ರದ ಅಭಿವೃದ್ಧಿಗೆ ಪೂರಕವಲ್ಲವೇ ಎಂದು ವಿರೋಧ ಪಕ್ಷಗಳ ಊಹಾಪೋಹ ಹೇಳಿಕೆಗಳಿಗೆ ತಿರುಗೇಟು ನೀಡಿದರು.

ಸಿದ್ದು ಮತ್ತು ನನ್ನ ನಡುವೆ ಕಿಡಿಕೇಡಿಗಳ ಕಿಡಿ :

     ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನನ್ನ ನಡುವೆ ಚುನಾವಣೆಗಳು ಬಂದಾಗ ಬಿರುಕು- ಭಿನ್ನಾಭಿಪ್ರ‍್ರಾಯಗಳನ್ನು ಉಂಟು ಮಾಡುವ ಕೆಲಸ ಮಾಡುತ್ತಾರೆ. ಇಂತಹ ಕಿಡಿಗೇಡಿ ಕೃತ್ಯಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಅವರು, ಯಾವತ್ತು ಆ ತರಹದ ಭಾವನೆ ಇಲ್ಲ. ಈ ಬಗ್ಗೆ ಕೊರಟಗೆರೆಯಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಸಿದ್ದರಾಮಯ್ಯನವರೇ ಮಾತನಾಡಿದ್ದಾರೆ. ಪರಮೇಶ್ವರ ಗೆದ್ದರೆ ನಾನು ಗೆದ್ದಂತೆ ಎಂದು ದ್ವಿರುಕ್ತಿ ರೀತಿಯಲ್ಲಿ ಒತ್ತಿ ಒತ್ತಿ ಹೇಳಿದ್ದಾರೆ. ಇದೇ ಮಾತನ್ನು ಮಧುಗಿರಿ ಕ್ಷೇತ್ರದ ಅಭ್ಯರ್ಥಿ ರಾಜಣ್ಣ ಕೂಡ ಹೇಳಿದ್ದಾರೆ. ಈ ಬಾರಿ ಅಂತಹ ಗಾಳಿ ಸುದ್ದಿಗಳ ಪ್ರಚಾರಕ್ಕೆ ತೆರೆ ಬಿದ್ದಿದೆ ಎಂದು ಪರಮೇಶ್ವರ ನುಡಿದರು.

    ಕೊರಟಗೆರೆ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ 6 ಹೋಬಳಿಗಳಲ್ಲಿ ಪ್ರತ್ಯೇಕ ತಂಡಗಳು ಕಾಂಗ್ರೆಸ್ ಅಭ್ಯರ್ಥಿ ಜಿ.ಪರಮೇಶ್ವರ ಪರ ಏಕ ಕಾಲಕ್ಕೆ ಚುನಾವಣಾ ಪ್ರಚಾರಕ್ಕೆ ಧುಮಕಿವೆ. ಆಯಾ ಹೋಬಳಿ ಮುಖಂಡರು ತಮ್ಮ ಪಕ್ಷದ ಅಭ್ಯರ್ಥಿ ಪರ ಮನೆಮನೆಗೆ ತೆರಳಿ ಮತ ಯಾಚನೆ ಮಾಡಿದರು.

ಪಕ್ಷಕ್ಕೆ ಸೇರ್ಪಡೆ:

     ಶಾಸಕ ಪರಮೇಶ್ವರ ಅವರ ಕಾರ್ಯವೈಖರಿಯನ್ನು ಮೆಚ್ಚಿ ಅನ್ಯ ಪಕ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವವ ಸಂಖ್ಯೆ ದಿನೆ ದಿನೆ ಹೆಚ್ಚಾಗುತ್ತಿದ್ದು, ಕ್ಷೇತ್ರದಲ್ಲಿ ಮಿಂಚಿನ ಸಂಚಾರ ಉಂಟಾಗಿದೆ. ಮಾದವಾರ ಗ್ರಾಮದ ಜೆಡಿಎಸ್ ಪಕ್ಷದ ಯುವಕರ ತಂಡ ಡಾ.ಜಿ. ಪರಮೇಶ್ವರ ರವರ ಕಾರ್ಯಗಳನ್ನು ಮೆಚ್ಚಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.ಬ್ಲಾಕ್ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳು, ಹಿರಿಯ ಮುಖಂಡರು, ಪಕ್ಷದ ಚುನಾಯಿತ ಹಾಲಿ ಹಾಗೂ ಮಾಜಿ ಜನಪ್ರತಿನಿಧಿಗಳು ಪ್ರಚಾರ ಸಭೆಗಳಲ್ಲಿ ಪಾಲ್ಗೊಂಡಿದ್ದರು.

 

Recent Articles

spot_img

Related Stories

Share via
Copy link