ಜನಪ್ರತಿನಿಧಿಗಳು ಆಸ್ತಿ ವಿವರ ಸಲ್ಲಿಸಲು ಹಿಂದೇಟು ಹಾಕುತ್ತಿದ್ದಾರೆ : ಲೋಕಾಯುಕ್ತ

ಬೆಂಗಳೂರು:

     ಲೋಕಾಯುಕ್ತ ಸಂಸ್ಥೆಗೆ ಚುನಾಯಿತ ಜನಪ್ರತಿನಿಧಿಗಳು ಕಡ್ಡಾಯವಾಗಿ ಆಸ್ತಿ ವಿವರ ಸಲ್ಲಿಸಲು ಜೂ.30 ಕಡೆಯ ದಿನವಾಗಿತ್ತು. ಆದರೆ, ಇದುವರೆಗೂ ಕೇವಲ 70 ಮಂದಿ ಜನಪ್ರತಿನಿಧಿಗಳು ಮಾತ್ರ ತಮ್ಮ ಆಸ್ತಿ ವಿವರ ಸಲ್ಲಿಸಿದ್ದಾರೆ. ಉಳಿದವರು ಸಲ್ಲಿಸಲು ಹಿಂದೇಟು ಹಾಕುತ್ತಿದ್ದಾರೆ.

     ಪ್ರತಿ ವರ್ಷ ಶೇ.70 ಶಾಸಕರು ಮತ್ತು ವಿಧಾನಪರಿಷತ್ ಸದಸ್ಯರು ಆಸ್ತಿ ವಿವರ ಸಲ್ಲಿಸಲು ನಿರ್ಲಕ್ಷ್ಯ ತೋರುತ್ತಿರುವುದು ಕಂಡು ಬಂದಿದೆ. 2022-23ನೇ ಸಾಲಿನಲ್ಲಿ 60 ಶಾಸಕರು ಮತ್ತು 36 ವಿಧಾನ ಪರಿಷತ್ ಸದಸ್ಯರು ವಿವರ ಸಲ್ಲಿಸಿರಲ್ಲ. 2021-22 ಸಾಲಿನಲ್ಲಿ 34 ಶಾಸಕರು ಮತ್ತು 24 ವಿಧಾನಪರಿಷತ್ ಸದಸ್ಯರು ಸೇರಿ ಒಟ್ಟು 58 ಜನಪ್ರತಿನಿಧಿಗಳು ತಮ್ಮಆಸ್ತಿ ವಿವರ ಸಲ್ಲಿಸಿರಲಿಲ್ಲ.

     ಲೋಕಾಯುಕ್ತಕ್ಕೆ ಜನಪ್ರತಿನಿಧಿಗಳು ಆಸ್ತಿ ವಿವರ ಸಲ್ಲಿಸದಿದ್ದರೆ ಲೋಕಾಯುಕ್ತರು ಸರ್ಕಾರದ ಮುಖ್ಯ ಕಾರ್ಯದರ್ಶಿ ಗಮನಕ್ಕೆ ತರುತ್ತಾರೆ. ಬಳಿಕ ನೋಟಿಸ್ ಜಾರಿಗೊಳಿಸಿ ಆಸ್ತಿ ವಿವರ ಸಲ್ಲಿಕೆಗೆ ಕಾಲವಕಾಶ ನೀಡಲಾಗುತ್ತದೆ. ನಿಗದಿತ ಕಾಲಾವಕಾಶದಲ್ಲಿ ವಿವರ ಸಲ್ಲಿಸದಿದ್ದರೆ ಲೋಕಾಯುಕ್ತ ಸಂಸ್ಥೆಯಿಂದ ಜನಪ್ರತಿನಿಧಿಗೆ ನೋಟಿಸ್​ಗಳನ್ನು ಜಾರಿಗೊಳಿಸಲಾಗುತ್ತದೆ. ನೋಟಿಸ್​ಗೂ ಪ್ರತಿಕ್ರಿಯೆ ನೀಡದಿದ್ದಲ್ಲಿ ಅಂತಹ ಹೆಸರನ್ನು ರಾಜ್ಯ ಮಟ್ಟದ 3 ದಿನ ಪತ್ರಿಕೆಗಳಲ್ಲಿ ಪ್ರಕಟಿಸಲಾಗುತ್ತದೆ.

     ಇದಕ್ಕೂ ಬಗ್ಗದಿದ್ದರೆ ರಾಜ್ಯಪಾಲರ ಗಮನಕ್ಕೆ ತರುತ್ತಾರೆ. ಅವರು ಸಂಬಂಧಿಸಿದ ಜನಪ್ರತಿನಿಧಿಗಳ ವಿವರಗಳನ್ನು ಸದನದ ಮುಂದೆ ತರುತ್ತಾರೆ. ಸದನದಲ್ಲಿ ಆಸ್ತಿ ವಿವರ ಸಲ್ಲಿಸುವಂತೆ ಸೂಚಿಸಲಾಗುತ್ತದೆ. ಇದನ್ನು ಹೊರತುಪಡಿಸಿದರೆ ಆಸ್ತಿ ವಿವರ ಸಲ್ಲಿಸದ ಜನಪ್ರತಿನಿಧಿಗಳಿಗೆ ಯಾವುದೇ ದಂಡವು ಇಲ್ಲ ಮತ್ತು ಶಿಕ್ಷೆಯೂ ಆಗುವುದಿಲ್ಲ. ಇದರಿಂದಲೇ ಬಹುತೇಕ ಶಾಸಕರು ತಮ್ಮ ಆಸ್ತಿ ವಿವರನ್ನು ಸಲ್ಲಿಸುವಲ್ಲಿ ನಿರ್ಲಕ್ಷ್ಯ ವಹಿಸುತ್ತಾರೆ.

  ಕರ್ನಾಟಕ ಲೋಕಾಯುಕ್ತ ಕಾಯ್ದೆಯ ಸೆಕ್ಷನ್ 22ರ ಪ್ರಕಾರ, ಪ್ರತಿಯೊಬ್ಬ ಸಾರ್ವಜನಿಕ ಸೇವಕನು ಪ್ರತಿ ವರ್ಷದ ಜೂನ್ 30ರೊಳಗೆ ಆಸ್ತಿ ಮತ್ತು ಬಾಧ್ಯತೆಯ ವಿವರಗಳನ್ನು ಸಲ್ಲಿಸಬೇಕು. ಪ್ರಮಾಣಪತ್ರ ಸಲ್ಲಿಸಲು ವಿಫಲರಾದ ಸಾರ್ವಜನಿಕ ಸೇವಕರಿಗೆ ಸಂಬಂಧಿಸಿದಂತೆ ಲೋಕಾಯುಕ್ತರು ಸಕ್ಷಮ ಪ್ರಾಧಿಕಾರಕ್ಕೆ (ರಾಜ್ಯಪಾಲರು) ವರದಿ ಸಲ್ಲಿಸಬೇಕು. ಅಂತಹ ಶಾಸಕರ ಹೆಸರನ್ನು ರಾಜ್ಯದಾದ್ಯಂತ ಪ್ರಸರಣ ಹೊಂದಿರುವ ಮೂರು ದಿನಪತ್ರಿಕೆಗಳಲ್ಲಿ ಪ್ರಕಟಿಸಬೇಕು ಎಂದು ಹೇಳಲಾಗಿದೆ.

  ಐಪಿಸಿ ಸೆಕ್ಷನ್ 176 ಪ್ರಕಾರ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ಕೊಡದೇ ಹೋದರೆ ಅದು ಒಂದು ಅಪರಾಧವಾಗುತ್ತದೆ. ಅದಕ್ಕೆ ಎರಡು ತಿಂಗಳ ಶಿಕ್ಷೆ ಆಗುತ್ತದೆ. ಒಂದು ವೇಳೆ ಕೊಟ್ಟಂತಹ ಮಾಹಿತಿ ಸುಳ್ಳಾದರೆ ಅದಕ್ಕೆ 6 ತಿಂಗಳು ಶಿಕ್ಷೆಯಾಗುತ್ತದೆ. ಹೀಗಾಗಿ ಐಪಿಸಿ 176 ಪ್ರಕಾರ ವಿವರ ಸಲ್ಲಿಸದ ಜನಪ್ರತಿನಿಧಿಗಳ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲು ಕಾನೂನಿನಲ್ಲಿ ಅವಕಾಶವಿದೆ. ಲೋಕಾಯುಕ್ತರು ತಮ್ಮ ಅಧಿಕಾರವನ್ನು ಚಲಾಯಿಸಬೇಕು ಎಂಬುದು ಕಾನೂನು ತಜ್ಞರ ಅಭಿಪ್ರಾಯವಾಗಿದೆ.

    ಆಸ್ತಿ ವಿವರ ಸಲ್ಲಿಸದ ಜನಪ್ರತಿನಿಧಿಗಳ ಹೆಸರನ್ನು ಕೇವಲ ಪತ್ರಿಕೆಯಲ್ಲಿ ಪ್ರಕಟಿಸಿ ಸುಮ್ಮನಾಗದೆ. ಅಂತಹವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ನನ್ನ ಅವಧಿಯಲ್ಲಿ ಆಸ್ತಿ ವಿವರ ಸಲ್ಲಿಸಿದ ಕೆಲವು ಜನಪ್ರತಿನಿಧಿಗಳ ಮೇಲೆ ಐಪಿಸಿ 176 ಪ್ರಕಾರ ಎಫ್​ಐಆರ್ ದಾಖಲಿಸಿ ಕ್ರಿಮಿನಲ್ ಕೇಸ್ ದಾಖಲಿಸಿದ್ದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap