ಜಗಳೂರು:
ಸದಾ ಬರಗಾಲದಿಂದ ಬಳಲುವ ತಾಲೂಕಿನಲ್ಲಿ ಮಳೆಯ ಕೊರತೆಯಿಂದಾಗಿ ಬೆಳೆ ಬಾರದೇ ಜನುವಾರುಗಳಿಗೆ ಮೇವಿಲ್ಲದಂತಾಗಿದ್ದು ಸಮರ್ಪಕವಾಗಿ ಮೇವು ಮತ್ತು ನೀರನ್ನು ಪೂರೈಕೆ ಮಾಡಬೇಕೆಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್.ಆರ್.ಶ್ರೀನಿವಾಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಾಲೂಕಿನ ಕೊಣಚಗಲ್ಲ ಗುಡ್ಡದ ಬಳಿ ಸ್ಥಾಪಿತವಾಗಿರುವ ಗೋಶಾಲೆಗೆ ಗುರುವಾರ ಭೇಟಿ ನೀಡಿ ಮಾತನಾಡಿದ ಸಚಿವರು ಈಗಾಲೇ ತಾಲೂಕಿನ ಮಡ್ರಳ್ಳಿ ಮತ್ತು ಕೊಣಚಗಲ್ ಗುಡ್ಡದ ಬಳಿ ಎರಡು ಕಡೆ ಗೋಶಾಲೆಗಳನ್ನು ಆರಂಭಿಸಲಾಗಿದೆ. ಜನರ ಒತ್ತಾಯದ ಮೇರೆಗೆ ಹಿರೇಮಲ್ಲನಹೊಳೆ ಮತ್ತು ಕೊಡದಗುಡ್ಡದ ಬಳಿಯು ಸಹ ಇನ್ನು ಎರಡು ಹೆಚ್ಚುವರಿ ಗೋಶಾಲೆಗಳನ್ನು ಆರಂಭಿಸಿ ಜಾನುವಾರುಗಳಿಗೆ ಸಮರ್ಪಕವಾಗಿ ಮೇವು ಮತ್ತು ನೀರನ್ನು ಪೂರೈಕೆ ಮಾಡಬೇಕು. ಹಳ್ಳಿಗಳಿಂದ ಎಷ್ಟೇ ಜಾನುವಾರುಗಳು ಗೋಶಾಲೆಗೆ ಬಂದರೂ ಮೇವಿನ ಕೊರತೆ ಉಂಟಾಗದಂತೆ ಮುಂಜಾಗ್ರತಾ ಕ್ರಮ ವಹಿಸಬೇಕೆಂದರು.
ಈ ವೇಳೆ ಮೇವಿಗಾಗಿ ಸರತಿ ಸಾಲಿನಲ್ಲಿ ನಿಂತ ಮಹಿಳೆಯರು ಸಚಿವರನ್ನು ಉದ್ದೇಶಿಸಿ ಪ್ರತಿ ದಿನ ಮೇವಿನ ಲಾರಿಗಳು ಸ್ವಲ್ಪ ಮೇವನ್ನು ಮಾತ್ರ ತರುತ್ತವೆ ಇಂದು ನೀವು ಬಂದ ಹಿನ್ನಲೆಯಲ್ಲಿ ಹೆಚ್ಚು ಮೇವನ್ನು ತಂದಿದ್ದಾರೆಂದು ದೂರಿದರು.
ಈ ಸಂದರ್ಭದಲ್ಲಿ ಶಾಸಕ ಎಸ್.ವಿ.ರಾಮಚಂದ್ರ, ಜಿಪಂ ಸದಸ್ಯ ಮಂಜುನಾಥ್, ಜಿಲ್ಲಾಧಿಕಾರಿ ಜಿ.ಎನ್.ಶಿವಮೂರ್ತಿ, ಸಿಇಓ ಬಸವರಾಜೇಂದ್ರ, ಜಿಪಂ ಅಧ್ಯಕ್ಷೆ ಶೈಲಜಾ, ಎಸಿ ಕುಮಾರಸ್ವಾಮಿ, ತಹಶೀಲ್ದಾರ್ ಹುಲ್ಲುಮನಿ ತಿಮ್ಮಣ್ಣ, ಇಒ ಜಾನಕಿರಾಮ್ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








