ಜಯದ ಖುಷಿ ಕಾಣುವ ಮುನ್ನವೇ ಕಣ್ಣುಮುಚ್ಚಿದ ಜೀವ.!

ಬೆಂಗಳೂರು

       ವಾದ-ಪ್ರತಿವಾದ ಆರಂಭವಾಗಿ ದಶಕಗಳೇ ಕಳೆದ ಸುಧೀರ್ಘ ಕಾನೂನು ಹೋರಾಟ ಕಳೆದ ಶುಕ್ರವಾರ ಅಂತ್ಯಗೊಂಡಿದೆ.ಆದರೆ ಆ ಕ್ಷಣವನ್ನು ಎದುರು ನೋಡುತ್ತಿದ್ದ ಜೀವವೊಂದು ಜಯದ ಖುಷಿ ಕಾಣುವ ಮುನ್ನವೇ ಕಣ್ಣುಮುಚ್ಚಿದೆ.!

       ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ದ ವಿಜ್ಞಾನಿ ನಂಬಿ ನಾರಾಯಣನ್ ಸೇರಿ 6 ಮಂದಿ ವಿರುದ್ಧ 1994ರಲ್ಲಿ ಬೇಹುಗಾರಿಕೆ ಪ್ರಕರಣ ದಾಖಲಾಗಿ, ಪೊಲೀಸರಿಂದ ಚಿತ್ರಹಿಂಸೆ ಅನುಭವಿಸಿ, ಕೊನೆಗೆ ನಿರಪರಾಧಿಗಳಾಗಿರುವುದ ಸಾಬೀತಾಗಿತ್ತು. ಕಳೆದ ಶುಕ್ರವಾರ ಸುಪ್ರೀಂಕೋರ್ಟ್ ವಿಜ್ಞಾನಿಯನ್ನು ಅನಗತ್ಯವಾಗಿ ಬಂಧಿಸಿ, ದೌರ್ಜನ್ಯ ಹಾಗೂ ಮಾನಸಿಕ ಹಿಂಸೆ ನೀಡಲಾಗಿದೆ ಎಂಬುದನ್ನು ಒಪ್ಪಿಕೊಂಡಿತ್ತು.

      ಅಲ್ಲದೆ, ನಾರಾಯಣನ್ ಅವರಿಗೆ 50 ಲಕ್ಷ ರೂ ಪರಿಹಾರ ನೀಡುವಂತೆಯೂ ಸೂಚಿಸಿತ್ತು. ದಶಕದಿಂದ ಸಾಗಿಬಂದಿದ್ದ ಪ್ರಕರಣಕ್ಕೆ ಸುಪ್ರೀಂ ಐತಿಹಾಸಿಕ ಅಭಿಪ್ರಾಯವನ್ನೂ ಮಂಡಿಸಿತ್ತು.ಶುಕ್ರವಾರ ನಡೆಯುತ್ತಿದ್ದ ಇಷ್ಟೆಲ್ಲ ಬೆಳವಣಿಗೆಳ ನಡುವೆ ಜೀವವೊಂದು ಏನಾಗುತ್ತದೋ ಎಂದು ಆಸೆಗಣ್ಣಿನಿಂದ ಕಾಯುತ್ತಿತ್ತು. ದುರಂತವೆಂದರೆ ಆ ಜೀವ ಆಗಾಗಲೇ ಆಸ್ಪತ್ರೆಯಲ್ಲಿ ಕೋಮಾ ಸ್ಥಿತಿಯಲ್ಲಿತ್ತು. ಅಂದು 11 ಗಂಟೆಗೆ ಸುಪ್ರೀಂ ಮಹತ್ವದ ಅಭಿಪ್ರಾಯವೊಂದನ್ನು ಹೊರಹಾಕಿತ್ತು. ಆದರೆ, ಆ ಜೀವ ಆಗಾಗಲೇ ಕಣ್ಣುಮುಚ್ಚಿತ್ತು. ಅಂದು ಮೃತಪಟ್ಟವರು ಕೆ. ಚಂದ್ರಶೇಖರ್ ಇದೇ ಆರೋಪ ಹೊತ್ತು 6 ಮಂದಿಯಲ್ಲಿ ಇವರೂ ಇಬ್ಬರು.

       ಚಂದ್ರಶೇಖರ್ ನಿರಪರಾಧಿ ಎಂದು 1998ರಲ್ಲಿಯೇ ತೀರ್ಪು ನೀಡಲಾಗಿತ್ತು. ಆದರೆ ಸುಪ್ರೀಂನ ಅಂತಿಮ ನುಡಿ ಏನು ಎಂದು ಅವರು ಕೊನೆ ಕ್ಷಣದವರೆಗೂ ಕಾಯುತ್ತಿದ್ದರು. ಕೊನೆಗೂ ಅವರಿಗೆ ವಿಜಯದ ಖುಷಿ ಅನುಭವಿಸಲು ಕಾಲ ಅವಕಾಶ ನೀಡಲಿಲ್ಲ. ಇದನ್ನು ಅವರು ಪತ್ನಿ ವಿಜಯಮ್ಮ ಕಣ್ಣೀರಿಡುತ್ತಲೇ ಹೇಳಿದ್ದಾರೆ.

       ಅವರಿಗ ಶುಕ್ರವಾರ ಪ್ರಕರಣ ಸಂಬಂಧ ಸುಪ್ರೀಂ ತೀರ್ಪು ನೀಡಲಿದೆ ಎಂದು ತಿಳಿದಿತ್ತು. ನಾವು ಗೆದ್ದೇ ಗೆಲ್ಲುತ್ತೇವೆ ಎಂಬ ವಿಶ್ವಾಸವೂ ಇತ್ತು. ಎರಡು ದಶಕಗಳಿಂದ ಆ ಸುದ್ದಿ ಕೇಳಲು ಕಾಯುತ್ತಿದ್ದ ಅವರು ಅದನ್ನು ಕೇಳದೆಯೇ ಕೊನೆಯುಸಿರೆಳೆದರು ಎಂದು ದುಃಖ ತೋಡಿಕೊಂಡಿದ್ದಾರೆ.

                    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link