ಜಿಲ್ಲಾ ರಕ್ಷಣಾಧಿಕಾರಿ ಶ್ರೀನಾಥ್ ಜೋಷಿ ಅಭಿಮತ ಸತತ ಪರಿಶ್ರಮದಿಂದ ಮಾತ್ರ ಯಶಸ್ಸು ಸಾಧ್ಯ

ಚಿತ್ರದುರ್ಗ

       ಸಾಧಿಸುವ ಛಲ, ಗುರಿ ಹಾಗೂ ಸತತವಾದ ಪ್ರಯತ್ನ ಇದ್ದಲ್ಲಿ ಮಾತ್ರವೇ ಪ್ರಗತಿಯನ್ನು ಸಾಧಿಸಲು ಸಾಧ್ಯವಿದೆ ಎಂದು ವಿದ್ಯಾರ್ಥಿ ಸಮೂಹಕ್ಕೆ ಜಿಲ್ಲಾರಕ್ಷಣಾಧಿಕಾರಿ ಶ್ರೀನಾಥ್ ಎಂ.ಜೋಷಿ ಕಿವಿ ಮಾತು ಹೇಳಿದ್ದಾರೆ.

      ಚಿತ್ರದುರ್ಗ ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿಏರ್ಪಡಿಸಲಾಗಿದ್ದ 2018-19ನೇ ಸಾಲಿನ ಕ್ರೀಡಾ, ಸಾಂಸ್ಕೃತಿಕ ಹಾಗೂ ಎನ್.ಎಸ್.ಎಸ್. ಘಟಕಗಳ ಉದ್ಘಾಟನೇ ನೇರವೇರಿಸಿ ಮಾತನಾಡಿದ ಅವರು, ವಿದ್ಯಾರ್ಥಿ ಜೀವನ ಎಷ್ಟು ಸುಂದರವೂ ಅಷ್ಟೇ ಜವಾಬ್ದಾರಿಯುತವಾದ ಬದುಕಾಗಿದೆ, ಇಲ್ಲಿ ಸಮಯವನ್ನು ಹಾಳು ಮಾಡದೇ ಸರಿಯಾದ ರೀತಿಯಲ್ಲಿ ಸದುಪಯೋಗ ಮಾಡಿಕೊಂಡರೇ ಅದು ನಿಮ್ಮ ಬದುಕನ್ನು ಉತ್ತಮವಾಗಿ ರೂಪಿಸುತ್ತದೆ ಇದರ ಬದಲಿಗೆ ಬೇರೆ ರೀತಿಯಲ್ಲಿ ಆದರೆ ಬದುಕು ಸಹಾ ಬೇರೆ ಕಡೆಗೆ ಹೋಗುತ್ತದೆ ನಿಮಗೆ ಬೇರೆಯವರು ಮಾದರಿಯಾಗುದಕ್ಕಿಂತ ನೀವು ಬೇರೆಯವರಿಗೆ ಮಾದರಿಯಾಗುವಂತೆ ನೋಡಿಕೊಳ್ಳಬೇಕಿದೆ ಎಂದು ತಿಳಿಸಿದರು.

     ಕೆಲವೊಮ್ಮೆ ಸಣ್ಣ ವಿಷಯವನ್ನು ನಿರ್ಲಕ್ಷ್ಯ ಮಾಡಲಾಗುತ್ತದೆ ಇದು ಸರಿಯಾದ ಕ್ರಮವಲ್ಲ ಯಾವುದೇ ಸಣ್ಣ ವಿಷಯವನ್ನು ಸಹಾ ನಿರ್ಲಕ್ಷ್ಯ ಮಾಡದೆ ಅದರ ಬಗ್ಗೆ ಕಾಳಜಿಯನ್ನು ವಹಿಸಬೇಕಿದೆ ಏಕೆಂದರೆ ಒಮ್ಮೂಮ್ಮೆ ಅವು ನಿಮ್ಮ ಜೀವನದ ದಿಕ್ಕನ್ನು ಬದಲಾಯಿಸುವ ವಿಷಯಗಳಾಗಿರುತ್ತವೆ, ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದೇನೆ ಎಂಬ ಕೀಳಿರಿಮೆಯನ್ನು ಹೊರಹಾಕುವುದರ ಮೂಲಕ ಇರುವ ಸೌಲಭ್ಯಗಳಲ್ಲಿಯೇ ನಿಮ್ಮ ಪ್ರತಿಭೆಯನ್ನು ಪ್ರದರ್ಶನ ಮಾಡಬೇಕಿದೆ. ಇಲ್ಲಿಯ ಉಪನ್ಯಾಸಕರು ಪ್ರತಿಭಾವಂತರಾಗಿದ್ದಾರೆ ಅವರ ಪ್ರತಿಭೆಯನ್ನು ನೀವುಗಳು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳುವಂತೆ ಎಂ.ಜೋಷಿ ಕರೆ ನೀಡಿದರು.

     ಯಾವುದೇ ವ್ಯಕ್ತಿಯಾದರೂ ಸಹಾ ಸಾಧಿಸುವ ಛಲ, ಗುರಿ ಹಾಗೂ ಸತತವಾದ ಪ್ರಯತ್ನ ಇದ್ದಲ್ಲಿ ಮಾತ್ರವೇ ಪ್ರಗತಿಯನ್ನು ಸಾಧಿಸಲು ಸಾಧ್ಯವಿದೆ ನಾನು ಸಮಾಜದಲ್ಲಿ ಗಣ್ಯ ವ್ಯಕ್ತಿಯಾಗಬೇಕು ಎಂದು ಬಯಸಿದರೆ ಅದಕ್ಕೆ ಬೇಕಾದ ಪ್ರಯತ್ನವನ್ನು ಮಾಡುವುದರ ಮೂಲಕ ಸಾಧನೆ ಮಾಡಬೇಕಿದೆ. ನಿಮ್ಮ ಪಠ್ಯದ ಅಭ್ಯಾಸದ ಜೊತೆಗೆ ಪ್ರತಿ ದಿನ ಒಂದು ಗಂಟೆ ಇತರೆ ಸಾಮಾಜಿಕ ವಿಷಯಗಳನ್ನು ಬಗ್ಗೆ ಗಮನ ನೀಡಿ ಇದರಿಂದ ನಿಮ್ಮ ಜ್ಞಾನ ಹೆಚ್ಚಾಗುತ್ತದೆ ಬರೀ ಪುಸ್ತಕದ ಹುಳುವಾಗದೇ ಸಾಮಾಜದ ಬಗ್ಗೆ ತಿಳಿದುಕೊಳ್ಲುವ ಕಾರ್ಯವನ್ನು ಮಾಡಿ ಎಂದು ತಿಳಿಸಿದರು.

     ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಎಂ.ಸಿ.ಶೋಭಾ ಮಾತನಾಡಿ ನೀವುಗಳು ಬಹುತೇಕ ಗ್ರಾಮಾಂತರ ಪ್ರದೇಶದಿಂದ ಬಂದವರಾಗಿದ್ದೀರ ಮನೆಯಲ್ಲಿ ಪೋಷಕರು ನಿಮ್ಮ ಬಗ್ಗೆ ಹಲವಾರು ಆಸೆಗಳನ್ನು ಇಟ್ಟುಕೊಂಡು ಅವರ ಆಸೆಗಳನ್ನು ಬದಿಗಿಟ್ಟು ನಿಮ್ಮ ಅಸೆಗಳನ್ನು ಪೂರೈಸುತ್ತಾರೆ ಇದಕ್ಕೆ ದ್ರೋಹ ಮಾಡಬೇಡಿ ಅವರ ಆಸೆಯಂತೆ ಚನ್ನಾಗಿ ಓದಿ ಅಂಕಗಳನ್ನು ಪಡೆದು ರ್ಯಾಂಕ್ ಗಳಿಸಿದೆ ಅವರಿಗೂ ಸಹಾ ಸಂತೋಷವಾಗುತ್ತದೆ ಎಂದರು.

     ನಾನು ಓದುತ್ತೇನೆ ಎಂದು ಆಹಂಕಾರವನ್ನು ಪಡಬಾರದು ಮನೆಯಲ್ಲಿ ಸಾಧ್ಯವಾದಷ್ಟು ಪೋಷಕರಿಗೆ ಸಹಾಯ ಮಾಡುವ ಗುಣವನ್ನು ಬೆಳಸಿಕೊಳ್ಳಬೇಕಿದೆ. ಗ್ರಂಥಾಲಯಗಳ ಬಳಕೆ ಮಾಡಿಕೊಂಡು ತಮ್ಮ ವಿದ್ಯಾಭ್ಯಾಸಕ್ಕೆ ತಕ್ಕಂತೆ ಅನುಕೂಲ ಮಾಡಿಕೊಳ್ಳಿ ಎಂದು ತಿಳಿಸಿದರು.

     ಇದೇ ಸಂದರ್ಭದಲ್ಲಿ ಪ್ರಥಮ ಮತ್ತು ದ್ವೀತೀಯ ಪಿಯುನಲ್ಲಿ ಉತ್ತಮವಾದ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಮತ್ತು ಉಪನ್ಯಾಸಕರಾಗಿ ನಿವೃತ್ತಿ ಹೊಂದಿದೆ ಹಾಗೂ ಬೇರೆ ಕಡೆಗೆ ವರ್ಗಾವಣೆಯಾದ ಉಪನ್ಯಾಸಕರಿಗೆ ಸನ್ಮಾನಿಸಲಾಯಿತು.

     ಕಾರ್ಯಕ್ರಮದಲ್ಲಿ ಕಾಲೇಜು ಅಭೀವೃದ್ದಿ ಸಮಿತಿ ಸದಸ್ಯರಾದ ಶ್ರೀಮತಿ ಕೊಲ್ಲಿ ಲಕ್ಷ್ಮೀ, ಕುಮಾರ್, ಉಪನ್ಯಾಸಕರಾದ ಇಕ್ಬಾಲ್ ಅಹ್ಮದ್, ಭಾಗವಹಿಸಿದ್ದರು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಲಕ್ಷ್ಮೀನಾರಾಯಣ ವಹಿಸಿದ್ದರು. ಶ್ರೀಕಾಂತ್ ಪ್ರಾರ್ಥಿಸಿದರೆ, ದೊಡ್ಡಪ್ಪ ಸ್ವಾಗತಿಸಿದರು. ಮೋಹನ್ ವಂದಿಸಿದರೆ ಹೇಮಂತನಾಯ್ಕ್ ಕಾರ್ಯಕ್ರಮ ನಿರೂಪಿಸಿದರು.

     ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಎಂ.ಸಿ.ಶೋಭಾ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಕ್ರೀಡಾ, ಸಾಂಸ್ಕೃತಿಕ, ಎನ್.ಎಸ್.ಎಸ್.ಘಟಕಗಳ ಉದ್ಘಾಟನೆ

                  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap