ಚಿತ್ರದುರ್ಗ:
ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ಪರ್ಧಿಸಿರುವ ಬಿಜೆಪಿ.ಅಭ್ಯರ್ಥಿಗಳ ಪರವಾಗಿ ಮೊಳಕಾಲ್ಮುರು ಶಾಸಕ ಬಿ.ಶ್ರೀರಾಮುಲು ಭಾನುವಾರ ಜಿಲ್ಲೆಯ ಮೂರು ಕಡೆ ಬಿರುಸಿನ ಮತಯಾಚಿಸಲಿದ್ದಾರೆ.
ಬೆಳಿಗ್ಗೆ 9-30 ಕ್ಕೆ ಚಳ್ಳಕೆರೆ ಪಟ್ಟಣದ ಬಳ್ಳಾರಿ ರಸ್ತೆಯಲ್ಲಿರುವ ವೀರಭದ್ರೇಶ್ವರಸ್ವಾಮಿ ದೇವಸ್ಥಾನದಿಂದ ಅಭ್ಯರ್ಥಿಗಳ ಪರ ಪ್ರಚಾರ ಕೈಗೊಂಡು ನಂತರ ಮಧ್ಯಾಹ್ನ 12-30 ರತನಕ ರೋಡ್‍ಶೋ ನಡೆಸಿ ಮನೆ ಮನೆಗೆ ತೆರಳಿ ಮತಯಾಚಿಸುವರು.
ಮಧ್ಯಾಹ್ನ ಒಂದು ಗಂಟೆಗೆ ಚಿತ್ರದುರ್ಗಕ್ಕೆ ಆಗಮಿಸುವ ಬಿ.ಶ್ರೀರಾಮುಲು ನಂತರ ಮೂರು ಗಂಟೆಗೆ ಹೊಸದುರ್ಗಕ್ಕೆ ತೆರಳಿ ಸಂಜೆ ಐದು ಗಂಟೆಯವರೆಗೆ ಅಭ್ಯರ್ಥಿಗಳ ಪರ ಮತಯಾಚಿಸಲಿದ್ದಾರೆ.
ಸಂಜೆ 6 ರಿಂದ ರಾತ್ರ ಎಂಟು ಗಂಟೆಯತನಕ ಚಿತ್ರದುರ್ಗ ನಗರದ ವಿವಿಧ ವಾರ್ಡ್‍ಗಳಲ್ಲಿ ನಗರಸಭೆ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ಮತ ನೀಡುವಂತೆ ಜನತೆಯಲ್ಲಿ ಕೋರುವರು ಎಂದು ಬಿಜೆಪಿ.ಜಿಲ್ಲಾಧ್ಯಕ್ಷ ಕೆ.ಎಸ್.ನವೀನ್ ಪತ್ರಿಕೆಗೆ ತಿಳಿಸಿದ್ದಾರೆ.