ಜಿ-20 :ಸಾಂಸ್ಕೃತಿಕ ಕಾರ್ಯಕಾರಿ ಗುಂಪಿನ ಮೂರನೇ ಸಭೆ ಪ್ರಾರಂಭ

ಬೆಂಗಳೂರು

    ಭಾರತದ ಜಿ-20 ಅಧ್ಯಕ್ಷತೆಯಲ್ಲಿ, ಸಾಂಸ್ಕೃತಿಕ ಕಾರ್ಯಕಾರಿ ಗುಂಪಿನ ಮೂರನೇ ಸಭೆ, ಕರ್ನಾಟಕದ ವಿಜಯನಗರ ಜಿಲ್ಲೆಯ ವಿಶ್ವ ಪಾರಂಪರಿಕ ತಾಣ, ಹಂಪಿಯಲ್ಲಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರ ಉಪಸ್ಥಿತಿಯಲ್ಲಿ ಆರಂಭವಾಗಿದೆ.

     ವಾರಾಣಸಿಯಲ್ಲಿ ಆಗಸ್ಟ್ 20ರಂದು ನಡೆಯುವ 4ನೇ ಸಾಂಸ್ಕೃತಿಕ ಕಾರ್ಯಕಾರಿ ಗುಂಪಿನ ಸಭೆಯ ವೇಳೆ ಕೈಗೊಳ್ಳಲಾಗುವ ಸಚಿವ ಮಟ್ಟದ ನಿರ್ಣಯದ ಭಾಗವಾಗಿ ಇಂದು ಮತ್ತು ನಾಳೆ ನಡೆಯಲಿರುವ ದುಂಡುಮೇಜಿನ ಸಭೆಯಲ್ಲಿ ಮಾರ್ಗದರ್ಶಿ ತತ್ವಗಳ ಬಗ್ಗೆ ಪ್ರತಿನಿಧಿಗಳು ಚರ್ಚೆ ನಡೆಸಲಿದ್ದಾರೆ. ಸಭೆಯಲ್ಲಿ ಮಾತನಾಡಿದ ಸಚಿವ ಪ್ರಹ್ಲಾದ್ ಜೋಶಿ, ಭಾರತ ಪ್ರಸ್ತಾಪಿಸಿರುವ 4 ಆದ್ಯತಾ ವಲಯಗಳು ಜಿ-20 ಸದಸ್ಯ ದೇಶಗಳಿಗೆ ಭವಿಷ್ಯದತ್ತ ಸಾಗುವ ಮಾರ್ಗವನ್ನು ಕೋರಲಿವೆ.

     ಸಂಸ್ಕೃತಿಯು ಕೇವಲ ನಮ್ಮ ಗುರುತಿನ ಭಾಗವಾಗಿರದೇ ಸುಸ್ಥಿರ ಅಭಿವೃದ್ಧಿ, ಸಾಮಾಜಿಕ ಒಳಗೊಳ್ಳುವಿಕೆ ಮತ್ತು ಜಾಗತಿಕ ಸಾಮರಸ್ಯಕ್ಕೆ ಚಲನಶಕ್ತಿಯಾಗಿದೆ.ಸಾಂಸ್ಕೃತಿಕ ಪರಂಪರೆಯು ಹಿಂದಿನ ಮತ್ತು ಭವಿಷ್ಯಕ್ಕೆ ಆಧಾರಸ್ತಂಭವಾಗಿದೆ. ಜಿ-20 ಸದಸ್ಯ ದೇಶಗಳು ಮತ್ತು ಇತರ ದೇಶಗಳ ಅಮೂಲ್ಯ ಕೊಡುಗೆಯ ಹೊರತು ಈ ಹಾದಿಯನ್ನು ಕ್ರಮಿಸಲು ಸಾಧ್ಯವಿಲ್ಲ ಎಂದು ಹೇಳಿದರು.

       ಐತಿಹಾಸಿಕ ಹಂಪಿಯಲ್ಲಿ ನಡೆಯುತ್ತಿರುವ ಈ ಶೃಂಗಸಭೆಯಲ್ಲಿ ಸದಸ್ಯ ರಾಷ್ಟçಗಳು ಒಗ್ಗಟ್ಟಾಗಿ ಪಾರಂಪರಿಕ ಮತ್ತು ಸಂಸ್ಕೃತಿಯನ್ನು ಸಂರಕ್ಷಿಸಿ, ವಿಸ್ತರಿಸುವ ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು. ಸಂಘಟಿತ ಜ್ಞಾನ, ಸಂಸ್ಕೃತಿಯ ವಿನಿಮಯ ಸೇರಿದಂತೆ ನಮ್ಮ ನಮ್ಮ ದೇಶಗಳ ಕಲೆ, ಸಂಸ್ಕೃತಿ, ಇತಿಹಾಸವನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವ ಮೂಲಕ ಜಾಗತಿಕ ಸಂಸ್ಕೃತಿಯನ್ನು ಬೆಳೆಸುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕಿದೆ.

    ಈ ಸಭೆಯಲ್ಲಿ ಕ್ರಿಯಾ ಆಧಾರಿತ ಶಿಫಾರಸುಗಳನ್ನು ತೆಗೆದುಕೊಳ್ಳುವ ನಿಟ್ಟಿನಲ್ಲಿ ಸದಸ್ಯ ರಾಷ್ಟಗಳ ಎಲ್ಲಾ ಪ್ರತಿನಿಧಿಗಳು ಚಿಂತನೆ ನಡೆಸಬೇಕು. ಈ ಮೂಲಕ ದ್ವಿಪಕ್ಷೀಯ ಸಹಕಾರ ಬಲವರ್ಧನೆ ಮತ್ತು ಸುಸ್ಥಿರ ಭವಿಷ್ಯದ ನಿರ್ಮಾಣಕ್ಕೆ ಪೂರಕವಾದ ನಿರ್ಧಾರಗಳನ್ನು ಕೈಗೊಳ್ಳುವುದು ಸೂಕ್ತ ಎಂದು ಅವರು ಅಭಿಪ್ರಾಯಪಟ್ಟರು.

    ಸಭೆಗಳ ಚರ್ಚೆಗಳಲ್ಲಿ ರೂಪಿಸಲಾಗುವ ಕರಡು, ಭವಿಷ್ಯವನ್ನು ರೂಪಿಸುವತ್ತ ಅತಿ ಪ್ರಮುಖವಾಗಲಿವೆ. ಸಮನ್ವಯದ ಜ್ಞಾನ ಮತ್ತು ಜವಾಬ್ದಾರಿಗಳು ಜಾಗತಿಕವಾಗಿ ಸಾಂಸ್ಕöÈತಿಕ ಪ್ರಗತಿಗೆ ಪೂರಕವಾಗಲಿವೆ. ಸಾಂಸ್ಕöÈತಿಕ ಪರಂಪರೆ ಎಲ್ಲರನ್ನೂ ಒಂದುಗೂಡಿಸುತ್ತದೆ ಎಂದು ಹೇಳಿದರು.ಹತ್ತೊಂಭತ್ತು ಜಿ-20 ರಾಷ್ಟçಗಳ 30 ಪ್ರತಿನಿಧಿಗಳು, ಆಹ್ವಾನಿತ ರಾಷ್ಟಗಳ 16 ಪ್ರತಿನಿಧಿಗಳು ಮತ್ತು ಅಂತಾರಾಷ್ಟಿಯ ಸಂಸ್ಥೆಗಳ ನಾಲ್ವರು ಪ್ರತಿನಿಧಿಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ದಾರೆ.ಹಂಪಿಯಲ್ಲಿ ನಡೆಯಲಿರುವ ಚರ್ಚೆಯಲ್ಲಿ ಪಾಲ್ಗೊಳ್ಳುವ ದೇಶಗಳು ಮತ್ತು ಯುನೆಸ್ಕೋದಂತಹ ಅಂತರಾಷ್ಟಿಯ ಸಂಸ್ಥೆಗಳ ಪ್ರತಿನಿಧಿಗಳು ?ಸುಸ್ಥಿರ ಸಾಮಾಜಿಕ-ಆರ್ಥಿಕ ಚೇತರಿಕೆ? ಮತ್ತು ಅಭಿವೃದ್ಧಿಯನ್ನು ಉತ್ತೇಜಿಸುವ ಕುರಿತು, ತಮ್ಮ ಜ್ಞಾನ ಹಾಗೂ ಉಪಕ್ರಮಗಳ ಮಾಹಿತಿ ವಿನಿಮಯ ಮಾಡಿಕೊಳ್ಳಲಿದ್ದಾರೆ.

    ಕೇಂದ್ರ ಸಂಸ್ಕೃತಿ ಸಚಿವ ಜಿ.ಕಿಶನ್ ರೆಡ್ಡಿ, ರಾಜ್ಯ ಸಚಿವರಾದ ಅರ್ಜುನ್ ರಾಮ್ ಮೇಘವಾಲ್ ಮತ್ತು ಮೀನಾಕ್ಷಿ ಲೇಖಿ ಹಾಗೂ ಸಂಸ್ಕೃತಿ ಸಚಿವಾಲಯದ ಕಾರ್ಯದರ್ಶಿ ಗೋವಿಂದ್ ಮೋಹನ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಇದೇ 11ರವರೆಗೆ ಇತರ ವಿಷಯಗಳ ಕುರಿತು ಸಂವಾದ ಮುಂದುವರಿಯಲಿದೆ. ವಾರಾಣಸಿಯಲ್ಲಿ ನಡೆಯುವ ನಾಲ್ಕನೇ ಸಭೆಯಲ್ಲಿ ಜಿ-20 ಸಾಂಸ್ಕೃತಿಕ ವಿಷಯಾಧಾರಿತ ಯೋಜನೆಗಳ ಕುರಿತ ವೆಬಿನಾರ್‌ಗಳ ವರದಿಯನ್ನು ಮಂಡಿಸಲಾಗುವುದು.

    14ನೇ ಶತಮಾನದಲ್ಲಿ ಹಂಪಿ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿದ್ದು, ಪ್ರಸ್ತುತ ಯುನೆಸ್ಕೊ ವಿಶ್ವ ಪರಂಪರೆಯ ತಾಣವಾಗಿ ಗುರುತಿಸಿಕೊಂಡಿದೆ. ಪ್ರತಿನಿಧಿಗಳು ತಮ್ಮ ವಾಸ್ತವ್ಯದ ಸಮಯದಲ್ಲಿ ಐತಿಹಾಸಿಕ ಸ್ಮಾರಕಗಳಿಗೆ ಭೇಟಿ ನೀಡಲಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap