ಜಗಳೂರು:
ಸಮಾಜದ ಅಭಿವೃಧ್ದಿಗಾಗಿ ನಿರಂತರ ಶ್ರಮಿಸಿದ, ಸಾಮಾಜಿಕ ಚಿಂತನೆಯುಳ್ಳವರಾದ ವಿವೇಕಾನಂದರ ಹಾಗೂ ಸಾವಿತ್ರಿ ಭಾಯಿಫುಲೆಯವರ ಜೀವನಚರಿತ್ರೆಯನ್ನು ವಿದ್ಯಾರ್ಥಿಗಳು ಅಬ್ಯಾಸಮಾಡುವ ಮೂಲಕ ಜೀವನದಲ್ಲಿ ಉತ್ತಮ ಆದರ್ಶ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸ.ಪ್ರ.ದರ್ಜೆ ಕಾಲೇಜಿನ ಪ್ರಾಂಶುಪಾಲ ಬಿ.ಕೆ.ಬಸವರಾಜ್ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಸೋಮವಾರ ಅಖಿಲಭಾರತ ವಿದ್ಯಾರ್ಥಿ ಫೆಡರೇಷನ್(ಎಐಎಸ್‍ಎಫ್) ಆಯೋಜಿಸಿದ್ದ 156ನೇ ಸ್ವಾಮಿವಿವೇಕಾನಂದರ ಹಾಗೂ188ನೇ ಸಾವಿತ್ರಿಭಾಯಿಫುಲೆ ಅವರ ಜಯಂತ್ಯೋತ್ಸವ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇಂದಿನ ಸಮಾಜದಲ್ಲಿ ಮೌಢ್ಯತೆಗಳಿಗೆ ಬಲಿಯಾಗುವ ವರ್ಗದವರಿಗೆ ಜಾಗೃತಿಮೂಡಿಸಬೇಕು ಹಾಗೂ ಸಭ್ಯತೆಯ ಸೋಗಿನಲ್ಲಿ ಆತ್ಮವಂಚನೆಯಮೂಲಕ ಅಡಗಿರುವ ಶಕ್ತಿಯನ್ನು ಸಧೃಡ ಮನಸ್ಸಿನಿಂದ ಮಾನಸಿಕ ಸ್ಥಿಮಿತೆಯನ್ನು ಕಾಪಾಡುವ ಮೂಲಕ ಅನಾವರಣಮಾಡದೆ ದುಷ್ಚಟಗಳಿಗೆ ದಾಸ್ಯರಾಗುತ್ತಿರುವುದು ಸ್ವಾಸ್ಥ್ಯ ಸಮಾಜಕ್ಕೆ ಮಾರಕ ಎಂದು ಕಳವಳ ವ್ಯಕ್ತಪಡಿಸಿದರು.
ಎಐಎಸ್‍ಎಫ್ ಸಂಘಟನೆಯ ರಾಜ್ಯಸಹಕಾರ್ಯದರ್ಶಿ ಮಾದಿಹಳ್ಳಿ ಕೆ.ಮಂಜಪ್ಪ ಮಾತನಾಡಿ, ಸ್ವಾಮಿವಿವೇಕಾನಂದರು ಯುವಕರ ಐಕಾನ್ ಎಂದೆ ಪ್ರಸಿದ್ದಿಹೊಂದುವಮೂಲಕ ಸಾಂಸ್ಕತಿಕ ಚಿಂತನೆಯಲ್ಲಿ ವೈಚಾರಿಕತೆ ಅಳವಡಿಸುವ ಮೂಲಕ ಆರೋಗ್ಯವಂತಹ ಬಲಿಷ್ಠ ಬಾರತದ ಕನಸುಕಂಡಿದ್ದರು. ದೇಶದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಭಾಯಿಫುಲೆಯವರು,ಮೌಢ್ಯತೆಗಳೇ ವಿಜೃಂಭಿಸುತ್ತದ್ದ ಸಂದರ್ಭದಲ್ಲಿ ಆತ್ಮವಿಶ್ವಾಸ ಕುಗ್ಗಿಸಿಕೊಳ್ಳದೆ ಶೊಷಣೆಗೊಳಗಾದ ಮಹಿಳೆಯರಿಗೆ ಆಶಾದೀಪವಾಗಿ ಅಕ್ಷರ ಉಣಬಡಿಸಿದ್ದರು ಎಂದರು.
ಇತ್ತೀಚೆಗೆ ಶಬರಿಮಲೆ ಕ್ಷೇತ್ರಕ್ಕೆ ಸುಪ್ರೀಮ್ ಕೋರ್ಟ ಸಂವಿಧಾನಬದ್ದ ತೀರ್ಪುನೀಡುವಮೂಲಕ ಪ್ರವೇಶಕ್ಕೆ ಅವಕಾಶಕಲ್ಪಿಸಿದ್ದರೂ ಕೆಲ ಮೂಲಭೂತ ಶಕ್ತಿಗಳು ಪ್ರವೇಶಕ್ಕೆ ಅಡ್ಡಿಪಡಿಸುವ ಮೂಲಕ ಕೋಮುಗಲಭೆಗಳಿಗೆ ಎಡೆಮಾಡಿ ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆಯುಂಟುಮಾಡುತ್ತಿರುವುದು ಖಂಡನೀಯ ಎಂದರು.
ದಲಿತ ಸಂಘಟನೆಗಳ ಒಕ್ಕೂಟದ ಮುಖಂಡ ವ್ಯಾಸಗೊಂಡನಹಳ್ಳಿ ರಾಜಪ್ಪ ಮಾತನಾಡಿ,ದೇಶದಲ್ಲಿ ಪ್ರಜಾಪ್ರಭುತ್ವದ ಮಾದರಿಯಲ್ಲಿ ಪ್ರತಿಯೊಬ್ಬರಿಗೂ ಸಂವಿಧಾನಬದ್ದ ಅವಕಾಶ ಕಲ್ಪಿಸಿದ್ದು ಸರ್ಕಾರ ಹಲವಾರು ವಿದ್ಯಾರ್ಥಿಗಳಿಗೆ ಸೌಲಭ್ಯಗಳನ್ನು ನೀಡುತ್ತಿದೆ. ಇಂದಿನ ಯುವಸಮೂಹ ತಂತ್ರಜ್ಞಾನದ ದುರ್ಬಳಕೆಮಾಡಿಕೊಂಡು ಕಾಲಾಹರಣ ಮಾಡುವ ಮೂಲಕ ಸೈಬರ್ ಕ್ರೈಮ್,ಫೊಕ್ಸೋ, ನಂತಹ ಪ್ರಕರಣಗಳಲ್ಲಿ ತೊಡಗಿಕೊಳ್ಳುವ ಮೂಲಕ ಉತ್ತಮ ಭವಿಷ್ಯಕ್ಕೆ ಸಂಚಕಾರ ತಂದುಕೊಳ್ಳುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕರಾದ ಮಲ್ಲಿಕಾರ್ಜುನ, ಚೈತ್ರಾ ಗಂಗಾಧರ ವಿದ್ಯಾಶ್ರಿ ಮಲ್ಲಿಕಾರ್ಜುನ ಕಪ್ಪಿ ಶಾಂತವೀರಪ್ಪ ಎಐಎಸ್‍ಎಫ್ ನ ಜಿಲ್ಲಾಮುಖಂಡ ಪವನ್ ಕಾಮಗೇತನಹಳ್ಳಿ ತಾಲೂಕು ಕಾರ್ಯದರ್ಶಿ ಕೆ.ತಿಪ್ಪೇಸ್ವಾಮಿ ಚಿರಬಿ,ಪದಾಧಿಕಾರಿಗಳಾದ ರಶ್ಮಿ ಶೋಭಾ ತಿರುಮಲೇಶ್ ಗುರುರಾಜ್ ನವೀನ್ ಕುಮಾರ್ ಮಹಾಂತೇಶ ಸೇರಿದಂತೆ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ