ಬೆಂಗಳೂರು/ಹೊಸದಿಲ್ಲಿ : ಜುಲೈ 18ರಂದು ರಾಷ್ಟ್ರಪತಿ ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ಪ್ರಕಟಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಅಧಿಕಾರದ ಅವಧಿ ಮುಗಿಯುವುದಕ್ಕೂ ಮುನ್ನ ಚುನಾವಣೆ ನಡೆಯಲಿದೆ ಎಂದು ತಿಳಿಸಿದರು.
ಜೂನ್ನಲ್ಲಿ ಅಧಿಸೂಚನೆ : ರಾಷ್ಟ್ರಪತಿ ಚುನಾವಣೆ ಜೂನ್ 15ರಂದು ಅಧಿಸೂಚನೆ ಹೊರಡಿಸಲಾಗುತ್ತದೆ. ಜೂನ್ 29 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ಜುಲೈ 21ರಂದು ಫಲಿತಾಂಶ ಪ್ರಕಟವಾಗಲಿದೆ.
ಹಾಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಅಧಿಕಾರಾವಧಿ ಜುಲೈ 25ರಂದು ಅಂತ್ಯಗೊಳ್ಳಲಿದೆ.ಸಂವಿಧಾನದ 62ನೇ ವಿಧಿ ಪ್ರಕಾರ, ಅದರ ನೂತನ ರಾಷ್ಟ್ರಪತಿ ಆಯ್ಕೆ ನಡೆಯಬೇಕಿದೆ.
776 ಸಂಸತ್ ಸದಸ್ಯರು ಮತ್ತು 4,120 ಶಾಸಕರಿಂದ ರಚನೆಯಾದ ಎಲೆಕ್ಟೊರಲ್ ಕಾಲೇಜ್ ಮೂಲಕ ಭಾರತದ ರಾಷ್ಟ್ರಪತಿ ಆಯ್ಕೆ ನಡೆಯುತ್ತದೆ. ಎಲೆಕ್ಟೊರಲ್ ಕಾಲೇಜ್ನ ಒಟ್ಟು ಗಾತ್ರ 10,98,903 ಮತಗಳಾಗಿವೆ. ಆಡಳಿತಾರೂಢ ಎನ್ಡಿಎ, ತನ್ನ ಎಲ್ಲ ಸಂಸದರು ಮತ್ತು ಶಾಸಕರ ಬಲದಲ್ಲಿ ಶೇ 48.9ರಷ್ಟು ಮತಗಳನ್ನು ಹೊಂದಿದೆ. ಮುಂದಿನ ರಾಷ್ಟ್ರಪತಿಯನ್ನು ನಿರ್ಧರಿಸುವ ಹಿತಕರ ಮತ್ತು ಪ್ರಬಲ ಸ್ಥಾನದಲ್ಲಿ ಇರುವಂತೆ ತನ್ನ ಮಿತ್ರ ಪಕ್ಷಗಳು ಮತ್ತು ಬೆಂಬಲಿತ ಪಕ್ಷಗಳ ಒಮ್ಮತ ಪಡೆಯಲು ಸರ್ಕಾರ ಬಯಸಿದೆ.
ತನ್ನ ಅಭ್ಯರ್ಥಿಯನ್ನು ಬೆಂಬಲಿಸುವಂತೆ ವಿವಿಧ ಪಕ್ಷಗಳ ಜತೆ, ಒಡಿಶಾದ ಆಡಳಿತಾರೂಢ ಬಿಜು ಜನತಾ ದಳ ಮತ್ತು ಆಂಧ್ರಪ್ರದೇಶದ ವೈಎಸ್ಆರ್ ಕಾಂಗ್ರೆಸ್ ಪಕ್ಷವನ್ನು ತಲುಪಲು ಬಿಜೆಪಿ ಮುಂದಾಗಿದೆ.
ಅಧ್ಯಕ್ಷೀಯ ಚುನಾವಣೆಯಲ್ಲಿ ವಿರೋಧ ಪಕ್ಷಗಳು ಜಂಟಿ ಅಭ್ಯರ್ಥಿಯ ಸ್ಪರ್ಧೆಯನ್ನು ಇನ್ನೂ ಘೋಷಣೆ ಮಾಡಿಲ್ಲ. ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಮತ್ತು ಮಹಾರಾಷ್ಟ್ರ ಎನ್ಸಿಪಿ ನಾಯಕ ಶರದ್ ಪವಾರ್ ಅವರ ಜತೆ ಚರ್ಚೆಗಳು ನಡೆಯುತ್ತಿವೆ.