ಹಿರಿಯೂರು :
ಹಿರಿಯೂರಿನಲ್ಲಿ ಸೆಪ್ಟೆಂಬರ್ 1ರಂದು ಮಧ್ಯಾಹ್ನ ನಾಲ್ಕು ಗಂಟೆಗೆ, ನ್ಯಾಯಾಲಯ ಸಂಕೀರ್ಣದ ಮಹಡಿಯಲ್ಲಿ ನೂತನವಾಗಿ ನಿರ್ಮಿಸಲಿರುವ ಹಿರಿಯ ಸಿವಿಲ್ ಜಡ್ಕ್ ಮತ್ತು ಜೆಎಂಎಫ್‍ಸಿ ನ್ಯಾಯಾಲಯಗಳ ನೂತನ ಕಟ್ಟಡದ ಶಂಕುಸ್ಥಾಪನಾ ಸಮಾರಂಭ ಏರ್ಪಡಿಸಲಾಗಿದೆ.
ಈ ಎಲ್ಲ ಕಾರ್ಯಕ್ರಮವನ್ನು ಹೈಕೋರ್ಟ್ ನ್ಯಾಯಮೂರ್ತಿಗಳಾದ ಜಾನ್ ಮೈಕಲ್ ಕುನ್ಹಾ ಅವರು ಉದ್ಘಾಟಿಸುವರು.
ಈ ಸಮಾರಂಭದಲ್ಲಿ ರಾಜ್ಯದ ಸಚಿವರಾದ ಕೃಷ್ಣಾಭೈರೇಗೌಡ, ಜಿಲ್ಲಾ ಉಸ್ತುವಾರಿ ಸಚಿವರಾದ ವೆಂಕಟರಮಣಪ್ಪ ಸೇರಿದಂತೆ ಜನಪ್ರತಿನಿಧಿಗಳು, ನಾಯಾಧೀಶರುಗಳು, ವಕೀಲರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
