ಜೆಡಿಎಸ್‍ಘಟಕದಿಂದಕೈಗೊಂಡಕೊಡಗುಜಿಲ್ಲೆಯ ನೆರೆ ಪರಿಹಾರ ನಿಧಿ

    ಹೊನ್ನಾಳಿ ಜೆಡಿಎಸ್‍ಘಟಕದಿಂದಕೈಗೊಂಡಕೊಡಗುಜಿಲ್ಲೆಯ ನೆರೆ ಪರಿಹಾರ ನಿಧಿ ಸಂಗ್ರಹಅಭಿಯಾನದಿಂದ ಸಂಗ್ರಹವಾದ 55170/- ರೂ.ಗಳ ಡಿಡಿಯನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕಳುಹಿಸಿಕೊಡಲು ಇಲ್ಲಿನ ತಹಶೀಲ್ದಾರರಿಗೆ ಹಸ್ತಾಂತರಿಸಲಾಯಿತು.

 

    ಮಂಗಳವಾರ ಇಲ್ಲಿನತಾಲ್ಲೂಕುಕಛೇರಿಯಲ್ಲಿ ತಹಶೀಲ್ದಾರರಿಗೆ ಡಿಡಿ ಹಸ್ತಾಂತರಿಸಿ ಮಾತನಾಡಿದ ಜೆಡಿಎಸ್ ಅಧ್ಯಕ್ಷರಾದ ಎಸ್.ಎಂ. ವೆಂಕಟೇಶ್, ನಮ್ಮ ಸೋದರ ಜಿಲ್ಲೆಯಾದ ಕೊಡಗಿನ ಜನತೆಯ ಸಂಕಷ್ಠದಲ್ಲಿ ಭಾಗಿಯಾಗಿ ಸಹಾಯ ಮಾಡುವುದು ನಮ್ಮೆಲ್ಲರಆದ್ಯಕರ್ತವ್ಯವಾಗಿದೆ. ಪಟ್ಟಣ ಪಂಚಾಯಿತಿಚುನಾವಣಾ ಹಿನ್ನೆಲೆಯಲ್ಲಿ ನೀತಿಸಂಹಿತೆಜಾರಿಯಲ್ಲಿರುವುದರಿಂದ ಹೊನ್ನಾಳಿ ಪಟ್ಟಣ ಹೊರತುಪಡಿಸಿ ತಾಲ್ಲೂಕಿನಕುಂದೂರು, ಸಾಸ್ವೆಹಳ್ಳಿ, ನ್ಯಾಮತಿ, ಸುರಹೊನ್ನೆ, ಸವಳಂಗ ಮತ್ತುಚೀಲೂರು ಭಾಗಗಳಲ್ಲಿ ನಮ್ಮ ಪಕ್ಷದ ವತಿಯಿಂದ ಪರಿಹಾರ ನಿಧಿ ಸಂಗ್ರಹಅಭಿಯಾನವನ್ನು ಹಮ್ಮಿಕೊಳ್ಳಲಾಯಿತು. ನಮ್ಮತಾಲ್ಲೂಕಿನಜನತೆ ನಮಗೆ ಅಭೂತಪೂರ್ವ ಬೆಂಬಲ ನೀಡಿತಮ್ಮ ಹೃದಯವೈಶಾಲ್ಯತೆ ಮೆರೆದಿದ್ದಾರೆ. ಎಲ್ಲಾ ವರ್ಗದ ವ್ಯಾಪಾರಸ್ಥರು, ನೌಕರರು, ರೈತರು, ಮಹಿಳೆಯರು ಮತ್ತುಜನಸಾಮಾನ್ಯರೂ ಸಹ ತಮ್ಮಕೈಲಾದದೇಣಿಗೆ ನೀಡಿದ್ದಾರೆಎಂದರು.

   ವಿಶೇಷವಾಗಿ ಸುರಹೊನ್ನೆಯಕೂಲಿಕಾರ್ಮಿಕರಾದ ಮೀಸೆ ಮಂಜಪ್ಪ ಮತ್ತು ಸಾಸ್ವೆಹಳ್ಳಿಯ ಮೀನು ವ್ಯಾಪಾರಿಯಾದ ಮಹಮ್ಮದ್‍ಜಬೀವುಲ್ಲಾಎಂಬುವವರುತಲಾ 5001/- ರೂ.ಗಳನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ.

ನಮ್ಮ ಮೇಲೆ ನಂಬಿಕೆಯಿಟ್ಟುದೇಣಿಗೆ ನೀಡಿ ಈ ಪುಣ್ಯಕಾರ್ಯಕ್ಕೆ ಬೆಂಬಲಿಸಿದ ಹೊನ್ನಾಳಿ ಮತ್ತು ನ್ಯಾಮತಿತಾಲ್ಲೂಕಿನಜನತೆಗೆ ಮತ್ತು ಈ ಅಭಿಯಾನದಲ್ಲಿ ಭಾಗವಹಿಸಿದ ಮುಖಂಡರು ಮತ್ತುಕಾರ್ಯಕರ್ತರಿಗೆ ಅಭಿನಂದನೆಗಳು ಎಂದರು.

ಡಿಡಿಯನ್ನು ಪಡೆದ ತಹಶೀಲ್ದಾರರು, ಪ್ರಕೃತಿ ವಿಕೋಪಗಳಿಗೆ ತುತ್ತಾದಜನತೆಯ, ಪ್ರದೇಶಗಳ ಪುನರ್ವಸತಿಕಲ್ಪಿಸಲು ಸರ್ಕಾರದೊಂದಿಗೆ ನಾಡಿನಜನತೆ ಕೈಜೋಡಿಸಿದಾಗ ಶೀಘ್ರವಾಗಿ ಪರಿಹಾರಒದಗಿಸಲು ಸಾಧ್ಯ. ಈ ಕಾರ್ಯದಲ್ಲಿ ಹೊನ್ನಾಳಿಯ ಹಲವಾರು ಸಂಘ-ಸಂಸ್ಥೆಗಳು, ಜನತೆಯೂ ಸಹ ಮುಂದೆ ಬಂದು ಪರಿಹಾರ ನಿಧಿಯನ್ನು ನೀಡಿದ್ದಾರೆ. ಇಂದುಜೆಡಿಎಸ್ ಪಕ್ಷದವರೂ ಸಹ ಇಂದು ಸುಮಾರು 55 ಸಾವಿರ ರೂ.ಗಳನ್ನು ಸಂಗ್ರಹಿಸಿ ಸರ್ಕಾರಕ್ಕೆ ನೀಡಿದ್ದಾರೆ. ಇವರೆಲ್ಲರಿಗೂ ಸರ್ಕಾರದ ವತಿಯಿಂದ ಧನ್ಯವಾದಗಳನ್ನು ಅರ್ಪಿಸಿದರು.

ಈ ಸಂದರ್ಭದಲ್ಲಿಜೆಡಿಎಸ್ ಮುಖಂಡರುಗಳಾದ ಗುರುಪಾದಯ್ಯ ಮಠದ್, ಕೆ. ದೇವೇಂದ್ರಪ್ಪ, ನರಸಿಂಹಪ್ಪ, ಆರುಂಡಿ ನಾಗರಾಜ್, ವನಜಾಕ್ಷಮ್ಮ, ರಮೇಶ ದೇವರಹೊನ್ನಾಳಿ, ವಾಸಪ್ಪ ಎಂ., ರವಿಂದ್ರ ಬನ್ನಿಕೋಡ, ಪೂಜಾರ ಬಸಪ್ಪ, ಉಮೇಶ್‍ಟೈಲರ್, ಶಿಫಿವುಲ್ಲಾ, ಹೆಚ್.ಬಿ. ಮಂಜುನಾಥ, ರಂಗಾನಾಯ್ಕಕೆಂಗಟ್ಟೆ, ಪಾರ್ವತಮ್ಮ, ಕಠಾರಿ ಸತ್ಯನಾರಾಯಣರಾವ್, ನೇತ್ರಾವತಿ, ಅರಕೆರೆ ಪುಟ್ಟನಗೌಡ್ರು, ಹೆಚ್.ಕೆ. ರಮೇಶ್ ಹನಗವಾಡಿ, ನೀಲಕಂಠರಾಯ್ಕರ್ ಮುಂತಾದವರು ಉಪಸ್ಥಿತರಿದ್ದರು.

Recent Articles

spot_img

Related Stories

Share via
Copy link