ಬೆಂಗಳೂರು:
ಜೆಡಿಎಸ್ ಪಕ್ಷ ಬಿಟ್ಟು, ಬಿಜೆಪಿ ಪಕ್ಷ ಸೇರಲು ಜೆಡಿಎಸ್ ಶಾಸಕರ ಪತ್ನಿಗೆ 30 ಕೋಟಿ ರೂ.ಗಳ ಹಣದ ಆಫರ್ ನೀಡುವ ಮೂಲಕ ಜೆಡಿಎಸ್ ಶಾಸಕನನ್ನು ಬಿಜೆಪಿಯತ್ತ ಸೆಳೆಯುವ ಪ್ರಯತ್ನ ಮಾಡಿದೆ ಎಂದು ಆರೋಪಿಸಲಾಗಿದೆ.
ಮೊನ್ನೆ ತಾನೇ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕಿಂಗ್‍ಪಿನ್ ಎಂದು ಆರೋಪಿಸಿದ್ದ ಉದಯ್‍ಗೌಡ ಅವರೇ ಸಕಲೇಶ್ವರ ಜೆಡಿಎಸ್ ಶಾಸಕ ಹೆಚ್.ಕೆ.ಕುಮಾರಸ್ವಾಮಿ ಅವರನ್ನು ಜೆಡಿಎಸ್ ಪಕ್ಷಕ್ಕೆ ಗುಡ್‍ಬೈ ಹೇಳಿಸಿ ಬಿಜೆಪಿಗೆ ಸೇರಿಸುವಂತೆ ಅವರ ಪತ್ನಿಗೆ ಹಣದ ಆಮಿಷ ಒಡ್ಡಿರುವುದಾಗಿ ತಿಳಿದುಬಂದಿದೆ.
ಎಚ್.ಕೆ. ಕುಮಾರಸ್ವಾಮಿ ಅವರ ನಿವಾಸಕ್ಕೆ ಭೇಟಿ ನೀಡಿದ್ದ ಉದಯ್ ಗೌಡ, ಜೆಡಿಎಸ್ ತೊರೆದು ಬಿಜೆಪಿ ಸೇರುವಂತೆ ಚಂಚಲಾ ಅವರ ಮೂಲಕ ಕುಮಾರಸ್ವಾಮಿ ಅವರಿಗೆ ಆಹ್ವಾನ ನೀಡಿದ್ದರು. ಗಣೇಶ ಚತುರ್ಥಿಯೆಂದೇ ಪಕ್ಷಕ್ಕೆ ಬರುವಂತೆ ಆಹ್ವಾನಿಸಿದ್ದರು. ಆದರೆ, ಯಾವುದೇ ಕಾರಣಕ್ಕೂ ಜೆಡಿಎಸ್ ತೊರೆಯುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ ಬಳಿಕ ಅವರು ವಾಪಸ್ ಆಗಿದ್ದರು ಎಂದು ಹೇಳಲಾಗಿದೆ.