ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದ ಎಸ್‍ಟಿ ಘಟಕದ ಜಂಟಿ ಸಭೆ

ತುಮಕೂರು
 
          ಮಾಜಿ ಪ್ರಧಾನಿ ದೇವೇಗೌಡರ ಸ್ಪರ್ಧೆಯಿಂದ ತುಮಕೂರು ಕ್ಷೇತ್ರವು ಇಡೀ ದೇಶದಲ್ಲಿ ಗಮನ ಸೆಳೆದಿದೆ.  ಈ ಕ್ಷೇತ್ರದಲ್ಲಿ ಅವರನ್ನು ಚುನಾಯಿಸುವ ಮೂಲಕ ತುಮಕೂರಿನ ಅಭಿವೃದ್ಧಿಗೆ ನಾಂದಿ ಹಾಡಬೇಕಿದೆ ಎಂದು ಮಾಜಿ ವಿಧಾನಪರಿಷತ್ ಸದಸ್ಯ ರಮೇಶ್‍ಬಾಬು ತಿಳಿಸಿದರು.
         ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದ ಎಸ್‍ಟಿ ಘಟಕದ ಜಂಟಿ ಸಭೆಯ ನಂತರ ಮಾತನಾಡಿದ ಅವರು, ಮೈತ್ರಿ ಸರ್ಕಾರದಲ್ಲಿ ತುಮಕೂರು ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ ಎಚ್.ಡಿ.ದೇವೇಗೌಡರ ಸ್ಪರ್ಧೆ ಮಾಡಿದ್ದು, ಅಂತಹವರಿಗೆ ನಮ್ಮ ಮತ ನೀಡಿ ಚುನಾಯಿಸುವುದು ನಮ್ಮ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ನಮ್ಮ ಮುಖಂಡರು ಹಾಗೂ ಕಾರ್ಯಕರ್ತರು ನಮ್ಮ ನಿರ್ಣಾಯಕ ಮತಗಳನ್ನು ಮೈತ್ರಿ ಅಭ್ಯರ್ಥಿಗೆ ನೀಡಲು ತೀರ್ಮಾನಿಸಲಾಗಿದೆ ಎಂದರು.
       
            ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಸಭೆಯನ್ನು ನಡೆಸಿದ್ದು, ಇದರಲ್ಲಿ ತುಮಕೂರಿನ ವಿವಿಧ ಮುಖಂಡರು ಭಾಗಿಯಾಗಿದ್ದು, ಅವರೊಂದಿಗೆ ಸಭೆ ನಡೆಸಿ ದೇವೇಗೌಡರಿಗೆ ಮತ ನೀಡಲು ತೀರ್ಮಾನ ಮಾಡಲಾಗಿದೆ. ತುಮಕೂರು ಕ್ಷೇತ್ರದಲ್ಲಿ ಎಸ್‍ಟಿ. ಎಸ್‍ಸಿ, ಅಲ್ಪಸಂಖ್ಯಾತರ, ಹಿಂದುಳಿದವರ ಮತಗಳಿಂದ ದೇವೇಗೌಡರಿಗೆ ಶಕ್ತಿ ನೀಡಬೇಕಿದೆ. ಶೋಷಿತ ಸಮುದಾಯಗಳಿಗೆ ರಾಜಕೀಯ ಶಕ್ತಿ ನೀಡಿದ ದೇವೇಗೌಡರು ಚುನಾಯಿತರಾದರೆ ನಮ್ಮ ಕ್ಷೇತ್ರ ಅಭಿವೃದ್ಧಿಗೊಳ್ಳಲಿದೆ ಎಂದರು.
           ಬಿಜೆಪಿ ಪಕ್ಷದವರು ತಮ್ಮ ಅಭ್ಯರ್ಥಿಯ ಹೆಸರು ಹೇಳದೆ ಮೋದಿಯವರ ಹೆಸರು ಹೇಳಿಕೊಂಡು ಮತ ಕೇಳುತ್ತಿದ್ದಾರೆ. ಬಿಜೆಪಿಯವರು ನಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದೇವೆ ನಮಗೆ ಮತ ನೀಡಿ ಎಂದು ಕೇಳುವ ನೈತಿಕತೆ ಕಳೆದುಕೊಂಡಿದ್ದಾರೆ.
   
           ಜಿಎಸ್.ಬಸವರಾಜು ಬಗ್ಗೆ ವೈಯಕ್ತಿಕವಾಗಿ ಗೌರವವಿದೆ ಆದರೆ ನಾಲ್ಕು ಬಾರಿ ಸಂಸದರಾಗಿದ್ದ ಅವರು ಈ ಕ್ಷೇತ್ರಕ್ಕೆ ನೀಡಿದ ಕೊಡುಗೆ ಏನು ಎಂಬುದನ್ನು ನೋಡಿದಾಗ ಅದಕ್ಕೆ ಪೂರಕ ಉತ್ತರ ಸಿಗುವುದೇ ಇಲ್ಲ. ಅವರು ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳು ಪ್ರತಿ ಬಾರಿ ಮೋದಿ ಬಳಿಗೆ ಹೋಗಲು ಆಗುತ್ತಾ ಎಂದು ಪ್ರಶ್ನಿಸಿದರಲ್ಲದೆ, ಅವರ ಸಾಧನೆ ಏನು ಎಂಬುದು ಜನರಿಗೆ ತಿಳಿಸಿ ಮತ ಕೇಳಲಿ ಎಂದರು.
        ಜೆಡಿಎಸ್ ಮುಖಂಡ ಗೋವಿಂದರಾಜು ಮಾತನಾಡಿ, ವಾಲ್ಮೀಕಿ ಸಮಾಜವನ್ನು ಬಿಜೆಪಿಯವರು ಕಡೆಗಣಿಸುತ್ತಿದ್ದಾರೆ. ಈ ದೇಶದ ಸಂವಿಧಾನ ತಿದ್ದುಪಡಿ ಮಾಡಿ ಶೋಷಿತರ ಮೀಸಲಾತಿಯನ್ನು ಕಿತ್ತುಹಾಕಬೇಕು ಎಂಬ ಉದ್ದೇಶವನ್ನಿಟ್ಟುಕೊಂಡು ಚುನಾವಣೆಗೆ ಬಂದಿದ್ದಾರೆ. ಈ ಬಗ್ಗೆ ಜನರು ಅರ್ಥ ಮಾಡಿಕೊಂಡು ಎಚ್ಚರವಾಗಿ ಮತದಾನ ಮಾಡಬೇಕಿದೆ. ಈ ಹಿಂದೆ ಭಾಸ್ಕರಪ್ಪನವರು ಗೆದ್ದಾದ ನಂತರ ಈ ವರೆಗೆ ಯಾರು ಜೆಡಿಎಸ್‍ನಿಂದ ಜಯಗಳಿಸಲು ಆಗಲಿಲ್ಲ. ಈ ನಿಟ್ಟಿನಲ್ಲಿ ಈ ಬಾರಿ ದೇವೇಗೌಡರು ಸ್ಪರ್ಧೆ ಮಾಡಿದ್ದು, ಅವರಿಗೆ ಬೆಂಬಲ ನೀಡಬೇಕು ಎಂದು ತಿಳಿಸಿದರು.
         ಕಳೆದ ಹಲವಾರು ವರ್ಷಗಳಿಂದ ಬಾಕಿ ಇರುವ ಅನೇಕ ಕೆಲಸಗಳನ್ನು ದೇವೇಗೌಡರು ಪೂರ್ಣ ಮಾಡಲಿದ್ದಾರೆ. ನೀರಾವರಿ ಕೆಲಸಗಳನ್ನು ದೇವೇಗೌಡರು ಸಂಪೂರ್ಣ ಮಾಡಿ ತುಮಕೂರಿನ ಅಭಿವೃದ್ಧಿ ಮಾಡಲಿದ್ದಾರೆ. ಈ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಾಗಿ ದೇವೇಗೌಡರನ್ನು ಜಯಗಳಿಸಲು  ಶ್ರಮ ವಹಿಸಬೇಕು ಎಂದು ತಿಳಿಸಿದರು. 
        ಕಾಂಗ್ರೆಸ್ ಮುಖಂಡ ತು.ಬಿ.ಮಲ್ಲೇಶ್ ಮಾತನಾಡಿ, ಬಿಜೆಪಿ ಪಕ್ಷವು ಆರ್‍ಎಸ್‍ಎಸ್ ಬೆಂಬಲಿವಾಗಿತ್ತು, ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ವಿರೋಧಿಯಾಗಿದೆ. ಈ ಪಕ್ಷವು ನಮ್ಮನ್ನು ಕಡೆಗಣಿಸಿದೆ. ಈ ಬಾರಿ ಬಿಜೆಪಿ ಪಕ್ಷಕ್ಕೆ ತಕ್ಕ ಪಾಠ ಕಲಿಸುವ ನಿಟ್ಟಿನಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್  ಪಕ್ಷ ಮೈತ್ರಿ ಮಾಡಿಕೊಂಡು ಸುಭದ್ರ ಸರ್ಕಾರ ನಡೆಸುತ್ತಿದೆ. ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ಮಾಜಿ ಪ್ರಧಾನಿ ದೇವೇಗೌಡರು ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದು, ನಮ್ಮ ನಿರ್ಣಾಯಕ ಮತಗಳನ್ನು ದೇವೇಗೌಡರಿಗೆ ನೀಡಿ ಹೆಚ್ಚಿನ ಬಹುಮತದಿಂದ ಗೆಲ್ಲಿಸಿ ಲೋಕಸಭೆಗೆ ಕಳುಹಿಸಬೇಕು ಎಂದು ಕರೆ ನೀಡಿದರು.
       ಪ್ರಾಸ್ತಾವಿಕ ನುಡಿಗಳನ್ನಾಡಿದ ಜೆಡಿಎಸ್ ಎಸ್‍ಟಿ ಘಟಕದ ಜಿಲ್ಲಾಧ್ಯಕ್ಷ ಕೃಷ್ಣಮೂರ್ತಿ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ 1.65 ಸಾವಿರ ನಿರ್ಣಾಯಕ ಮತಗಳಿವೆ. ವಾಲ್ಮೀಕಿ ಜನಾಂಗ ಸೇರಿದಂತೆ ಇತರ ಸಮುದಾಯಗಳ ಬಡವರ ಪರವಾಗಿ ಸೇವೆ ಮಾಡಲು ಮುಂದಾಗಿರುವ ದೇವೇಗೌಡರನ್ನು ಚುನಾಯಿಸಿದರೆ ಅವರಿಗೆ ಕೇಂದ್ರದಲ್ಲಿ ಉನ್ನತ ಹುದ್ದೆ ಸಿಗಲಿದೆ. ಅವರಿಗೆ ಉನ್ನತ ಸ್ಥಾನ ಮಾನಗಳು ದೊರೆತಲ್ಲಿ ತುಮಕೂರು ಕ್ಷೇತ್ರದ ಅಭಿವೃದ್ಧಿ ನಿಶ್ಚಿತವಾಗಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಮೈತ್ರಿ ಪಕ್ಷದ ಮುಖಂಡರಾದ ಶಿವಕುಮಾರ್, ರಾಜಣ್ಣ, ನರೇಶ್, ರಂಗನಾಥ್, ಲಕ್ಷ್ಮಯ್ಯ, ಹನುಮಂತರಾಯಪ್ಪ ಮತ್ತಿತರರು ಉಪಸ್ಥಿತರಿದ್ದರು.
   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link