ತುಮಕೂರು :
ಜೈನ ಸಮಾಜದ ವತಿಯಿಂದ 23ನೇ ತೀರ್ಥಂಕರರಾದ ಶ್ರೀ ಪಾಶ್ರ್ವನಾಥಸ್ವಾಮಿಯ ಮೋಕ್ಷ ಕಲ್ಯಾಣದ ಅಂಗವಾಗಿ ನಗರದ ಜಿನಮಂದಿರದಲ್ಲಿ ಮುಕುಟಸಪ್ತಮಿಯನ್ನ ವೈಭವದಿಂದ ಆಚರಿಸಲಾಯಿತು.
ವಿಶ್ವಶಾಂತಿಗಾಗಿ ಮಂಚಾಂಮೃತ ಅಭಿಷೇಕ ಪೂಜೆ, ಭಗವಂತರಿಗೆ ವಿಶೇಷ ನಿರ್ವಾಣ ಲಾಡು ಸಮರ್ಪಿಸಲಾಯಿತು ಇದೇ ಸಂದರ್ಭದಲ್ಲಿ ಶ್ರವಣಬೆಳಗೊಳದ ತುಮಕೂರು ಜಿಲ್ಲಾ ಜೈನಸಮಾಜದ ವತಿಯಿಂದ ಶ್ರವಣಬೆಳಗೊಳದಲ್ಲಿ ನಡೆದ ಮಹಾಮಸ್ತಕಾಭಿಷೇಕದಲ್ಲಿ ಕಳಶ-ಅಭಿಷೇಕಗಳ ಸೌಭಾಗ್ಯ ಶಾಲಿಗಳಾದ ಕ್ಷೀರಾಭೀಷೇಕ ಪಡೆದ ಜಯರತ್ನ ಡಿ.ಮಹಾಬಲ ರಾಜು ಮತ್ತು ಕುಟುಂಬ, ಅರಿಶಿನ ಅಭಿಷೇಕ ಪಡೆದ ಸುಬೋದ್ ಕುಮಾರ್ ಜೈನ್, ಕಷಾಯ ಅಭಿಷೇಕ ಪಡೆದ ಎ.ಪಾಶ್ರ್ವನಾಥ್ ಅಂಡ್ ಸನ್ಸ್, ಶ್ರೀಗಂಧ ಅಭಿಷೇಕ ಪಡೆದ ರಂಜಿತ ಸುರೇಂದ್ರ, ಚಂದನ ಅಭಿಷೇಕ ಪಡೆದ ಸುಶೀಲಮ್ಮ ಎ. ಅಪ್ಪಣ್ಣಯ್ಯ ಕುಟುಂಬ, ಅಷ್ಠಗಂಧ ಅಭಿಷೇಕ ಪಡೆದ ಪಂಕಜಮ್ಮ ಮತ್ತು ಮಕ್ಕಳು, ಕೇಸರಿ ಅಭಿಷೇಕ ಪಡೆದ ಶೃತಾ ಜೈನ್ ಮಹಿಳಾ ಮಿಲನ್ ತುಮಕೂರು, ಶಾಂತಿಧಾರ ಪಡೆದ ಪ್ರೇಮಾ ಸೂಜಿ ಮತ್ತು ಕುಟುಂಬದವರಿಗೆ ಶ್ರವಣಬೆಳಗೊಳದ ಶ್ರೀಗಳಾದ ಸ್ವಸ್ತ್ರೀಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮಿಗಳು ಮತ್ತು ನರಸಿಂಹರಾಜ ಪುರ ಸಿಂಹನಗದ್ದೆ ಬಸ್ತಿಮಠದ ಪೀಠಾಧ್ಯಕ್ಷರು ತುಮಕೂರು ಜಿಲ್ಲಾ ಜೈನ ಸಮಾಜದ ಗೌರವಾಧ್ಯಕ್ಷರು ಆದ ಶ್ರೀ ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿಗಳು ಆಶೀರ್ವದಿಸಿ ಕಳುಹಿಸಿದ್ದ ಬೆಳ್ಳಿಯ ಸ್ಮರಣ ಕಳಶಗಳನ್ನ ಅಧ್ಯಕ್ಷರಾದ ಡಿ.ಎಸ್. ಕುಮಾರ್ ಸೌಭಾಗ್ಯ ಶಾಲಿಗಳಿಗೆ ನೀಡಿಗೌರವಿಸಿದರು.
ದಿ.ಡಿ.ಎಸ್. ಕಾಂತರಾಜಯ್ಯ ಲೀಲಾವತಿ ಟ್ರಸ್ಟ್‍ವತಿಯಿಂದ ಪೂಜಾ ಸೇವೆಯನ್ನು ಮತ್ತು ಎ.ವಿ.ಸುರೇಂದ್ರಕುಮಾರ್ ಮಕ್ಕಳಿಂದ ಆಹಾರ ದಾನ ಸೇವೆಗಳನ್ನು ನೆರವೇರಿಸಲಾಯಿತು.
ಆರ್ಯೀಕ ರತ್ನ ಸಫಲಮತಿ ಮಾತಾಜಿ ದಿವ್ಯಸಾನಿಧ್ಯವಹಿಸಿ ಆಶೀರ್ವಚನ ನೀಡಿದರು, ಜೈನ ಸಮಾಜದ ಅಧ್ಯಕ್ಷ ಡಿ.ಎಸ್. ಕುಮಾರ್ ಸಮಾರಂಭದ ಅಧ್ಯಕ್ಷತೆವಹಿಸಿದ್ದರು.
ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷ ಸನ್ಮತಿಕುಮಾರ್, ಉದ್ಯಮಿ ಜಿ.ಪಿ. ಉಮೇಶ್‍ಕುಮಾರ್, ವಿಮಲ್‍ಕುಮಾರ್, ನಿರ್ದೇಶಕರಾದ ಟಿ.ಎ. ಅನಂತರಾಜು, ಪ್ಲವರ್ ಸುರೇಶ್, ಸುನಿಲ್‍ಕುಮಾರ್, ಎ.ಪಿ. ಬಾಹುಬಲಿ, ಪಚ್ಚೇಶ್‍ಜೈನ್, ಪೇಪರ್ ಪ್ರಸಾದ್, ಕೆ.ವಿ. ವೀರೇಂದ್ರ, ಪದ್ಮೇಂದ್ರಕುಮಾರ್, ಅಜಿತ್‍ಕುಮಾರ್, ಶ್ರೇಣಿಕ್ ಜೈನ್, ಎಂ.ಎಸ್. ರಮೇಶ್, ರಾಜ್‍ಕುಮಾರ್, ಶಾಂತಮ್ಮ, ವೈ.ಡಿ.ಶಾಮಲಾಧರಣೇಂದ್ರಯ್ಯ, ಮಂಜುಳಾ ಚಂದ್ರಪ್ರಭ, ಪದ್ಮಸುರೇಂದ್ರ, ಕೆಇಬಿ ಪದ್ಮ, ಜೈಶೀಲಾ, ಮಾಲಾದಿನೇಶ್, ಶಶಿರಮೇಶ್, ತ್ರಿಶಲಾ ಜೈನ್ ಮಹಿಳಾ ಮಿಲನ್‍ನ ಸುಜಾತ ಸುಮತಿಕುಮಾರ್, ಪದ್ಮಾಂಭ ಜೈನ ಮಹಿಳಾ ಸಮಾಜದ ಜಲಜಾ ಜೈನ್, ಪದ್ಮಶ್ರೀ, ಕಸ್ತೂರಮ್ಮ ಇತರರು ಭಾಗವಹಿಸಿದ್ದರು. ಪುರೋಹಿತ್ ಮಹಾವೀರ್ ಅಭಿಷೇಕ ಪೂಜಾಕಾರ್ಯ ನಡೆಸಿಕೊಟ್ಟರು.