ತುಮಕೂರು
ಜಿಲ್ಲೆಯ ಜೈನ ಸಮಾಜದಲ್ಲಿ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಘಟನೆಗಳು ಸಮಾಜದ ಹಿತಕ್ಕೆ ಹಾಗೂ ಬೆಳವಣಿಗೆಗೆ ಕುಂದು ತರುವಂತಹದ್ದಾಗಿದ್ದು, ಅಹಿಂಸಾ ಧರ್ಮ, ಶಾಂತಿ ಧರ್ಮ ಎಂದು ಕರೆಸಿಕೊಳ್ಳುವ ಜೈನ ಧರ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ತಲೆ ತಗ್ಗಿಸುವಂತಹದ್ದಾಗಿದ್ದು ಈ ನಿಟ್ಟಿನಲ್ಲಿ ಈಗಿರುವ ಎಲ್ಲಾ ನಿರ್ದೇಶಕರುಗಳನ್ನು ಅಧಿಕಾರದಿಂದ ಬಿಡುಗಡೆಗೊಳಿಸಿ ಮುಂದಿನ ದಿನಗಳಲ್ಲಿ ಜೈನ ಸಮಾಜದ ಬಲವರ್ಧನೆಗೆ ಯುವ ಶಕ್ತಿಗೆ ಆಧ್ಯತೆ ನೀಡಲಾಗುವುದೆಂದು ಜಿಲ್ಲಾ ಜೈನ ಸಮಾಜದ ಗೌರವಾಧ್ಯಕ್ಷರು ಹಾಗೂ ಶ್ರೀಕ್ಷೇತ್ರ ನರಸಿಂಹರಾಜ ಪುರ ಸಿಂಹನಗದ್ದೆ ಬಸ್ತಿ ಮಠದ ಪೀಠಾಧ್ಯಕ್ಷರೂ ಆದ ಸ್ವಸ್ತೀಶ್ರೀ ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ತಿಳಿಸಿದರು.
ಅವರಿಂದು ನಗರದ ಜಿನಮಂದಿರದ ತ್ರಿಲೋಕ ಭವನದಲ್ಲಿ ನಡೆದ ವಿಶೇಷ ಸದಸ್ಯರ ಸಭೆಯ ದಿವ್ಯ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.ಸಮಾಜದಲ್ಲಿನ ಇತ್ತೀಚಿನ ಬೆಳವಣಿಗೆ ಹಾಗೂ ಸಮಾಜದ ಅಂಗಸಂಸ್ಥೆಗಳ ವ್ಯವಹಾರದ ಹಣವನ್ನ ಸಂಘದ ಬ್ಯಾಂಕ್ ಖಾತೆಗೆ ಪಾವತಿಸದಿರುವ ಬಗ್ಗೆ ಅಧ್ಯಕ್ಷರು ನೋಟೀಸು ನೀಡಿರುವ ಬಗ್ಗೆ ಚರ್ಚಿಸಿ ಹಣ ಪಾವತಿಸಬೇಕಾಗಿರುವ ಎಲ್ಲರೂ ನೇರವಾಗಿ ಬ್ಯಾಂಕ್ ಖಾತೆಗೆ ಹಣ ಪಾವತಿಸುವಂತೆ ಸೂಚಿಸಿದರು. ಇತ್ತೀಚಿನ ದಿನಗಳಲ್ಲಿ ಸಂಘದ ನಿಯಮ ಸಮಾಜದ ಗೌರವಕ್ಕೆ ದಕ್ಕೆ ತರುವಂತೆ ವರ್ತಿಸಿರುವ ನಿರ್ದೇಶಕರುಗಳಿಗೆ ಹಾಗೂ ಸಂಘದ ಹೆಸರಿನಲ್ಲಿ ನಕಲಿ ಲೆಟರ್ ಹೆಡ್ ಹಾಗೂ ಸೀಲ್‍ಗಳನ್ನು ಮಾಡಿ ಅಧ್ಯಕ್ಷರು ಹಾಗೂ ಗೌರವಾಧ್ಯಕ್ಷರುಗಳಿಗೆ ತಿಳಿಸದೇ ಡಿ.ಆರ್. ಕಚೇರಿಗೆ ಸುಳ್ಳು ಮಾಹಿತಿ ನೀಡಿರುವುದು, ಬ್ಯಾಂಕ್‍ಗಳಿಗೆ ನಕಲಿ ದಾಖಲೆ ನೀಡಿ ಖಾತೆ ಬದಲಾವಣೆಗೆ ಬೆದರಿಕೆ ಹಾಕಿರುವುದರ ಬಗ್ಗೆ ಶ್ರೀಗಳು ತೀವ್ರ ಅಸಮದಾನ ವ್ಯಕ್ತಪಡಿಸಿ ಇದು ಸಮಾಜದ್ರೋಹ ಹಾಗೂ ಅಪರಾಧ ಕೃತ್ಯವಾಗಿದೆ ಎಂದ ಶ್ರೀಗಳು ಈ ಕೃತ್ಯವೆಸಗಿದ ಎಲ್ಲಾ ನಿರ್ದೇಶಕರುಗಳು ಸಮಾಜದ ಹಿತದೃಷ್ಠಿಯಿಂದ ಎಲ್ಲ ಲೆಕ್ಕಪತ್ರಗಳನ್ನು ನೀಡಿ ರಾಜಿನಾಮೆ ಕೊಟ್ಟು ಅಧಿಕಾರದಿಂದ ನಿರ್ಗಮಿಸುವಂತೆ ಸೂಚಿಸಿದ ಶ್ರೀಗಳು ಸಮಾಜದ ವಿಷಯದಲ್ಲಿ ಯಾವುದೇ ಲಿಖಿತ ಮಾಹಿತಿ ಕೇಳಿದರೆ ಒದಗಿಸಬೇಕೇ ವಿನಃ ಬೆದರಿಕೆ ಹಾಕುವುದು, ಹಲ್ಲೆ ಮಾಡುವುದು ಸಮಂಜಸವಲ್ಲ ಎಂದರು.
ನಗರದ ಜಿನಮಂದಿರ, ತ್ರಿಲೋಕ ಭವನ, ಮಹಾವೀರಭವನ, ಜೈನ ಭವನ ಹಾಗೂ ಮಂದಾರಗಿರಿ ಕ್ಷೇತ್ರಗಳನ್ನು ನೋಡಿಕೊಳ್ಳಲು ತಾತ್ಕಾಲಿಕವಾಗಿ ಯುವಕರಿಗೆ ಆಧ್ಯತೆ ನೀಡಲಾಗಿದ್ದು ಸಮಾಜದ ಅಧ್ಯಕ್ಷರಾದ ಡಿ.ಎಸ್. ಕುಮಾರ್ ಅಧ್ಯಕ್ಷತೆಯಲ್ಲಿ ಕಾರ್ಯ ನಿರ್ವಹಿಸುವಂತೆ ಸೂಚಿಸಲಾಗಿದೆ ಎಂದ ಅವರು ಮುಂದಿನ ಕಾರ್ಯಕಾರಿ ಸಮಿತಿ ಆಯ್ಕೆಯಾಗುವವರೆಗೆ ಕಾರ್ಯ ನಿರ್ವಹಿಸಲು ಸೂಚಿಲಾಗಿದೆ ಎಂದರು. ಅಲ್ಲದೆ ಸಮಾಜದ ಜನಗಣತಿ, 18 ವರ್ಷ ಮೇಲ್ಪಟ್ಟವರಿಗೆ ಸದಸ್ಯತ್ವ ನೀಡುವುದು, ಮುಂದಿನ ಅಧ್ಯಕ್ಷರನ್ನು ಸಮಾಜದ ಬಂಧುಗಳೇ ನೇರವಾಗಿ ಆಯ್ಕೆಮಾಡುವುದು ಮುಂದಿನ ಕಾರ್ಯಕ್ರಮವಾಗಿದೆ ಎಂದರು.
ಅಧ್ಯಕ್ಷ ಡಿ.ಎಸ್. ಕುಮಾರ್, ಅಧ್ಯಕ್ಷತೆವಹಿಸಿ ಮಾತನಾಡಿ ಸಮಾಜದವರಿಂದ ಇತ್ತೀಚೆಗೆ ನಡೆದ ಅಹಿತಕರ ಘಟನೆಗಳು ಸಮಾಜವೇ ತಲೆ ತಗ್ಗಿಸುವಂತಹದ್ದಾಗಿದ್ದು, ಅಲ್ಲದೆ ಸಮಾಜದ ದಾಖಲೆಗಳನ್ನ ತಿದ್ದಿರುವುದು, ನಕಲಿ ದಾಖಲೆಗಳ ಸೃಷ್ಠಿ, ಲೆಟರ್‍ಹೆಡ್, ಸೀಲುಗಳ ನಕಲಿ ತಯಾರಿಕೆ ಅಪರಾಧ ಕೃತ್ಯ ಹಾಗೂ ಕಾನೂನು ಭಾಹೀರವಾಗಿದ್ದು ಇದು ಅತ್ಯಂತ ಹೇಯ ಕೃತ್ಯ ಎಂದು ವಿಷಾದಿಸಿದಿರು.
ಸಭೆಯಲ್ಲಿ ಜಿ.ಡಿ.ವರ್ಧಮಾನ್, ಎಂ.ಜೆ. ಬ್ರಹ್ಮಪ್ಪ, ಟಿ.ಪಿ. ಜಿನೇಂದ್ರ, ಟಿ.ಪಿ. ಸುನೀಲ್, ನಂದಕುಮಾರ್, ಪುಷ್ಪರಾಜ್, ಟಿ.ಎನ್. ಅಜಿತ್, ಆನಂದ್, ಧರಣೇಂದ್ರಕುಮಾರ್, ಎಂ.ಎಸ್. ರಮೇಶ್, ಮಂಡಿ ನಾಗರಾಜ್, ಕೆ.ಪಿ.ವೀರೇಂದ್ರ, ಬಾಹುಬಲಿ, ಟಿ.ಎ. ಅನಂತರಾಜು, ಬಿ.ಜೆ.ಮಹಾವೀರ್, ಬಿ.ಜೆ. ಸುರೇಶ್, ಪಾಶ್ರ್ವನಾಥ, ಎ.ಎನ್. ಮಂಜುನಾಥ್, ಪಚ್ಚೇಶ್‍ಜೈನ್, ವಾಟರ್ ಅಜಿತ್, ಮಂಜುನಾಥ್, ಪೇಪರ್ ಪ್ರಸಾದ್‍ಜೈನ್, ಪವನ್, ಟಿ.ಕೆ.ರಂಗನಾಥ, ಆದರ್ಶ, ಬ್ರಹ್ಮಪ್ರಕಾಶ್, ಪದ್ಮಶ್ರೀರಾಜೇಶ್, ಶಾಮಲಾ ಧರಣೇಂದ್ರಯ್ಯ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ