ಟಿಕೇಟ್ ಪಾಲಿಗೆ ಕೆಎಸ್‍ಕೆ ಬರುವುದನ್ನು ತಪ್ಪಿಸಿ

ಹುಳಿಯಾರು:

ಲೋಕೇಶ್ ಗೆಲ್ಲಿಸಿ, ನನ್ನ ಶಕ್ತಿ ಹೆಚ್ಚಿಸಿ : ಸಚಿವ ಮಾಧುಸ್ವಾಮಿ

      ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಲೋಕೇಶ್ ಅವರನ್ನು ಗೆಲ್ಲಿಸಿ ಮುಂಬರುವ ಜಿಪಂ, ತಾಪಂ ಚುನಾವಣೆಯ ಸಂದರ್ಭದಲ್ಲಿ ತಾಲೂಕಿನಲ್ಲಿ ಕೆ.ಎಸ್.ಕಿರಣ್‍ಕುಮಾರ್ ಟಿಕೆಟ್ ಹಂಚಿಕೆಯಲ್ಲಿ ಪಾಲು ಕೇಳಲು ಬರವುದನ್ನು ತಪ್ಪಿಸಿ ಎಂದು ಸಚಿವರಾದ ಜೆ.ಸಿ.ಮಾಧುಸ್ವಾಮಿ ಅವರು ಕರೆ ನೀಡಿದರು.

ಹುಳಿಯಾರು ಸಮೀಪದ ಹುಲ್ಕಲ್ ದುರ್ಗಮ್ಮ ಬೆಟ್ಟದಲ್ಲಿ ಬುಧವಾರ ಏರ್ಪಡಿಸಿದ್ದ ವಿಧಾನ ಪರಿಷತ್ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಇರೋದು ಬಿಜೆಪಿ ಮತ್ತು ಜೆಡಿಎಸ್ ಎರಡೇ ಪಕ್ಷ. ಕಾಂಗ್ರೆಸ್ ಇಲ್ಲಿ ಇಲ್ಲವೇ ಇಲ್ಲ. ಇದಕ್ಕೆ ಮಂಗಳವಾರ ನಡೆದ ಕಾಂಗ್ರೆಸ್ ಪಕ್ಷದ ಸಭೆಗೆ ಬಂದಿದ್ದ ಜನಸಂಖ್ಯೆಯೇ ನಿದರ್ಶನ ಎಂದರಲ್ಲದೆ ಕಳೆದ ಚುನಾವಣೆಯಲ್ಲಿ ಮುಖವನ್ನೇ ನೋಡದೆ ಕಾಂತರಾಜು ಅವರನ್ನು ಗೆಲ್ಲಿಸಿದ್ದೀರಿ. ಆದರೆ ನಮ್ಮ ಅಭ್ಯರ್ಥಿಗಳನ್ನು ನಿಮಗೆ ತೋರಿಸಿ ಮತ ಕೇಳುತ್ತಿದ್ದು ಆಮಿಷಗಳಿಗೆ ಒಳಗಾಗದೆ ಲೋಕೇಶ್ ಅವರಿಗೆ ಮತ ನೀಡಿ ಎಂದರು.

ತಾಪಂ ಮಾಜಿ ಸದಸ್ಯರುಗಳಾದ ನಿರಂಜನ್, ಕೆಂಕೆರೆ ನವೀನ್, ಕೇಶವಮೂರ್ತಿ, ಜಯಣ್ಣ, ರುದ್ರೇಶ್, ದುರ್ಗಮ್ಮ ದೇವಸ್ಥಾನ ಕಮಿಟಿಯ ನಾಗರಾಜು, ಬಗರ್‍ಹುಕುಂ ಕಮಿಟಿಯ ಶಿವಶಂಕರ್, ಬಸವರಾಜು ಮತ್ತಿತರರು ಉಪಸ್ಥಿತರಿದ್ದರು. ಹುಳಿಯಾರು ಸಮೀಪಮ ಹುಲ್ಕಲ್ ದುರ್ಗಮ್ಮ ಬೆಟ್ಟದಲ್ಲಿ ಬುಧವಾರ ವಿಧಾನ ಪರಿಷತ್ ಚುನಾವಣಾ ಪ್ರಚಾರ ಸಭೆ ನಡೆಯಿತು.

ಕಳೆದ ಚುನಾವಣೆಯಲ್ಲಿ ಟಿಕೇಟ್‍ಗಳನ್ನು ಹಂಚಿಕೊಂಡ ಪರಿಣಾಮ ನಾವು ಕೆಲ ಕಡೆ ಸೋತೆವು. ಇಲ್ಲವಾಗಿದ್ದರೆ ಇನ್ನೂ ಅನೇಕ ಕಡೆ ಗೆಲ್ಲುತ್ತಿದ್ದೆವು. ಈ ಭಾರಿಯಂತೂ ನನಗೆ ಜಿಪಂ, ತಾಪಂ ಸ್ಥಾನಗಳನ್ನು ಭಾಗ ಮಾಡಿಕೊಳ್ಳಲು ಇಷ್ಟವಿಲ್ಲ. ಹಾಗಾಗಿ ಲೋಕೇಶ್‍ಗೆ ಮೊದಲ ಪ್ರಾಶಸ್ತ್ಯದ ಮತಗಳನ್ನು ನೀಡಿ ಜಯಶೀಲರನ್ನಾಗಿ ಮಾಡಿ ನಮ್ಮ ಶಕ್ತಿಯನ್ನು ತೋರಿಸಿ ಪಕ್ಷದಲ್ಲಿ ನನ್ನ ಪ್ರಭಾವ ಹೆಚ್ಚುವಂತೆ ಮಾಡಿ.

-ಜೆ.ಸಿ.ಮಾಧುಸ್ವಾಮಿ, ಸಚಿವರು

ಮೈತ್ರಿಯಲ್ಲೂ ದೇವೇಗೌಡರನ್ನು ಸೋಲಿಸಿದೆವು :

ಲೋಕಸಭಾ ಚುನವಾಣೆಯಲ್ಲಿ ದೇವೇಗೌಡರ ವಿರುದ್ಧ ಗೆಲ್ಲಲಾಗುವುದಿಲ್ಲ ಎನ್ನುತ್ತಿದ್ದರು. ಆದರೆ ಕಾಂಗ್ರೆಸ್, ಜೆಡಿಎಸ್ ಮೈತ್ರಿಯ ನಡುವೆಯೂ ದೇವೇಗೌಡರನ್ನು ಸೋಲಿಸಲಾಯಿತು. ಉಪ ಚುನಾವಣೆ, ವಿಧಾನ ಪರಿಷತ್ ಚುನಾವಣೆ ಹೀಗೆ ಇದೂವರೆಗೂ ನಡೆದ ಎಲ್ಲಾ ಚುನಾವಣೆಯಲ್ಲೂ ಬಿಜೆಪಿ ಗೆದ್ದಿದೆ. ಈಗ ಲೋಕೇಶ್ ಅವರನ್ನೂ ಗೆಲ್ಲಿಸಿ ಜಿಲ್ಲೆಯನ್ನು ಬಿಜೆಪಿಯ ಭದ್ರಕೋಟೆಯನ್ನಾಗಿಸಿ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link