ಟ್ರಾನ್ಸ್’ಫಾರ್ಮರ್‍ ನಲ್ಲಿ ಬೆಂಕಿ : 4 ತೆಂಗಿನ ಮರಗಳು ಭಸ್ಮ

ಹುಳಿಯಾರು: 

ಟ್ರಾನ್ಸ್‍ಫಾರ್ಮರ್ ಬ್ಲಾಸ್ಟ್ ನಿಂದಾಗಿ 4 ತೆಂಗಿನ ಮರಗಳು ಸುಟ್ಟು ಭಸ್ಮವಾದ ಘಟನೆ ಹಂದನಕೆರೆ ಹೋಬಳಿ ಮತಿಘಟ್ಟ ಸಮೀಪದ ಬೆಳಗಹಳ್ಳಿ ಬಳಿ ಜರುಗಿದೆ.

    ಮತಿಘಟ್ಟದಿಂದ ಉಪ್ಪಾರಹಳ್ಳಿಗೆ ಮೋಟರ್ ಲೈನ್ ಕರೆಂಟ್ ಸರಬರಾಜು ಮಾಡಲು ಈ ಟ್ರಾನ್ಸ್‍ಫಾರ್ಮರ್ ಅಳವಡಿಸಲಾಗಿತ್ತು. ಆದರೆ ಸಾಮಾರ್ಥಕ್ಯೂ ಮೀರಿ ರೈತರು ಈ ಟಿಸಿಯಿಂದ ವಿದ್ಯುತ್ ಸಂಪರ್ಕ ಪಡೆದಿದ್ದರು. ಪರಿಣಾಮ ಗುರುವಾರ ರಾತ್ರಿ ಓವರ್ ಲೋಡ್ ಆಗಿ ಟಿಸಿ ಬ್ಲಾಸ್ಟ್ ಆಗಿದೆ.

ಟಿಸಿ ಬ್ಲಾಸ್ಟ್‍ನಿಂದ ಹೊತ್ತಿದ ಬೆಂಕಿ ಸುತ್ತಮುತ್ತಲ 4 ಫಲಭರಿತ ತೆಂಗಿನ ಮರಗಳನ್ನು ಸುಟ್ಟಿವೆ. ಅಲ್ಲದೆ ಗುರುವಾರ ರಾತ್ರಿಯಿಂದ ಈ ಭಾಗದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡು ರೈತರಿಗೆ ತೊಂದರೆಯಾಗಿದೆ.

      ಸ್ಥಳಕ್ಕೆ ಹಂದನಕೆರೆ ಬೆಸ್ಕಾಂ ಶಾಖಾಧಿಕಾರಿ ರಾಜಶೇಖರ್ ಅವರು ಭೇಟಿ ನೀಡಿ ಘಟನೆಯ ವಿವರ ಪಡೆದು ಮೇಲಧಿಕಾರಿಗಳಿಗೆ ತಿಳಿಸಿದ್ದಾರೆ. ಟ್ರಾನ್ಸ್‍ಫಾರ್ಮರ್ ಬದಲಾವಣೆಗೆ ನುರಿತ ಕೆಲಸಗಾರರ ತಂಡ ಬರಬೇಕಿದ್ದು ಶನಿವಾರ ಬರುವ ಭರವಸೆಯನ್ನು ನೀಡಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link