ಟ್ರಾೃಕ್ಟರ್ ಡಿಕ್ಕಿ: ಬೈಕ್ ಸವಾರ ಸಾವು

ತುಮಕೂರು
              ತುಮಕೂರು ತಾಲ್ಲೂಕು ಅರಕೆರೆ ಬಳಿ ಇತ್ತೀಚೆಗೆ ಬೆಳಗ್ಗೆ ಸುಮಾರು 9-45 ರಲ್ಲಿ ಚಲಿಸುತ್ತಿದ್ದ ಬೈಕ್‌ಗೆ ಟ್ರಾೃಕ್ಟರ್ ಡಿಕ್ಕಿ ಹೊಡಿದ ಪರಿಣಾಮ, ಬೈಕ್ ಸವಾರ ಶಿವಕುಮಾರ್ ಎಂಬುವವರು ಸ್ಥಳದಲ್ಲೇ ಅಸುನೀಗಿದ ಘಟನೆ ನಡೆದಿದೆ. ಹಿಂಬದಿ ಕುಳಿತಿದ್ದ ಅವರ ಪುತ್ರ ಸುದೀಪ್ (14) ಗಾಯಗೊಂಡಿದ್ದಾನೆ. ಈ ಬಗ್ಗೆ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಐಪಿಸಿ ಕಲಂ 279, 337, 304 (ಎ) ಪ್ರಕಾರ ಮೊಕದ್ದಮೆ ದಾಖಲಾಗಿದೆ.

Recent Articles

spot_img

Related Stories

Share via
Copy link