ಡಾ||ಸರ್ವಪಲ್ಲಿ ರಾಧಾಕೃಷ್ಣನ್‍ರವರ ಜನ್ಮದಿನಾಚರಣೆ ಹಾಗೂ ಶಿಕ್ಷಕರ ದಿನಾಚರಣೆ

ಹಿರಿಯೂರು:
           ಸಮಾಜದಲ್ಲಿ ಶಿಕ್ಷಕರ ವೃತ್ತಿ ಬಹಳ ಪವಿತ್ರವಾದುದು, ಈ ದೇಶದ ಬಾವಿ ಭವಿಷ್ಯದ ಪ್ರಜೆಗಳನ್ನು ತಯಾರುಮಾಡುವ ಹೊಣೆಗಾರಿಕೆ ಶಿಕ್ಷಕರ ಮೇಲಿದೆ, ಆದ್ದರಿಂದ ಶಿಕ್ಷಕರು ತಮ್ಮ ಹೊಣೆಗಾರಿಕೆಯನ್ನು ಅರಿತು ತುಂಬಾ ಜವಾದ್ದಾರಿಯುತವಾಗಿ ಹಾಗೂ ಬದ್ಧತೆಯಿಂದ ಕೆಲಸ ಮಾಡಬೇಕಿದೆ ಎಂಬುದಾಗಿ ಕ್ಷೇತ್ರದ ಶಾಸಕಿ ಶ್ರೀಮತಿ ಪೂರ್ಣಿಮ ಶ್ರೀನಿವಾಸ್ ಹೇಳಿದರು.
             ನಗರದ ಗುರುಭವನದಲ್ಲಿ ಜಿಲ್ಲಾಪಂಚಾಯ್ತಿ, ತಾಲ್ಲೂಕುಪಂಚಾಯ್ತಿ, ಸಾರ್ವಜನಿಕಶಿಕ್ಷಣಇಲಾಖೆ, ತಾಲ್ಲೂಕು ಶಿಕ್ಷಕರ ದಿನಾಚರಣಾ ಸಮಿತಿ ಹಿರಿಯೂರು ಇವರುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಡಾ||ಸರ್ವಪಲ್ಲಿ ರಾಧಾಕೃಷ್ಣನ್‍ರವರ ಜನ್ಮದಿನಾಚರಣೆ ಹಾಗೂ ಶಿಕ್ಷಕರ ದಿನಾಚರಣಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
              ವಿದ್ಯಾರ್ಥಿಗಳಿಗೆ ವಿದ್ಯಾ, ಬುದ್ದಿ, ಕಲಿಸುವ ಗುರುಗಳು ಸಮಾಜಕ್ಕೆ ಒಂದು ಮಾದರಿಯಾಗಿರಬೇಕು, ಶಿಕ್ಷಕ-ಶಿಕ್ಷಕಿಯರಿಗೆ ಸಾಕಷ್ಟು ಸಮಸ್ಯಗಳಿವೆ ಹಾಗೂ ಒತ್ತಡಗಳಿವೆ, ಆದರು ಈ ಸಮಸ್ಯಗಳನ್ನು ತಮ್ಮ ನೋವು-ನಲಿವುಗಳನ್ನು ವೈಯಕ್ತಿಕ ತೊಂದೆರೆಗಳನ್ನು ಯಾವುದನ್ನು ಶಾಲೆಯವರೆಗೆ ತರಬಾರದು, ಶಾಲೆಗೆ ಬಂದರೆ ಮುಕ್ತಮನಸ್ಸಿನಿಂದ ವಿದ್ಯಾರ್ಥಿಗಳಿಗೆ ಭೋಧಿಸಬೇಕು ಎಂದರು.
ಸಮಾಜದಲ್ಲಿ ಯಾವುದೇ ಅಧಿಕಾರಿ ಕರ್ತವ್ಯದಲ್ಲಿ ತಪ್ಪು ಮಾಡಿದರೆ ಅದನ್ನು ಕ್ಷಮಿಸಬಹುದು ಅಲ್ಲದೆ ಆ ತಪ್ಪನ್ನು ತಿದ್ದಿಕೊಂಡು ಸರಿಮಾಡಿಕೊಳ್ಳಬಹುದು ಆದರೆ ಒಬ್ಬ ಶಿಕ್ಷಕ ಕರ್ತವ್ಯದಲ್ಲಿ ತಪ್ಪು ಮಾಡಿದರೆ ಇಡೀ ವಿದ್ಯಾರ್ಥಿಸಮೂಹ ಹಾಗೂ ಸಮಾಜ ಅದಕ್ಕೆ ಬಲಿಯಾಗುತ್ತದೆ. ಆದ್ದರಿಂದ ಶಿಕ್ಷಕರು ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಬಹಳ ಎಚ್ಚರಿಕೆ ಹಾಗೂ ಜವಾದ್ದಾರಿಯಿಂದ ಕೆಲಸ ನಿರ್ವಹಿಸಬೇಕು ಎಂದರು.
             ಬದಲಾವಣೆ ಜಗದ ನಿಯಮ ಎಂಬಂತೆ ಈಗ ಕಾಲ ಬದಲಾಗಿದೆ ಶಿಕ್ಷಣ ಕ್ಷೇತ್ರದಲ್ಲಿ ಹಳೆಯ ಶಿಕ್ಷಣ ಪದ್ದತಿಗಳಿಗಿಂತ ಹೊಸ ಹೊಸ ಅವಿಷ್ಕಾರಗಳು ಬಂದಿವೆ ಆದ್ದರಿಂದ ಶಿಕ್ಷಕರು ಸಹ ತಮ್ಮ ಭೋದನೆಯಲ್ಲಿ ಹೊಸ ಹೊಸ ಅವಿಷ್ಕಾರಗಳನ್ನು ಅಳವಡಿಸಿಕೊಳ್ಳವ ಮೂಲಕ ಆಪ್‍ಟುಡೇಟ್ ಆಗಬೇಕಿದೆ ಪ್ರತಿದಿನ ಶಿಕ್ಷಕರು ತಾವುಕಲಿಯುವ ಮೂಲಕ ವಿದ್ಯಾರ್ಥಿಗಳಿಗೂ ಸಹ ಕಲಿಸಬೇಕು ಎಂದರು.
              ಆರಂಭದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸಿ.ವಿ.ನಟರಾಜ್ ಮಾತನಾಡಿ, ಸರ್ವಪಲ್ಲಿ ರಾಧಾಕೃಷ್ಣನ್‍ರವರು ಒಬ್ಬ ಆದರ್ಶ ಶಿಕ್ಷಕ, ಶಿಕ್ಷಣಪ್ರೇಮಿ, ಶಿಕ್ಷಣತಜ್ಞರು ಹಾಗೂ ಒಬ್ಬ ಮಹಾನ್‍ತತ್ವಜ್ಞಾನಿ ಯಾಗಿದ್ದರು. ಒಬ್ಬ ಸಾಮಾನ್ಯ ಶಿಕ್ಷಕರು ಸಹ ಈ ದೇಶದ ಅತ್ಯುತ್ತಮ ಪದವಿ ಅಲಂಕರಿಸಲು ಸಾದ್ಯ ಅಲ್ಲದೆ ಸಮರ್ಥವಾಗಿ ಈ ದೇಶದ ಆಡಳಿತ ನಡೆಸಲು ಸಾದ್ಯ ಎಂಬುದನ್ನು ಈ ಜಗತ್ತಿಗೆ ತಿಳಿಸಿಕೊಟ್ಟವರು ಆಗಿದ್ದಾರೆ. ಇಂತಹ ಮಹಾನ್‍ವ್ಯಕ್ತಿಯ ನೆನಪಿಗಾಗಿ ಅವರ ಜನ್ಮಾ ದಿನಾಚರಣೆಯನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ ಎಂಬುದಾಗಿ ಹೇಳಿದರು.
             ವಿಶೇಷಉಪನ್ಯಾಸ ನೀಡಿದ ತುಮಕೂರು ಅಧ್ಯಯನ ಕೇಂದ್ರದಪ್ರಾಧ್ಯಾಪಕರಾದ ನಾಗಭೂಷಣ್‍ಬಗ್ಗನಡುರವರು ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಇಂದು ಅನೇಕ ಆಧುನಿಕ ತಂತ್ರಜ್ಞಾನಗಳು ಅವಿಷ್ಕಾರಗೊಂಡಿದ್ದು ಆಧುನಿಕ ಶಿಕ್ಷಣ ಪದ್ದತಿಗಳನ್ನು ಅಳವಡಿಸಿಕೊಳ್ಳಬೇಕಿದೆ, ಆದರೆ ಕೆಲವು ಸಂಪ್ರದಾಯವಾದಿಗಳು ನಮ್ಮ ಸಂಸ್ಕøತಿ ಸಂಸ್ಕಾರ ಉಳಿಯಬೇಕಾದರೆ ವೇದಗಳ ಋಷಿಮುನಿಗಳ ಕಾಲದ ಗುರುಕುಲಪದ್ದತಿಯನ್ನು ಅಳವಡಿಸಿಕೊಳ್ಳಬೇಕು ಎಂಬುದಾಗಿ ಬೊಬ್ಬೆಯಿಡುತ್ತಿದ್ದಾರೆ. ಆದರೆ ಆಧುನಿಕತೆಯನ್ನು ಅಳವಡಿಸಿಕೊಳ್ಳದೆ ಶಿಕ್ಷಣಕ್ಷೇತ್ರ ಬೆಳೆಯಲು ಸಾಧ್ಯವಿಲ್ಲ ಎಂಬುದಾಗಿ ಹೇಳಿದರು.
              ಇಂತಹ ಸಂಕೀರ್ಣ ಸಂದರ್ಭದಲ್ಲಿ ನಮ್ಮ ಶಿಕ್ಷಕರು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಕಾಲಬಂದಿದೆ ನಮಗೆ ಆಧುನಿಕ ವಿಧಾನದ ಶಿಕ್ಷಣ ಬೇಕಾ ಅಥವಾ ಗುರುಕುಲಪದ್ದತಿ ಬೇಕಾ ಎಂಬುದನ್ನು ತೀರ್ಮಾನಿಸಬೇಕಿದೆ. ಈ ಎಲ್ಲಾ ಗೊಂದಲಗಳಿಗೆ ತೆರೆಯೆಳಿಯಬೇಕೆಂದರೆ ತಮ್ಮ ವಿಚಾರದಾರೆಗಳಿಂದ ಈ ಸಮಾಜವನ್ನು ತಿದ್ದಿದ ಮಹಾನ್ ಶಿಕ್ಷಕರುಗಳಾದ ಬುದ್ದ, ಬಸವ ಅಂಬೇಡ್ಕರ್‍ರವರ ದಾರಿಯಲ್ಲಿ ನಾವು-ನಿವೇಲ್ಲಾ ಸಾಗಬೇಕಿದೆ ಶತಮಾನಗಳಿಂದ ಶಿಕ್ಷಣದಿಂದ ವಂಚಿತರಾಗಿದ್ದ ಈ ಸಮಾಜದ ಶೋಷಿತವರ್ಗದವರಿಗೆ ಶೂದ್ರಸಮುದಾಯದವರಿಗೆ ಅದರಲ್ಲೂ ಅಕ್ಷರವಂಚಿತರಾದ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಲು ಶ್ರಮಿಸಿದ ಜೋತಿಬಾಫುಲೆ, ಸಾವಿತ್ರಿಬಾಯಿಫುಲೆ ಅವರ ಸ್ಪೂರ್ತಿಯಲ್ಲಿ ನಮ್ಮ ಶಿಕ್ಷಕರಸಮುದಾಯ ಕರ್ತವ್ಯನಿರ್ವಹಿಸಬೇಕಿದೆ ಎಂದರು.
            ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಚಂದ್ರಶೇಖರ್, ಜಿಲ್ಲಾ ಪಂಚಾಯ್ತಿ ಸದಸ್ಯರುಗಳಾದ ಆರ್.ನಾಗೇಂದ್ರನಾಯ್ಕ್, ಶಶಿಕಲಾಸುರೇಶ್‍ಬಾಬು, ಪಾಪಣ್ಣ, ರಾಜೇಶ್ವರಿ, ತಾ.ಪಂ.ಅಧ್ಯಕ್ಷ ಚಂದ್ರಪ್ಪ, ಎಪಿಎಂಸಿ ಅಧ್ಯಕ್ಷ ಈರಲಿಂಗೇಗೌಡ, ತಾ.ಪಂ.ಸದಸ್ಯರುಗಳಾದ ಓಂಕಾರಪ್ಪ, ತಿಪ್ಪಮ್ಮ, ಲಕ್ಷ್ಮೀದೇವಿ, ನಗರಸಭೆಸದಸ್ಯರುಗಳಾದ ಪ್ರೇಮ್‍ಕುಮಾರ್, ಮಂಜುಳ, ಲಕ್ಷ್ಮೀದೇವಿ, ಸಾರ್ವಜನಿಕ ಶಿಕ್ಷಣಇಲಾಖೆ ಬಿಆರ್‍ಸಿ ರಾಘವೇಂದ್ರ, ಶಿಕ್ಷಣಸಂಯೋಜಕರಾದ ಶಶಿಧರ್, ಲೋಹಿತ್, ಹರೀಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಶಿವನಾಂದ್, ತಾಲ್ಲೂಕು ಅಧ್ಯಕ್ಷ ರಮೇಶ್‍ನಾಯ್ಕ, ಕಾರ್ಯದರ್ಶಿ ಶಿವಶಂಕರ್, ಸರ್ಕಾರಿ ನೌಕರರ ಸಂಘದ ಆದ್ಯಕ್ಷ ಶ್ರೀನಿವಾಸ್, ಕಾರ್ಯದರ್ಶಿ ದೇವರಾಜ್, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತಿರಿದ್ದರು.
          ಇದೇ ಸಂದರ್ಭದಲ್ಲಿ ತಾಲ್ಲೂಕಿನ ನಿವೃತ್ತ ಶಿಕ್ಷಕರನ್ನು ಹಾಗೂ ಉತ್ತಮ ಶಿಕ್ಷಕರನ್ನು ಕ್ಷೇತ್ರದ ಶಾಸಕರಾದ ಶ್ರೀಮತಿ ಪೂರ್ಣಿಮಾಶ್ರೀನಿವಾಸ್‍ರವರು ಗೌರವಿಸಿ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು. ಸಮಾರಂಭದಲ್ಲಿ ವಿವಿಧ ಶಾಲಾ ಮಕ್ಕಳಿಂದ ಆಕರ್ಷಕ ನೃತ್ಯ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಆರಂಭದಲ್ಲಿ ಕ್ಷೇತ್ರಶಿಕ್ಷಣಾಧಿಕಾರಿ ಸಿ.ವಿ.ನಟರಾಜ್ ಎಲ್ಲರನ್ನು ಸ್ವಾಗತಿಸಿದರು. ಬಿಆರ್‍ಸಿ ರಾಘವೇಂದ್ರ ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.

Recent Articles

spot_img

Related Stories

Share via
Copy link