ತುಮಕೂರು
ಕರ್ನಾಟಕ ರಾಜ್ಯದ 50 ವರ್ಷಗಳ ಇತಿಹಾಸ ಉಳ ಅಲ್ ಅಮೀನ್ ವಿಧ್ಯಾ ಸಂಸ್ಥೆಯ ವತಿಯಿಂದ ದೇಶದ ಅನೇಕ ಭಾಗಗಳಲ್ಲಿ 250 ಕ್ಕೊ ಹೆಚ್ಚು ವಿವಿಧ ವಿಧ್ಯಾ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ, ಡಾ .ಮುಮ್ತಾಜ್ ಅಹಮದ್ ಖಾನ್ ರವರ ಜನ್ಮದಿನವು ಸೆಪ್ಟೆಂಬರ್ 6 ರಂದು ಆಚರಿಸಲಾಗುತ್ತಿದ್ದು ಅಂದು ಸೆಂಟ್ರೆಲ್ ಮುಸ್ಲೀಂ ಅಸೋಸಿಯೇಷನ್ ಆಫ್ ಕರ್ನಾಟಕ ತುಮಕೂರು ಜಿಲ್ಲಾ ಶಾಖೆ ಅಧ್ಯಕ್ಷರದ ಮುಷ್ತಾಕ್ ಅಹಮದ್ ರವರಿಗೆ “ಡಾ.ಮುಮ್ತಾಜ್ ಅಹಮದ್ ಖಾನ್” ಪ್ರಶಸ್ತಿಯನ್ನು ಪ್ರಧಾನಮಾಡಲಾಗುತ್ತಿದೆ.
ಪ್ರಸ್ತುತ ಸಾಲಿನ ಪ್ರಶಸ್ತಿಯು ಸೆಪ್ಟೆಂಬರ್ 6ನೇ ಗುರುವಾರ ಸಂಜೆ ಆರು ಗಂಟೆಗೆ ಬೆಂಗಳೊರಿನ ಲಾಲಾಬಾಗ್ ಮುಂಭಾಗದಲ್ಲಿರುವ ಅಲ್ ಅಮೀನ್ ಕಾಲೇಜಿನ ಆವರಣದಲ್ಲಿ ಉತ್ತರಪ್ರದೇಶದ ಬದಾಯುನ್ ನ ಅಲ್‍ಹಪೀಜ್ ಅಕಾಡಮಿಯ ಚೇರ್ಮನ್ ಶ್ರೀ ಕಲೀಮುಲ್ ಹಪೀಜ್ ಮತ್ತು ರಾಜಸ್ತಾನದ ಜೈಪುರದ ಎ.ಅರ್. ಪ್ರತಿಷ್ಟಾನದ ಅಧ್ಯಕ್ಷರಾದ ಎ.ಅರ್. ಖಾನ್ ಐ.ಎ.ಎಸ್ (ನಿವೃತ್ತ) ರವರ ಸಮುಮ್ಮುಖದಲ್ಲಿ ಡಾ|| ಮುಮ್ತಾಜ್ ಅಹಮದ್ ರವರು ಮುಷ್ತಾಕ್ ಅಹಮದ್ ರವರಿಗೆ ಪ್ರಧಾನ ಮಾಡುವರು.