ಬೆಂಗಳೂರು :
ಡಿಜಿಟಲ್ ಆರ್ಥಿಕತೆಯಾಗಿ ಪರಿವರ್ತನೆಗೊಳ್ಳುವುದಕ್ಕಾಗಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಸೃಷ್ಟಿಸಲು ಭಾರತ, ಇತರ ದೇಶಗಳಿಗೆ ನೆರವು ನೀಡಲು ಮುಂದಾಗಿದೆ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ವಿದ್ಯುನ್ಮಾನ ಹಾಗೂ ಮಾಹಿತಿ-ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಕಲ್ಪಿಸಲು ನೆರವು ಕೋರಿ ಎಂಟು ದೇಶಗಳು ಭಾರತದೊಂದಿಗೆ ಒಡಂಬಡಿಕೆಗೆ ಸಹಿ ಹಾಕಿವೆ. ಡಿಜಿಟಲ್ ಆರ್ಥಿಕ ಮೂಲಸೌಕರ್ಯವನ್ನು ಸೃಷ್ಟಿಸುವಲ್ಲಿ ಭಾರತ, ಮಹತ್ತರ ದಾಪುಗಾಲು ಹಾಕಿದೆ ಎಂದರು.
2014 ರ ಮುನ್ನ ಡಿಜಿಟಲ್ ಮೂಲಸೌಕರ್ಯವು ಒಟ್ಟು ಜಿಡಿಪಿಯ ಕೇವಲ ಶೇಕಡ 4.5 ರಷ್ಟಿತ್ತು. ಇಂದು ಇದು ಶೇಕಡ 11ಕ್ಕೆ ತಲುಪಿದೆ. 2026ರ ವೇಳೆಗೆ ಡಿಜಿಟಲ್ ಆರ್ಥಿಕತೆಯ ಪಾಲನ್ನು ಶೇಕಡ 20ಕ್ಕೆ ಹೆಚ್ಚಿಸಲು ಪ್ರಧಾನಿಯವರು ಗುರಿ ಹಾಕಿದ್ದಾರೆ. ಭಾರತ, ಸೈಬರ್ ಸುರಕ್ಷತೆ ಮತ್ತು ಭದ್ರತೆ ಹಾಗೂ ಡಿಜಿಟಲ್ ಕೌಶಲ್ಯ ಕ್ಷೇತ್ರದಲ್ಲಿ ತನ್ನ ಜ್ಞಾನವನ್ನು ಇತರ ದೇಶಗಳೊಂದಿಗೆ ಹಂಚಿಕೊಳ್ಳಲು ಬಯಸುತ್ತದೆ. ವೈಯಕ್ತಿಕ ದತ್ತಾಂಶ ರಕ್ಷಣೆಗೆ ಸರ್ಕಾರ ಹೆಚ್ಚಿನ ಪ್ರಾಮುಖ್ಯತೆ ನೀಡಿದೆ. ಈ ನಿಟ್ಟಿನಲ್ಲಿ ಮಸೂದೆಯನ್ನು ಸಹ ಮಂಡಿಸಿದೆ ಎಂದು ಅವರು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ