ಹುಳಿಯಾರು:
ಹಂದನಕೆರೆ ಹೋಬಳಿಯ ದೊಡ್ಡಎಣ್ಣೇಗೆರೆ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಡಿ.ಎಂ.ಜಯಣ್ಣ ಹಾಗೂ ಉಪಾಧ್ಯಕ್ಷರಾಗಿ ಡಿ.ಎಸ್.ರಮೇಶ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಡಿ.ಎಂ.ಜಯಣ್ಣ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಡಿ.ಎಸ್.ರಮೇಶ್ ಅವರುಗಳು ಮಾತ್ರ ಅರ್ಜಿ ಸಲ್ಲಿಸಿದ್ದ ಪರಿಣಾಮ ಚುನಾವಣಾಧಿಕಾರಿಯಾಗಿ ಆಗಮಿಸಿದ್ದ ಗ್ರಾಪಂ ಪಿಡಿಓ ಆರ್.ಗೋಪಿನಾಥ್ ಅವರು ಇವರ ಇವರಿಬ್ಬರನ್ನು ಅವಿರೋಧವಾಗಿ ಆಯ್ಕೆ ಮಾಡಿದರು.
ಈ ಸಂದರ್ಭದಲ್ಲಿ ತಾಪಂ ಸದಸ್ಯ ಹರ್ಷ, ಪಿಎಲ್‍ಡಿ ಬ್ಯಾಂಕ್ ನಿರ್ದೇಶಕ ಡಿ.ಎಲ್.ಧನಂಜಯ್ಯ, ಉಪ್ಪಿನಕಟ್ಟೆ ನಾಗರಾಜು, ಚೋರಗೊಂಡನಹಳ್ಳಿ ಉಮೇಶ್,ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಿಂಗರಾಜು, ಪಿಎಸಿಬಿ ನಿರ್ದೇಶಕ ಮಂಜುನಾಥ್, ಹಾಲಿನ ಡೇರಿ ನಿರ್ದೇಶಕ ಜೆ.ಸಿ.ಸಂತೋಷ್ ಅವರು ಅಭಿನಂಧಿಸಿದರು.