ಡೆಲ್ಲಿ ಸಿಎಂ ರೇಖಾ ಗುಪ್ತಾಗೆ ಕಪಾಳಮೋಕ್ಷ- ಕಿಡಿಗೇಡಿ ಅರೆಸ್ಟ್‌

ನವದೆಹಲಿ:

    ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ  ಅವರ ನಿವಾಸದಲ್ಲಿ ಇಂದು ಬೆಳಿಗ್ಗೆ ನಡೆದ ಸಾರ್ವಜನಿಕ ವಿಚಾರಣೆಯ ಸಂದರ್ಭದಲ್ಲಿ ಅವರ ಮೇಲೆ ಕಪಾಳಮೋಕ್ಷ ಮಾಡಲಾಗಿದೆ ಎಂದು ಬಿಜೆಪಿ ನಾಯಕರು ತಿಳಿಸಿದ್ದಾರೆ. 30 ರ ಹರೆಯದ ವ್ಯಕ್ತಿಯೊಬ್ಬ ‘ಜನಸಭೆ’ಯ ಸಂದರ್ಭದಲ್ಲಿ ಮುಖ್ಯಮಂತ್ರಿಯವರ ಬಳಿಗೆ ಬಂದು ಅವರ ಮೇಲೆ ಹಲ್ಲೆ ನಡೆಸಿದ್ದಾನೆ. ಮುಖ್ಯಮಂತ್ರಿಯವರ ಭದ್ರತಾ ಸಿಬ್ಬಂದಿ ತಕ್ಷಣ ದಾಳಿಕೋರನನ್ನು ಹಿಡಿದಿದ್ದು, ಈಗ ಆತನನ್ನು ವಿಚಾರಣೆ ನಡೆಸಲಾಗುತ್ತಿದೆ.

  ಬುಧವಾರ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ನಿವಾಸದಲ್ಲಿ ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕೆಲವು ದಾಖಲೆ, ಅರ್ಜಿ ಪತ್ರಗಳನ್ನು ಹಿಡಿದು ಬಂದಿದ್ದ30ವರ್ಷದ ವ್ಯಕ್ತಿಯೊಬ್ಬ ಸಿಎಂಗಾಗಿ ಕಾದು ನಿಂತಿದ್ದ. ಸಿಎಂ ರೇಖಾ ಹತ್ತಿರ ಬರುತ್ತಿದ್ದಂತೆ ಆತ ಕಪಾಳಮೋಕ್ಷ ಮಾಡಿ ಓಡಲು ಯತ್ನಿಸಿದ್ದಾನೆ. ತಕ್ಷಣವೇ ಆತನನ್ನು ಬಂಧಿಸಲಾಗಿದೆ. ಇನ್ನು ದಾಳಿಗೆ ಕಾರಣ ಏನೆಂಬುದು ಇನ್ನೂ ಸ್ಪಷ್ಟವಾಗಿಲ್ಲ.

Recent Articles

spot_img

Related Stories

Share via
Copy link