ತಮ್ಮಡಿಹಳ್ಳಿಯಲ್ಲಿ ನಡೆದ ವಿವಿಧ ಪೂಜಾ ಕೈಂಕರ್ಯಗಳು

ಚಿಕ್ಕನಾಯಕನಹಳ್ಳಿ

                   ತಾಲ್ಲೂಕಿನ ತಮ್ಮಡಿಹಳ್ಳಿಯ ಮಠದಲ್ಲಿ ಆ.25ರಿಂದ 27ರವರೆಗೆ ಮೂರು ದಿನಗಳ ಕಾಲ ಲೋಕಕಲ್ಯಾಣಾರ್ಥವಾಗಿ ವಿವಿಧ ಪೂಜಾ ಕೈಂಕರ್ಯಗಳು ನಡೆದವು.

                  ಶ್ರೀಪರ್ವತ ಮಲ್ಲಿಕಾರ್ಜುನ ಬೆಟ್ಟದಲ್ಲಿ ಡಾ.ಅಭಿನವಮಲ್ಲಿಕಾರ್ಜುನಸ್ವಾಮಿದೇಶೀಕೇಂದ್ರಸ್ವಾಮೀಜಿಗಳ ನೇತೃತ್ವದಲ್ಲಿ ಗಂಗಾಪೂಜೆ, ಕಳಶಸ್ಥಾಪನಾ ಪೂರ್ವ ಸಿದ್ದತೆಗಳು ನಡೆದವು. ಮುಂಜಾನೆಯೇ ಬ್ರಾಹ್ಮಿ ಮುಹೂರ್ತದಲ್ಲಿ ಗಣಪತಿ ಹೋಮ, ಪಂಚಬ್ರಹ್ಮ, ನವಗ್ರಹ ಧಾರ್ಮಿಕ ಕಾರ್ಯಕ್ರಮಗಳಾದ ಕುಂಭಾಭಿಷೇಕ, ರುದ್ರಾಭಿಷೇಕ, ಸಹಸ್ತ್ರಬಿಲ್ವಾರ್ಚನೆ, ಹೋಮಹವನಾದಿಗಳ, ವಿಶೇಷ ಪೂಜಾ ಕೈಂಕರ್ಯಗಳು ನಡೆದವು. 27ರಂದು ಸಂಜೆ 5 ಗಂಟೆಗೆ ಉತ್ಸವ ಮೂರ್ತಿಗಳೊಂದಿಗೆ ತಮ್ಮಡಿಹಳ್ಳಿ ಗ್ರಾಮಸ್ಥರಿಂದ ಆರತಿ ಉತ್ಸವ ನಡೆಯಿತು. ನೂರಾರು ಮಹಿಳೆಯರಿಂದ ಕಳಸ ಹೊತ್ತು ಮೆರವಣಿಗೆ ನಡೆಸಿದರು.
ಕಾರ್ಯಕ್ರಮಕ್ಕೆ ಶ್ರೀ ಕ್ಷೇತ್ರ ತಮ್ಮಡಿಹಳ್ಳಿಗೆ ತಾಲ್ಲೂಕಿನ ಸುತ್ತಮುತ್ತಲಿನ ಗ್ರಾಮಗಳಿಂದ ಸಹಸ್ರಾರು ಭಕ್ತಾದಿಗಳು ಆಗಮಿಸಿ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap