ತಲೆ ಎತ್ತುತ್ತಿದೆ 40 ಲಕ್ಷ ರೂ. ವೆಚ್ಚದ ಉತ್ತರಪ್ರದೇಶ ದೇವಸ್ಥಾನ ಶೈಲಿ ಮಹಾಮಂಟಪ

ದಾವಣಗೆರೆ:

      ದೇವನಗರಿಯ ಹೃದಯ ಭಾಗ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಪ್ರಪ್ರಥಮ ಬಾರಿಗೆ ಹಿಂದೂ ಮಹಾಸಭಾ ಗಣಪತಿ ಪ್ರತಿಷ್ಠಾಪನೆಗೆ ಮಹಾಮಂಟಪ ತಲೆ ಎತ್ತುತ್ತಿದೆ.

      ಹೌದು… ಇಷ್ಟು ದಿನಗಳ ಕಾಲ ಕೇವಲ ರಾಜಕೀಯ ಪಕ್ಷಗಳ ಸಮಾವೇಶಗಳಿಗೆ, ವಸ್ತು ಪ್ರದರ್ಶನಗಳಿಗೆ, ವಿವಿಧ ಸಂಘಟನೆಗಳ ಕಾರ್ಯಕ್ರಮಗಳಿಗೆ ಹಾಗೂ ಕ್ರೀಡೆಗಳಿಗೆ ಬಳಿಕೆಯಾಗುತ್ತಿದ್ದ ದಾವಣಗೆರೆಯ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಈ ಬಾರಿ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಹಿಂದೂ ಮಹಾಸಭಾ ಗಣಪತಿ ಪ್ರತಿಷ್ಠಾಪನೆಗಾಗಿ ಮಹಾ ಮಂಟಪ ನಿರ್ಮಾಣವಾಗುತ್ತಿದೆ.

20 ಜನ ಕಾರ್ಮಿಕರ ಬಳಕೆ:

      ಈಗಾಗಲೇ ಮಂಟಪ ನಿರ್ಮಾಣ ಕಾರ್ಯಕ್ಕೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎ.ರವೀಂದ್ರನಾಥ್ ಗುದ್ದಲಿ ಪೂಜೆ ನೆರವೇರಿಸಿದ್ದು, ಕಳೆದ 20 ದಿನಗಳಿಂದ ತಮಿಳುನಾಡಿನ 20 ಜನ ಕಾರ್ಮಿಕರು ಮಂಟಪ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾರೆ. ಇನ್ನೂ ಹತ್ತನ್ನೆರಡು ದಿನಗಳಲ್ಲಿ ಮಹಾಮಂಟಪದ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.

60 ಅಡಿ ಎತ್ತರದ ಮಹಾಮಂಟಪ:

      ಅಂದಾಜು 40 ಲಕ್ಷ ರೂ. ವೆಚ್ಚದಲ್ಲಿ ಉತ್ತರ ಪ್ರದೇಶದ ಪ್ರಮುಖ ದೇವಸ್ಥಾನ ಒಂದರ ಶೈಲಿಯಲ್ಲಿ, 60*135 ಅಡಿ ವಿಸ್ತೀರ್ಣದಲ್ಲಿ ಸುಮಾರು 60 ಅಡಿ ಎತ್ತರದಲ್ಲಿ ಮಹಾಮಂಟಪ ನಿರ್ಮಾಣವಾಗುತ್ತಿದೆ. ಮಂಟಪ ನಿರ್ಮಾಣ ಕಾರ್ಯಕ್ಕೆ ನಾಲ್ಕು ಸಾವಿರ ಪೋಲ್ಸ್ ಬಳಸಲಾಗುತ್ತಿದ್ದು, ಮಂಟಪದ ಹೊರಗಡೆಯ ಫಿನ್ಷಿಂಗ್‍ಗೆ ಪ್ಲೇವುಡ್ ಶೀಟ್‍ಗಳನ್ನು ಬಳಸಿ, ಅದರ ಮೇಲೆ ಸುಂದರವಾಗಿ ಪೇಟಿಂಗ್ ಮಾಡಿಸಲಾಗುತ್ತಿದ್ದು, ಇಂಥಹ ಮಂಟಪ ದಾವಣಗೆರೆಯ ಇತಿಹಾಸದಲ್ಲಿಯೇ ಎಂದೂ ನಿರ್ಮಾಣವಾಗಿಲ್ಲ ಎನ್ನುತ್ತಾರೆ ಮಹಾಮಂಟಪ ನಿರ್ಮಾಣದ ಜವಾಬ್ದಾರಿ ಹೊತ್ತವರು.

      ಇಲ್ಲಿ ಪ್ರತಿಷ್ಠಾಪಿಸಲು ಉದ್ದೇಶಿಸಿರುವ 13 ಅಡಿ ಎತ್ತರದ ಬೃಹತ್ ಗಣಪತಿ ಮೂರ್ತಿಯನ್ನು ಬೆಳಗಾವಿಯಲ್ಲಿ ತಯಾರಿಸಲಾಗುತ್ತಿದ್ದು, 23ನೇ ದಿನಕ್ಕೆ ಮೂರ್ತಿ ವಿಸರ್ಜಿಸಲು ತೀರ್ಮಾನಿಸಲಾಗಿದೆ. ಇಲ್ಲಿ ಪ್ರತಿದಿನ ಸಂಜೆ ಕೊಲ್ಲೂರು ಮೂಕಾಂಭಿಕೆ ರೂಪಕ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ಈ ರೂಪಕವನ್ನು ಹರಿಹರದ 12 ಜನ ಕಲಾವಿದರು ವ್ಹೀಲ್‍ಗಳ ಮೂಲಕ ಬೊಂಬೆಗಳನ್ನು ಬಳಸಿಕೊಂಡು ಪ್ರದರ್ಶಿಸುವುದು ವಿಶೇಷವಾಗಿದೆ.

ಏಕ್ಷಿಭಿಷನ್ ವ್ಯವಸ್ಥೆ:

      ಇಡೀ ಊರಿನ ನಾಗರೀಕರನ್ನು ಒಂದೆಡೆ ಸೇರಿಸಿ ಸಡಗರ, ಸಂಭ್ರಮದಿಂದ ಗಣಪತಿ ಹಬ್ಬ ಆಚರಿಸಬೇಕೆಂಬ ಉದ್ದೇಶದಿಂದ ಇಲ್ಲಿ ಹಿಂದೂ ಮಹಾಸಭಾ ಗಣಪತಿ ಪ್ರತಿಷ್ಠಾಪಿಸಲು ಉದ್ದೇಶಿಸಲಾಗಿದೆ. ಗಣಪತಿ ಪ್ರತಿಷ್ಠಾಪನೆಗೆ ನಿರ್ಮಾಣವಾಗುತ್ತಿರುವ ಮಹಾಮಂಟಪದ ಎದುರಿನ ಜಾಗದಲ್ಲಿ ಸಾರ್ವಜನಿಕರಿಗೆ ಮನರಂಜನೆಯನ್ನೂ ನೀಡುವ ಉದ್ದೇಶದಿಂದ ಏಕ್ಷಿಭಿಷನ್ ಸಹ ಆಯೋಜಿಸಲಾಗುತ್ತಿದೆ. ಈ ಏಕ್ಷಿಭಿಷನ್ ಪ್ರತಿದಿನ ಸಂಜೆ ಐದು ಗಂಟೆಯಿಂದ ಆರಂಭವಾಗಲಿದ್ದು, ಏಕ್ಷಿಭಿಷನ್‍ಗೆ ಪ್ರವೇಶ ಪಡೆದು, ಅಲ್ಲಿರುವ ಆಟೋಟಗಳನ್ನು ಆಡಿಕೊಂಡು, ನೋಡಿಕೊಂಡು ಕೊನೆಯಲ್ಲಿ ಕೊಲ್ಲೂರು ಮುಕಾಂಬಿಕೆ ರೂಪಕವನ್ನು ಕಣ್ತುಂಬಿಕೊಂಡು, ಗಣಪತಿಯ ದರುಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ.

      ಮೊದಲ ಹನ್ನೊಂದು ದಿನಗಳ ಕಾಲ ಕೊಲ್ಲೂರು ಮುಕಾಂಭಿಕಾ ರೂಪಕ ಪ್ರದರ್ಶನ ಮಾತ್ರ ಇರಲಿದ್ದು, ಹನ್ನರಡೆನೆಯ ದಿನದಿಂದ ಹಾಸ್ಯ ಸಂಜೆ, ಯಕ್ಷಗಾನ, ರಸಮಂಜರಿ ಕಾರ್ಯಕ್ರಮಗಳು ಸೇರಿದಂತೆ ಇತರೆ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲು ಸಹ ಆಯೋಜಕರು ಚಿಂತನೆ ನಡೆಸಿದ್ದಾರೆ. ಈ ಎಲ್ಲಾ ಕಾರ್ಯಕ್ರಮಗಳನ್ನು ಜನರು ವೀಕ್ಷಿಸಲು ಆಗಮಿಸುವಂತೆ ಜಿಲ್ಲೆಯ ಆರು ತಾಲೂಕುಗಳಲ್ಲೂ ಫ್ಲೇಕ್ಸ್‍ಗಳ ಮೂಲಕ ಪ್ರಚಾರ ಕೈಗೊಳ್ಳಲುದ್ದೇಶಿಸಲಾಗಿದೆ.

      ಗಣಪತಿ ಮೂರ್ತಿ ವಿಸರ್ಜನೆಯಾಗುವ 23ನೇ ದಿನದಂದು ಪಕ್ಕದ ಚಿತ್ರದುರ್ಗದ ಮಾದರಿಯಲ್ಲಿಯೇ ಹೆಚ್ಚು ಜನರನ್ನು ಸೇರಿಸಿ ಬೃಹತ್ ಶೋಭಾಯಾತ್ರೆಯನ್ನು ಸಹ ಆಯೋಜಿಸಲು ತೀರ್ಮಾನಿಸಲಾಗಿದೆ. ಈ ಶೋಭಾಯಾತ್ರೆಗೆ ವಿವಿಧ ಕಲಾತಂಡಗಳು, ಕಲಾವಿದರು ವಿಶೇಷ ಮೆರಗು ನೀಡಲಿದ್ದಾರೆ.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link