ತಾಯಿ ಎದೆಹಾಲಿನ ಮಹತ್ವದ” ಅರಿವು ಹಾಗೂ “ಸಾಮೂಹಿಕ ಸೀಮಂತ” ಕಾರ್ಯಕ್ರಮ

ತಿಪಟೂರು

              ತಾಲ್ಲೂಕು ಆಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ, ನಗರಸಭೆ ತಿಪಟೂರು, ಜಿಲ್ಲಾ ಬಾಲಭವನ ಸಂಘ(ರಿ) ತುಮಕೂರು, ಕೆ.ವಿ.ಕೆ.ಕೊನೇಹಳ್ಳಿ, ತಾಲ್ಲೂಕು ಸ್ತ್ರೀಶಕ್ತಿ ಒಕ್ಕೂಟ (ರಿ) ತಿಪಟೂರು ಇವರ ಸಂಯುಕ್ತಾಶ್ರಯದಲ್ಲಿ ದಿನಾಂಕ:30-08-2018 ರಂದು ತಿಪಟೂರು ತಾಲ್ಲೂಕಿನ, ಆರ್ಯ ಬಾಲಿಕಾ ಶಾಲೆಯಲ್ಲಿ ‘ವಿಶ್ವಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ’ ಜರುಗಿತು.

              ಕಾರ್ಯಕ್ರಮದ ಉದ್ಘಾಟನೆಯನ್ನು ಮಾನ್ಯ ಶ್ರೀ ಬಿ.ಸಿ.ನಾಗೇಶ್, ಶಾಸಕರು, ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಪುರಾತನ ಕಾಲದಿಂದಲೂ ಗರ್ಭಿಣಿ ತಾಯಂದಿರು ಈ ದೇಶದ ತಾಯಂದಿರು ಜನ್ಮವನ್ನು ಕೊಟ್ಟುಬಾಳಿರುವ ಬಗ್ಗೆ ತಿಳಿಸಿದರು. ಹಿಂದೆ ಒಟ್ಟು ಕುಟುಂಬ ಮತ್ತು ಸಮಾಜದ ಮಧ್ಯೆ ಬಾಳುತ್ತಿದ್ದೆವು. ಆಗ ಸೀಮಂತ ಕಾರ್ಯಕ್ರಮವನ್ನು ಕುಟುಂಬದ ಜೊತೆ ನಡೆಸುತ್ತಿದ್ದರು. ತಾಯಿ ಹಾಲು ಅಮೃತಕ್ಕೆ ಸಮಾನ ಹೆಚ್ಚಿನ ಅವಧಿಯವರೆಗೆ ಎದೆಹಾಲನ್ನು ಪಡೆದ ಮಗುವಿನ ಬುದ್ದಿಶಕ್ತಿಯ ಬೆಳವಣಿಗೆ ಆಗುವುದರಿಂದ ಮಕ್ಕಳನ್ನೆ ಆಸ್ತಿಯನ್ನಾಗಿ ಮಾಡುವ ತಾಯಿಯ ಆಸೆ ಇಡೇರಿದಂತಾಗುತ್ತದೆ ಎಂದು ಮಾತನಾಡಿ ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂಬುದನ್ನು ತಿಳಿಸಿ ತಪ್ಪದೆ ತಾಯಿ ತನ್ನ ಎದೆಹಾಲನ್ನು ಕುಡಿಸುವುದನ್ನು ಮರೆಯಬಾರದು ಎಂಬುದನ್ನು ತಿಳಿಸಿದರು.

              ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನಾಡಿದ ಶ್ರೀ ಪಿ.ಓಂಕಾರಪ್ಪ, ಶಿಶು ಅಭಭಿವೃದ್ಧಿ ಯೋಜನಾಧಿಕಾರಿಗಳು ಮಾತನಾಡಿ ಈ ಸಮಾಜದಲ್ಲಿ ತಾಯಂದಿರು ಮಕ್ಕಳನ್ನು ಬಿಟ್ಟು ಕೆಲಸಕ್ಕೆ ಹೋಗುವುದರಿಂದ ಮಕ್ಕಳಿಗೆ ತಾಯಿಯ ಸಂಪೂರ್ಣ ಪ್ರೀತಿ ದೊರೆಯದಂತಾಗಿದೆ. ತಾಯಿಯ ಎದೆಹಾಲು ಹೆಚ್ಚು ಉತ್ಪತ್ತಿಯಾಗುವಂತಹ ತಾಯಂದಿರು ಹಾಲನ್ನು ಚೆಲ್ಲದೆ ವೈದ್ಯರ ಸಲಹೆ ಮೇರಿಗೆ ಬೇರೆ ಮಕ್ಕಳಿಗೆ ಕೊಡುವುದರಿಂದ ಆ ಮಕ್ಕಳು ಸಹ ಆರೋಗ್ಯವಾಂತರಾಗಿರಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

               ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ಮಂಗಳ ಗೌರಮ್ಮ ಮಾತನಾಡಿ ಅಮೃತಕ್ಕೆ ಸಮಾನವಾದ ಎದೆಹಾಲನ್ನು ಮಕ್ಕಳಿಗೆ ತಾಯಂದಿರು ತಪ್ಪದೆ ಉಣಿಸಲು ತಿಳಿಸಿ, ಮಕ್ಕಳಿಗೆ ಉತ್ತಮ ಸಂಸ್ಕತಿ ಸಂಸ್ಕಾರದ ವಾತಾವರಣವನ್ನು ಮನೆ ಮತ್ತು ಸಮಾಜದಲ್ಲಿ ನೀಡುವುದರಿಂದ ಒಳ್ಳೆಯ ಪ್ರಜೆಯನ್ನು ದೇಶಕ್ಕೆ ತಾಯಂದಿರು ನೀಡಲು ಸಾದ್ಯವಾಗುತ್ತದೆ ಎಂದು ತಿಳಿಸಿದರು.
ಡಾ||ವರ್ಷಾ, ಆರ್.ಬಿ.ಎಸ್.ಕೆ ವೈದ್ಯಾಧಿಕಾರಿಗಳು, ಮಾತನಾಡಿ ಮಗುವಿನ ಸರ್ವತೋಮುಖ ಬೆಳವಣಿಗೆಯು ತಾಯಿಯ ಗರ್ಭದಲ್ಲೆ ಪ್ರಾರಂಭಗೊಂಡು ಮಗು ಜನಿಸಿದ ಮುಂದಿನ 3 ವರ್ಷಗಳ ಕಾಲದ ಅವಧಿಯಲ್ಲಿ ಆಗುತ್ತದೆ.

               ಆದ್ದರಿಂದ ಮಗು ಹುಟ್ಟಿದ ಅರ್ಧಗಂಟೆಯೊಳಗಾಗಿ ಮೊದಲ ಹಾಲನ್ನು ತಾಯಿ ನೀಡಬೇಕು. ಇದು ಮೊದಲ 6 ತಿಂಗಳವರೆಗೆ ಆಗಬೇಕು. ನಂತರ 6 ತಿಂಗಳಿಂದ ಕನಿಷ್ಟ 2 ವರ್ಷಗಳವರೆಗೆ ಮೇಲು ಆಹಾರದ ಜೊತೆ ಎದೆಹಾಲನ್ನು ಮುಂದುವರಿಸಬೇಕು. ತಾಯಿ ಮಗುವಿಗೆ ಎದೆಹಾಲನ್ನು ಕುಡಿಸುವಾಗ ಪ್ರೀತಿಯಿಂದ ಸಮಾದಾನದಿಂದ ಹಾಲು ಉಣಿಸಬೇಕು. ಇದರಿಂದ ಮಗುವಿನ ಸರ್ವತೋಮುಖ ಬೆಳವಣಿಗೆಯ ಜೊತೆಗೆ ತಾಯಿ, ಮಗುವಿನ ಬಾಂದವ್ಯ ಹೆಚ್ಚಾಗುತ್ತದೆ. ಮಗುವಿಗೆ ಬೇಗ ಎದೆಹಾಲು ಕುಡಿಸುವುದರಿಂದ ಹಿಡಿದು ಕನಿಷ್ಟ 2 ವರ್ಷಗಳ ವರೆಗೆ ಎದೆಹಾಲು ಉಣಿಸುವುದದರಿಂದ ತಾಯಿಗೆ ಹೆರಿಗೆ ಸಮಯದಲ್ಲಿ ಉಂಟಾಗುವ ರಕ್ತಸ್ರಾವ ಕಡಿಮೆಯಾಗುತ್ತದೆ ಹಾಗೂ ರಕ್ತಹೀನತೆಯನ್ನು ತಡೆಗಟ್ಟಬಹುದು ಅಲ್ಲದೆ ಗರ್ಭಾಶಯ, ಸ್ತನಕ್ಯಾನ್ಸರ್ ನಂತಹ ಖಾಯಿಲೆಗಳಿಂದ ತಾಯಂದಿರು ಮುಕ್ತವಾಗಬಹುದು. ತಾಯಂದಿರ ಆರೋಗ್ಯವು ಸಹ ವೃದ್ಧಿಯಾಗುತ್ತದೆ. ಈ ಅವಧಿಯಲ್ಲಿ ತಾಯಂದಿರು ಪೌಷ್ಟಿಕ ಆಹಾರಕ್ಕೆ ಒತ್ತುನೀಡಿ ಸ್ವಚ್ಚತೆ, ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದು ತಿಳಿಸಿದರು. ಡಾ|| ಬಿಂದು, ವಿಷಯ ತಜ್ಞರು ಮಾತನಾಡಿ ಗರ್ಭಿಣಿಯರು ಪೌಷ್ಟಿಕ ಆಹಾರವನ್ನು ಎರಡುಪಟ್ಟು ತಿನ್ನಬೇಕು. ಇವರಿಂದ ರಕ್ತ ಹೀನತೆ ಕಡಿಮೆಯಾಗುತ್ತದೆ. ಹಾಗೂ ಸ್ಥಳೀಯವಾಗಿ ದೊರೆಯುವಂತಹ ಸೊಪ್ಪು, ತರಕಾರಿ, ನೆಲ್ಲಿ, ಸೀಬೆ, ನಿಂಬೆ ಇವುಗಳನ್ನೆಲ್ಲ ಸೇವಿವುದರಿಂದ ವಿಟಮಿನ್ ಸಿ ಹೇರಳವಾಗಿ ದೊರೆಯುತ್ತದೆ ಎಂಬುದಾಗಿ ತಿಳಿಸಿದರು.

              ಕಾರ್ಯಕ್ರಮದಲ್ಲಿ ಶ್ರೀ ನಟರಾಜ್, ಉಪನಿರ್ದೇಶಸಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತುಮಕೂರು ಇವರು ಕಾರ್ಯಕ್ರಮದಲ್ಲಿ ಹಾಜರಿದ್ದು, ಗರ್ಭಿಣಿಯರು ಹೆರಿಗೆಯನ್ನು ಆಸ್ಪತ್ರೆಯಲ್ಲಿಯೇ ಮಾಡಿಸಿಕೊಳ್ಳುವುದು ಉತ್ತಮ, ಮಗುವು ಗಂಡಾಗಲಿ ಅಥವಾ ಹೆಣ್ಣಾಗಲಿ ಉತ್ತಮ ಆರೋಗ್ಯವಂತ ಮಗುವನ್ನು ನೋಡಿಕೊಳ್ಳುವುದು ಗರ್ಭಿಣಿ ತಾಯಂದಿರ ಕರ್ತವ್ಯವಾಗಿರುತ್ತದೆ. ಹಾಗೂ ಗರ್ಭಿಣಿಯರ ಪತಿಯರು ಸಹ ಕಾರ್ಯಕ್ರಮದಲ್ಲಿ ಹಾಜರಿರುವುದರಿಂದ ಗರ್ಭಿಣಿಯ ಪಾಲನೆ ಪೋಷಣೆಯ ಬಗ್ಗೆ ನೋಡಿಕೊಳ್ಳುವಂತೆ ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಶ್ರೀಮತಿ ಮಮತಾ ಉಮಾ ಮಹೇಶ್, ಜಿಲ್ಲಾ ಪಂಚಾಯಿತಿ ಸದಸ್ಯರು, ಶ್ರೀಮತಿ ಜಹರಾ ಜಬೀನಾ, ಉಪಾಧ್ಯಕ್ಷರು, ನಗರಸಭೆ, ತಿಪಟೂರು, ಶ್ರೀ ಡಾ|| ಎಸ್.ಕೆ. ಷಡಕ್ಷರಿ, ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲ್ಲೂಕು ಪಂಚಾಯಿತಿ, ತಿಪಟೂರು, ಶ್ರೀ ನಂದಕುಮಾರ್, ಅಧ್ಯಕ್ಷರು,ಮಕ್ಕಳ ಕಲ್ಯಾಣ ಸಮಿತಿ ತುಮಕೂರು ಇವರುಗಳು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.

                  ಶ್ರೀ ಟಿ.ಎನ್.ಪ್ರಕಾಶ್, ಅಧ್ಯಕ್ಷರು, ನಗರಸಭೆ, ತಿಪಟೂರು, ಡಾ||ರವಿಕುಮಾರ್, ತಾಲ್ಲೂಕು ಆರೋಗ್ಯಾಧಿಕಾರಿಗಳು, ಶ್ರೀಮತಿ ರೇಖಾ, ಜ್ಞಾನ ಜ್ಯೋತಿ ಆರ್ಥಿಕ ಸಾಕ್ಷರತಾ ಕೇಂದ್ರ, ತಿಪಟೂರು, ನಗರಸಭಾ ಸದಸ್ಯರಾದ ಶ್ರೀ ಲೋಕೇಶ್, ಶ್ರೀ ನಿಜಗುಣ, ಶ್ರೀ ಅಬ್ದುಲ್‍ಖಾದರ್, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಶ್ರೀ ಪುಟ್ಟಸ್ವಾಮಿ, ಶ್ರೀಮತಿ ಮೀನಾಕ್ಷಿ ಪರಪ್ಪ, ಶ್ರೀಮತಿ ಭಾಗ್ಯಮ್ಮ, ಅಧ್ಯಕ್ಷರು, ತಾಲ್ಲೂಕು ಸ್ತ್ರೀಶಕ್ತಿ ಒಕ್ಕೂಟ, ತಿಪಟೂರು, ಮತ್ತು ಗರ್ಭಿಣಿ ಮಹಿಳೆಯರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ತಾಯಂದಿರು ಭಾಗವಹಿಸಿ ಮಾಹಿತಿ ಪಡೆದರು.
                  ಮೊದಲಿಗೆ ಪ್ರಾರ್ಥನೆ ಶ್ರೀಮತಿ ಕೆ.ಮಂಜುಳಾದೇವಿ ಹಾಗೂ ಸುವರ್ಣಮ್ಮ ಇವರಿಗಳಿಂದ ಜರುಗಿತು. ವಂದನಾರ್ಪಣೆಯನ್ನು ಶ್ರೀಮತಿ ಶ್ರೀಲತಾ, ಸಂರಕ್ಷಣಾಧಕಾರಿಗಳು, ಮಾಡಿದರು. ಶ್ರೀಮತಿ ಬಿ.ಎನ್.ಪ್ರೇಮ, ಮೇಲ್ವಿಚಾರಕಿ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಎಲ್ಲಾ ಮೇಲ್ವಿಚಾರಕಿಯರು ಹಾಗೂ ಕಛೇರಿ ಸಿಬ್ಬಂದಿವರ್ಗದವರು ಕಾರ್ಯಕ್ರಮದಲ್ಲಿ ಹಾಜರಿದ್ದು ಸುಮಾರು 200ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap