ತಾಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡದೇ ಇದ್ದರೆ ಉಗ್ರ ಹೋರಾಟ- ತಾಲೂಕು ಅಧ್ಯಕ್ಷ ಬಸವರಾಜಪ್ಪ

ಜಗಳೂರು :

             ತಾಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡದೇ ಇದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ( ಹುಚ್ಚವ್ವನ ಹಳ್ಳಿ ಮಂಜುನಾಥ ಬಣದ ) ತಾಲೂಕು ಅಧ್ಯಕ್ಷ ಬಸವರಾಜಪ್ಪ ಹೇಳಿದರು.

            ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ( ಹುಚ್ಚವ್ವನ ಹಳ್ಳಿ ಮಂಜುನಾಥ ಬಣದ ) ವತಿಯಿಂದ ಪ್ರತಿಭಟನೆ ನಡೆಸಿ ತಹಶಿಲ್ದಾರ್ ಗೆ ಮನವಿ ಸಲ್ಲಿಸಲಾಯಿತು.

           ಈ ಮೊದಲು 86 ತಾಲೂಕುಗಳನ್ನು ಬರಪೀಡಿತ ತಾಲೂಕು ಎಂದು ಘೊಷಣೆ ಮಾಡಿದ್ದಾರೆ, ಈ 86 ತಾಲೂಕುಗಳನ್ನು ಯಾವ ಆಧಾರದ ಮೇಲೆ ಘೊಷಣೆ ಮಾಡಿದ್ದರೋ ತಿಳಿಯದು, ಆದರೆ ನಮ್ಮ ತಾಲೂಕಿನಲ್ಲಿ ಬೆಳೆಗಳು ಒಣಗಿ ಹೋಗುತ್ತಿದ್ದು, ಕುಡಿಯಲು ನೀರು ಸಹ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಆದರೂ ನಮ್ಮ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಿಲ್ಲ ಯಾಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ತಾಲ್ಲೂಕಿನಲ್ಲಿ ಯಾವುದೇ ರೀತಿಯ ನದಿಮೂಲಗಳಿಲ್ಲದೆ, ಕಾರ್ಖಾನೆಗಳಿಲ್ಲದೆ ಕೃಷಿಯೇ ಪ್ರಧಾನ ಕಸುಬಾಗಿದ್ದು, ಮಳೆಯಾಶ್ರಿತ ಕೃಷಿಯನ್ನು ನಂಬಿಕೊಂಡು ಜೀವನ ಸಾಗಿಸುತ್ತಿ ರುವ ರೈತರ ಸಂಖ್ಯೆ ಅಧಿಕವಾಗಿದ್ದು, ಈ ಬಾರಿ ತಾಲ್ಲೂಕಿನಲ್ಲಿ ಮಳೆ ಕೊರತೆಯಿಂದಾಗಿ ರೈತರು ನಷ್ಟವನ್ನು ಅನುಭವಿಸುವಂತಾಗಿದೆ ಎಂದು ಹೇಳಿದರು.

           ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಿರಂಜೀವಿ ಮಾತನಾಡಿ ರಾಜ್ಯದಲ್ಲಿಯೇ ಹಿಂದುಳಿದ ಹಾಗೂ ಬರಪೀಡಿತ ತಾಲ್ಲೂಕೆಂಬ ಹಣೆಪಟ್ಟಿಯನ್ನು ಜಗಳೂರು ಹೊಂದಿದ್ದರೂ ಸಹ ಈ ಬಾರಿಯ ಬರಪೀಡಿತ ಪಟ್ಟಿಯಲ್ಲಿ ಸೇರ್ಪಡೆಯಾಗದೆ ಇರುವುದು ಸರ್ಕಾರದ ತಾರತಮ್ಯಕ್ಕೆ ಹಿಡಿದ ಕನ್ನಡಿ ಎಂದರೂ ತಪ್ಪಾಗಲಾರದು. ಆದರೆ ನೀರಾವರಿ ಪ್ರದೇಶವಾಗಿರುವ ಹರಿಹರ ಪಟ್ಟಿಯಲ್ಲಿದ್ದು, ಜೊತೆಗೆ ಹರಪನಹಳ್ಳಿಯೂ ಸೇರ್ಪಡೆಯಾಗಿದೆ. ಆದರೆ, ಸತತ ಬರಗಾಲಕ್ಕೆ ತುತ್ತಾಗುವ ತಾಲ್ಲೂಕನ್ನು ಕಡೆಗಣಿಸಿರುವುದು ಯಾವ ಪುರುಷಾರ್ಥಕ್ಕೆ ಎಂದು ಆಕ್ರೋಶ ವ್ಯಕ್ತಪಡಿದರು.

           ಪ್ರತಿಭಟನ ಸ್ಥಳಕ್ಕೆ ಕೃಷಿ ಇಲಾಖೆಯ ಸಹಯಕ ಕೃಷಿ ನಿರ್ದೇಶಕ ಕೆ.ಟಿ. ಬಸಣ್ಣ ಭೇಟಿ ನೀಡಿ ರೈತರಿಗೆ ತಿಳಿ ಹೇಳಲು ಮುಂದಾದಗ ರೈತರು ಕೃಷಿ ಅಧಿಕಾರಿಯನ್ನು ತರಾಟೆಗೆ ತೆಗೆದು ಕೊಂಡರು.

          ಈ ಸಂಧರ್ಭದಲ್ಲಿ ರೈತ ಮುಖಂಡರಾದ ರಾಜಪ್ಪ,ದೊಡ್ಡ ಚೌಡಪ್ಪ, ತಿಪ್ಪೇಸ್ವಾಮಿ, ಹೊನ್ನೂರಪ್ಪ, ಸಿದ್ದಪ್ಪ, ಮಂಜಣ್ಣ , ಗಿರಿಯಪ್ಪ, ಹಸೇನ್ ಪೀರ್, ನಿಂಗರಾಜ್ ,ಹಳ್ಯಾಪ್ಪ, ಮೈಲಾರಿ , ಪಾಪಣ್ಣ,ಬಾಲರಾಜ್, ಜಯ್ಯಪ್ಪ, ದೇವೆಂದ್ರಪ್ಪ , ಚಾಮುಂಡೇಶ್ವರಿ ಮಾಹಿಳಾ ಸ್ವಸಹಾಯ ಸಂಘದ ಪದಾಧಿಕಾರಿಗಳು ಸೇರಿದಂತೆ ಮತ್ತಿತರರು ಹಾಜರಿದ್ದರು.ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ( ಹುಚ್ಚವ್ವನ ಹಳ್ಳಿ ಮಂಜುನಾಥ ಬಣದ ) ತಾಲೂಕು ಅಧ್ಯಕ್ಷ ಬಸವರಾಜಪ್ಪ ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap