ತಾಲೂಕಿನಲ್ಲಿ ನಡೆಯುತ್ತಿರುವ ನರೇಗಾ ಕಾಮಗಾರಿ ಸ್ಥಳಕ್ಕೆ ಸಿಇಓ ಬೇಟಿ

ಜಗಳೂರು:

     ತಾಲೂಕಿನ ವಿವಿಧ ಗ್ರಾಮಪಂಚಾಯ್ತಿಗಳ ವ್ಯಾಪ್ತಿಯಲ್ಲಿ ನಡೆಯುತ್ತಿರುವ ನರೇಗಾ ಕಾಮಗಾರಿಗಳನ್ನು ಸಿಇಓ ಬಸವರಾಜೇಂದ್ರ ಭೇಟಿ ನೀಡಿ ಪರಿಶೀಲಿಸಿದರು.

      ತಾಲೂಕಿನ ಪಲ್ಲಾಗಟ್ಟೆ,ಬಿಳಿಚೋಡು,ಕ್ಯಾಸನೇಹಳ್ಳಿ ಗ್ರಾಮಗಳಿಗೆ ಬೇಟಿನೀಡಿ,ಬರಗಾಲ ಆವರಿಸಿರುವ ಪರಿಣಾಮ ಕೂಲಿಕಾರ್ಮಿಕರು ಗುಳೆ ಹೋಗುವತ್ತ ಮುಖಮಾಡದಂತೆ ಸ್ಥಳಿಯವಾಗಿದ್ದು ನರೇಗಾದಡಿ ಉದ್ಯೋಗ ಖಾತ್ರಿ ಕಾಮಗಾರಿ ಸಮರ್ಪಕವಾಗಿ ಕೂಲಿಕಾರರಿಗೆ ಸದ್ಬಳಕೆಯಾಗಬೇಕು. ಈ ನಿಟ್ಟಿನಲ್ಲಿ ಕಾಮಗಾರಿ ನಡೆಯುವ ಸ್ಥಳದಲ್ಲಿ ಕುಡಿಯುವ ನೀರು, ಪ್ರಥಮ ಚಿಕಿತ್ಸೆಯ ಪರಿಕರಗಳನ್ನು ಮತ್ತು, ನೆರಳಿನ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು.

         ಕ್ಯಾಸನೆಹಳ್ಳಿ ಗ್ರಾಮ ಪಮಚಾಯ್ತಿ ವ್ಯಾಪ್ತಿಯ ಕೆರೆಯಲ್ಲಿ 500 ಕ್ಕೂ ಹೆಚ್ಚು ಕೂಲಿಕಾರ್ಮಿಕರು ಕೆಲಸದಲ್ಲಿ ನಿರತರಾಗಿದ್ದರು .ಕೂಲಿಕಾರ್ಮಿಕರಿಗೆ ವೈಯಕ್ತಿಕವಾಗಿ ಹಣ ಪ್ರತಿಯೊಬ್ಬರಿಗೂ ಪಾವತಿಯಾಗಬೇಕು ಎಂದು ಪಿಡಿಓ ಗಳಿಗೆ ತಿಳಿಸಿದರು.ಈ ಸಂದರ್ಭದಲ್ಲಿ ತಾ.ಪಂ ಇಓ ಜಾನಕೀರಾಮ್ ಪಿಡಿಓ ಸುರೇಶ್, ಮಂಜಣ್ಣ ಸೇರಿದಂತೆ ಸಿಬ್ಬಂದಿಗಳು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap