ತಾಲ್ಲೂಕು ಕಚೇರಿಯಲ್ಲಿ ಅಜಾತಶತ್ರು, ಅಟಲ್ ಬಿಹಾರಿ ವಾಜಪೇಯಿಯವರಿಗೆ ಶ್ರದ್ದಾಂಜಲಿ

ತಿಪಟೂರು

ತಾಲ್ಲೂಕು ಕಚೇರಿಯಲ್ಲಿ ಇಂದು ಆ.16ರಂದು ನಿಧನ ಹೊಂದಿದ ಭಾರತದ ಮಾಜಿ ಪ್ರಧಾನಿ, ಭಾರತ ರತ್ನ, ಕವಿ, ವಾಗ್ಮಿ, ಸಜ್ಜನ ರಾಜಕಾರಣಿ, ಅಟಲ್ ಬಿಹಾರಿ ವಾಜಪೇಯಿರವರ ಶ್ರದ್ದಾಂಜಲಿ ಸಭೆಯನ್ನು ಆಯೋಜಿಸಲಾಗಿತ್ತು. ಈ ವೇಳೆಯಲ್ಲಿ ವಾಜಪೇಯಿವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಶಾಸಕ ಬಿ.ಸಿ.ನಾಗೇಶ್ ಸಾವು ದೇಹಕ್ಕೆ ಹೊರತು ಆತ್ಮಕ್ಕಲ್ಲ. ನಾವು ವಾಜಪೇಯಿಯವರ ದೇಹಕ್ಕೆ ಸಾವಾಗಿರುವುದು ನಮಗೆ ಕಂಡು ಬರುತ್ತಿದೆ. ಆದರೆ ಅವರ ವಿಚಾರಧಾರೆಗಳು, ಇಂದಿಗೂ ಎಲ್ಲರ ಮನದಲ್ಲಿ ಅಚ್ಚಳಿಯದೆ ಉಳಿದಿದೆ. ನಾವು ಅವರ ವಿಚಾರಧಾರೆಗಳನ್ನು ಮತ್ತು ದೇಶಪ್ರೇಮವನ್ನು ಪಾಲಿಸಿಕೊಂಡು ಬಂದರೆ ಅದೇ ನಾವು ಅವರಿಗೆ ಸಲ್ಲಿಸುವ ಶ್ರದ್ಧಾಂಜಲಿ ಎಂದರು.

ವಾಜಪೇಯಿಯವರು ಜಾರಿಗೆ ತಂದಂತಹ ಚತುಷ್ಪಥ ಹೆದ್ದಾರಿಯನ್ನು ಪ್ರಾರಂಭಿಸಿದಾಗ ವಿರೋದ ಪಕ್ಷದವರು ಈ ರಸ್ತೆಗಳು ಯಾವುದಕ್ಕೂ ಪ್ರಯೋಜನಕ್ಕೆ ಬರುವುದಿಲ್ಲ. ರೈತರಿಗೆ ಏನಾದರೂ ಪ್ರಯೋಜನವಾಗುವ ಯೋಜನೆಯನ್ನು ಜಾರಿಗೆ ತನ್ನಿ ಎಂದು ಸದನದಲ್ಲಿ ಅಣಕಿಸಿದ್ದಕ್ಕೆ, ಅಂದು ವಾಜಪೇಯಿಯವರು ಹೇಳಿದ ಮಾತು. ಇಂದಿಗೂ ಪ್ರಸ್ತುತವೆಂಬಂತೆ ಅಂದು ಮಾಡಿದ ಹೆದ್ದಾರಿಗಳು ಇಂದು ರೈತರು ತಮ್ಮ ತರಕಾರಿ ಮತ್ತು ವ್ಯವಸಾಯೋತ್ಪನ್ನಗಳು ನೇರವಾಗಿ ಕೆಲವೇ ಗಂಟೆಗಳಲ್ಲಿ ನಗರದ ಮಾರುಕಟ್ಟೆಯನ್ನು ತಲುಪಿ ರೈತರ ಏಳಿಗೆಯಾಗುತ್ತದೆ ಎಂದರು. ಅದಕ್ಕಾಗಿಯೇ ತಮ್ಮ ಹೆಸರನ್ನು ಇಟ್ಟುಕೊಳ್ಳದೆ ಪ್ರಧಾನಮಂತ್ರಿ ಗ್ರಾಮಸಡಕ್ ನಂತಹ ಹಲವಾರು ಯೋಜನೆಗಳನ್ನು ಜಾರಿಗೆ ತಂದು ದೇಶವನ್ನು ಪ್ರಗತಿಪಥದತ್ತ ತಂದು ನಿಲ್ಲಿಸಿದ್ದಾರೆ. ಅದನ್ನು ಮುಂದುವರೆಸಿಕೊಂಡು ಹೋಗುವ ಕಾರ್ಯವನ್ನು ನಾವು ಸರಿಯಾಗಿ ಮಾಡಬೇಕಷ್ಟೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ತಹಸೀಲ್ದಾರ್ ಶಿವರಾಜ್ ನಮಗೆ ಲಾಲ್ ಬಹದ್ದೂರ್ ಶಾಸ್ತ್ರೀಯವರು ಜೈ ಜವಾನ್, ಜೈ ಕಿಸಾನ್ ಕೊಟ್ಟರು. ಅದೇ ರೀತಿ ವಾಜಪೇಯಿಯವರು ಇಂದು ನಮಗೆ ಜೈ ವಿಜ್ಞಾನ್ ಸೇರಿಸಿದ್ದಾರೆ. ವಾಜಪೇಯಿಯವರ ವಿಚಾರಧಾರೆಗಳನ್ನು ಎಷ್ಟು ಹೇಳಿದರೂ ಮುಗಿಯುವುದಿಲ್ಲ. ಅವರು ಜಾರಿಗೆ ತಂದಂತಹ ಸರ್ವಶಿಕ್ಷಣ ಅಭಿಯಾನ್ ಯೋಜನೆಯು ಮಹತ್ವವಾದುದು. ವಾಜಪೇಯಿ ಪ್ರಧಾನಿಯಾಗುವುದಕ್ಕಿಂತ ಮುಂಚೆ ಭಾರತವು 380 ರಾಷ್ಟ್ರಗಳಿಂದ ಸಾಲ ಪಡೆದಿತ್ತು. ಆದರೆ ಅವರು ಅಧಿಕಾರದಿಂದ ಇಳಿದಾಗ ಆ ಸಾಲಗಳನ್ನು ತೀರಿಸಿ 18 ರಾಷ್ಟ್ರಗಳಿಗೆ ಸಾಲವನ್ನು ಕೊಟ್ಟಿದ್ದನ್ನು ನಾವಿಂದು ಸ್ಮರಿಸಬಹುದು ಎಂದರು.

Recent Articles

spot_img

Related Stories

Share via
Copy link