ಚಿಕ್ಕನಾಯಕನಹಳ್ಳಿ
ತಾಲ್ಲೂಕಿನ ಕಸಬಾ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಪಟ್ಟಣದ ಜ್ಞಾನಪೀಠ ಪ್ರೌಢಶಾಲೆಯ ಮಕ್ಕಳು ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ವಿಜೇತರಾಗಿ ತಾಲ್ಲೂಕು ಮಟ್ಟದಲ್ಲಿ ನಡೆಯುವ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಆರ್.ಮೇಘನಾ 800 ಮೀಟರ್ ಓಟದಲ್ಲಿ ಪ್ರಥಮಸ್ಥಾನ, 3000 ಮೀಟರ್ ಓಟದಲ್ಲಿ ದ್ವೀತಿಯ ಸ್ಥಾನ, ಪಿ.ಭಾವನಾ 400 ಮೀಟರ್ ಓಟದಲ್ಲಿ ಪ್ರಥಮಸ್ಥಾನ, ಸಂಗೀತ 3000ಮೀಟರ್ ನಡಿಗೆಯಲ್ಲಿ ಪ್ರಥಮಸ್ಥಾನ, ಕೆ.ಜಿ.ವೀಣಾ 1500 ಮೀಟರ್ ಓಟದಲ್ಲಿ ಪ್ರಥಮಸ್ಥಾನ, 3000 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ, ಅಭಿಲಾಷ್ 1500 ಮೀಟರ್ ಓಟದಲ್ಲಿ ದ್ವಿತೀಯಸ್ಥಾನ, ಮನೋಜ್ 5000 ಮೀಟರ್ ನಡಿಗೆ ಪ್ರಥಮಸ್ಥಾನ.
ಗುಂಪು ಆಟ :- ಬಾಲಕಿಯರ ವಿಭಾಗ :- ಖೋಖೋ ಹಾಗೂ ಬಾಲ್ಬ್ಯಾಡ್ಮಿಂಟನ್ : ಪ್ರಥಮಸ್ಥಾನ, ಕಬಡ್ಡಿ : ದ್ವಿತೀಯಸ್ಥಾನ.
ಬಾಲಕರ ವಿಭಾಗ:- ಬಾಲ್ಬ್ಯಾಡ್ಮಿಂಟನ್ ದ್ವಿತೀಯಸ್ಥಾನ ಪಡೆದು ತಾಲ್ಲೂಕು ಮಟ್ಟದಲ್ಲಿ ನಡೆಯುವ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಇವರನ್ನು ಜ್ಞಾನಪೀಠ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಶಂಕರ್ರಾವ್ ಹಾಗೂ ದೈಹಿಕ ಶಿಕ್ಷಕ ಲೋಕೇಶ್ ಹಾಗೂ ಶೇಷಾದ್ರಿ ಶ್ಲಾಘಿಸಿದ್ದಾರೆ