ತಿಂಗಳ ಸಿನೆಮಾ  “ಚೆಕ್ ದೆ ಇಂಡಿಯಾ”

ತುಮಕೂರು
                 

            ಆವಿಷ್ಕಾರ ಪ್ರಗತಿಪರ ಸಾಂಸ್ಕತಿಕ ವೇದಿಕೆಯು ಕಲೆ, ಸಾಹಿತ್ಯ, ವಿಜ್ಞಾನ, ಸಿನಿಮಾ, ಮುಂತಾದ ಸಾಂಸ್ಕತಿಕ ಕ್ಷೇತ್ರಗಳಲ್ಲಿ ಶ್ರೇಷ್ಠ ಕೃತಿಗಳನ್ನು, ಸಮಾಜಮುಖಿ ವಿಚಾರಗಳನ್ನು ಬಿಂಬಿಸುವ ಚಲನಚಿತ್ರಗಳನ್ನು ಸತತವಾಗಿ ಪ್ರದರ್ಶಿಸುತ್ತಾ ಬಂದಿದೆ ಈ ನಿಟ್ಟಿನಲ್ಲಿ ‘ತಿಂಗಳ ಸಿನೆಮಾ ’ ಕಾರ್ಯಕ್ರಮವನ್ನು ನಡೆಸುತ್ತಿದೆ.

               ಈ ದಿಕ್ಕಿನಲ್ಲಿ, ದಿನಾಂಕ 26-8-2018 ರಂದು ನಗರದ ಸಿದ್ಧಗಂಗಾ ಬಡಾವಣೆಯ 1ನೇ ಕ್ರಾಸ್‍ನಲ್ಲಿರುವ ಮಾರುತಿ ಇಂಟರ್‍ನ್ಯಾಷನಲ್ ಸ್ಕೂಲ್‍ನಲ್ಲಿ ಪ್ರದರ್ಶನಗೊಂಡು ಜಯದೀಪ್ ಸಾನಿ ಚಿತ್ರಕಥೆ ಬರೆದು, ಶಿಮ್ಮಿತ್ ಆಮಿನ್ ನಿರ್ದೇಶನದ ಚಿತ್ರ “ಚೆಕ್ ದೆ ಇಂಡಿಯಾ” ಭಾರತೀಯ ಸಿನಿಮಾರಂಗದಲ್ಲೇ ಒಂದು ಉತ್ತಮ ಸಿನಿಮಾಗಳ ಸಾಲಿನಲ್ಲಿ ನಿಲ್ಲುತ್ತದೆ, ಕಥಾ ವಿಷಯ ಚಿತ್ರದ ನಾಯಕ ಶಾರೂಖ್ ಖಾನ್ (ಕಬೀರ್ ಖಾನ್ ಸಿನೆಮಾದಲ್ಲಿ) ಭಾರತೀಯ ಹಾಕಿ ತಂಡದ ನಾಯಕ, ಪಾಕಿಸ್ತಾನ ಭಾರತ ತಂಡಗಳ ನಡುವೆ ನಡೆಯುವ ಪಂದ್ಯದಲ್ಲಿ ಕಬೀರ್ ಖಾನ್ ಗೋಲ್ ಮಾಡುವಲ್ಲಿ ವಿಫಲರಾಗುತ್ತಾರೆ, ಪಾಕಿಸ್ತಾನ ಗೆಲ್ಲುತ್ತದೆ. ಪಾಕಿಸ್ತಾನದ ಆಟಗಾರ ಮತ್ತು ಕಬೀರ್ ಖಾನರ ಕೈ ಕುಲುಕುವ ದೃಶ್ಯವನ್ನು ನಂತರ ಪತ್ರಿಕೆಯವರು ಪೋಟೋಕ್ಲಿಕ್ಕಿಸಿಕೊಳ್ಳುತ್ತಾರೆ. ನಂತರ ಈ ವಿಷಯದ ಸುತ್ತಾ ಹಲವಾರು ವಿವಾದಗಳೇತ್ತವೆ. ಆಗ ಕಬೀರ್ ಖಾನ್ ಕೆಲದಿನಗಳವರೆಗೆ ಕಾಣಿಸಿಕೊಳ್ಳುವುದಿಲ್ಲಾ ನಂತರ ಮಹಿಳಾ ಹಾಕಿ ತಂಡಕ್ಕೆ ಕೋಚ್ ಆಗಿ ಸೇರಿಕೊಂಡು ಇಡೀ ತಂಡವನ್ನು ಬಲಗೊಳಿಸಿ ಎಲ್ಲಾ ಆಟಗಾರರಲ್ಲಿ ಸ್ಪೂರ್ತಿ ತುಂಬಿ ಚಾಂಪಿಯನ್‍ಶಿಪ್‍ಗೆ ಅಣಿಗೊಳಿಸುತ್ತಾರೆ.

               ನಂತರ ಸಿನಿಮಾದ ಬಗ್ಗೆ ಮಾತನಾಡಿದ ಶ್ರೀಯುತ ಶ್ರೀನಿವಾಸ್‍ರವರು ಹೇಳಿದರು ಚಿತ್ರ ಅದ್ಭುತವಾಗಿ ಮೂಡಿಬಂದು ನೋಡುಗರಲ್ಲಿ ಕ್ರೀಡಾಮನೋಭಾವವನ್ನು ಬೆಳೆಸುವಲ್ಲಿ, ಕ್ರೀಡೆಯಲ್ಲಿ ಸೋಲು ಮತ್ತು ಗೆಲುವು ಸ್ವಾಭಾವಿಕ ಆದರೆ ಸೋಲನ್ನು ನಾವು ಸಂತೋಷವಾಗಿ, ಯಾವುದೇ ವಿಕಲತೆಗಳಿಲ್ಲದೆ ಒಪ್ಪಿಕೊಳ್ಳುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ಆತ್ಮಸ್ಥೈರ್ಯವನ್ನು, ಆತ್ಮಗೌರವನ್ನು ಬೆಳೆಸುವ ಬಗ್ಗೆ ಚಿತ್ರ ತುಂಬಾ ಪರಿಣಾಮಕಾರಿಯಾಗಿದೆ ಎಂದರು.

                 ಚುಕ್ಕಿ ಎಂಬ ವಿದ್ಯಾರ್ಥಿನಿಮಾತನಾಡಿ ಸಿನಿಮಾದಲ್ಲಿ ಒಬ್ಬ ಕ್ರಿಕೆಟ್ ಪ್ಲೇಯರ್ ಈ ಹಾಕಿ ತಂಡದಲ್ಲಿರುವ ಒಬ್ಬರನ್ನು ಇಷ್ಟ ಪಟ್ಟರುತ್ತಾರೆ ಆದರೆ ಅವನು ಕ್ರಿಕೇಟ್ ಆಟದ ಮುಂದೆ ಹಾಕಿ ಆಟ ಏನೂ ಅಲ್ಲ ಎಂದು ಹೀಗಳೆಯುತ್ತಾನೆ. ಆಗ ಹಾಕಿ ಆಟಗಾತಿ ಹೇಳುತ್ತಾಳೆ ಇಲ್ಲಾ ನನಗೆ ಹಾಕಿ ಆಟ ತುಂಬಾ ಮುಖ್ಯ ಎಂದು. ಹೀಗೆ ಆತ್ಮಗೌರವನ್ನು ಕಾಪಾಡಿಕೊಳ್ಳುವ ಆ ಪಾತ್ರ ಇಷ್ಟ ಎಂದು ಹೇಳಿದರು. ಇನ್ನು ಬಸವರಾಜು, ಮಂಜುಳ ಮುಂತಾದವರು ಚಿತ್ರದ ಕುರಿತು ಮಾತನಾಡಿದರು. ದಯಮಾಡಿ ಈ ಸಾಮಾಜಿಕ ಚಟುವಟಿಕೆಗಳ ವರದಿಯನ್ನು ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಲು ಕೋರುತ್ತಿದ್ದೇವೆ.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap