ತುಮಕೂರು:ವ್ಯಾಪಾರವಹಿವಾಟು, ವಾಹನ ಸಂಚಾರ ಸ್ಥಗಿತ

ತುಮಕೂರು

    ಕೊರೊನಾ ವೈರಸ್ ಹರಡುವುದನ್ನು ತಡೆಯಲು ಸರ್ಕಾರ ಕರೆ ನೀಡಿದ್ದ ಭಾನುವಾರದ ಲಾಕ್‍ಡೌನ್‍ಗೆ ತುಮಕೂರಿನಲ್ಲಿ ನಾಗರೀಕರು ಸ್ವಯಂಪ್ರೇರಿತರಾಗಿ ಸ್ಪಂದಿಸಿ ಯಶಸ್ವಿಗೊಳಿಸಿದರು. ಅಗತ್ಯ ಸೇವೆಗಳ ಹೊರತಾಗಿ ಇನ್ನಾವುದೇ ವ್ಯಾಪಾರವಹಿವಾಟು ಚಟುವಟಿಕೆಗಳು ಬಂದ್ ಆಗಿದ್ದವು. ರಸ್ತೆಗಳಲ್ಲಿ ಜನ, ವಾಹನ ಸಂಚಾರವೂ ಇರಲಿಲ್ಲ. ದ್ವಿಚಕ್ರ ವಾಹನ ಸವಾರರ ಓಡಾಟ ಕಂಡು ಬಂದರೂ ಅವುಗಳ ಸಂಖ್ಯೆಯೂ ವಿರಳವಾಗಿತ್ತು. ಜನ ಮನೆಯಲ್ಲೇ ಉಳಿದರು.

    ಆಸ್ಪತ್ರೆ, ಔಷಧಾಲಯ, ಪೆಟ್ರೋಲ್ ಬಂಕ್ ಸೇರಿದಂತೆ ಅಗತ್ಯ ಸೇವೆಗಳು ಎಂದಿನಂತೆ ಇದ್ದವು. ಕೆಎಸ್‍ಆರ್‍ಟಿಸಿ ಬಸ್‍ಗಳ ಸೇವೆ ಇರಲಿಲ್ಲ. ಆಟೋಗಳೂ ರಸ್ತೆಗಿಳಿಯಲಿಲ್ಲ. ಸರಕು ಸಾಗಾಣಿಕೆ ವಾಹನಗಳ ಸಂಚಾರ ಮಿತವಾಗಿತ್ತು. ಕೆಲವೆಡೆ ಬೆಳಿಗ್ಗೆ ಹೋಟೆಲ್‍ಗಳು ತೆರೆದು ಪಾರ್ಸಲ್ ಸೇವೆ ಒದಗಿಸಿದವು. ಮಾಂಸದ ಅಂಗಡಿಗಳು ಎಂದಿನಂತೆ ವ್ಯಾಪಾರ ನಡೆಸಿದವು. ಮದ್ಯದ ಅಂಗಡಿಗಳು ಬಂದ್ ಆಗಿದ್ದವು. ತರಕಾರಿ ಮಾರುಕಟ್ಟೆ ತೆರೆದಿದ್ದರೂ ಭಾನುವಾರ ಗ್ರಾಹಕರ ಸಂಖ್ಯೆ ಕಮ್ಮಿಯಾಗಿತ್ತು. ಜನ, ವಾಹನಗಳ ಸಂಚಾರವಿಲ್ಲದೆ ಪ್ರಮುಖ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಅಲ್ಲಲ್ಲಿ ಪೊಲೀಸರು ಬಂದೋಬಸ್ತಿನಲ್ಲಿದ್ದರೂ ಜನರನ್ನು ನಿಯಂತ್ರಿಸುವ ಪ್ರಮೇಯ ಅವರಿಗೆ ಬರಲಿಲ್ಲ. ಮಾಸ್ಕ್ ಧರಿಸದವರು, ಗುಂಪುಗೂಡುವವರನ್ನು ಚೆದುರಿಸುವ ಪ್ರಯತ್ನ ಮಾಡಿದರಷ್ಟೇ.

     ಲಾಕ್‍ಡೌನ್ ಅನುಭವವಿದ್ದ ಕಾರಣ ಸಾರ್ವಜನಿಕರು ತಮ್ಮ ಅಗತ್ಯ ವಸ್ತುಗಳನ್ನು ಮುನ್ನಾದಿನವೇ ಸಂಗ್ರಹಿಸಿಕೊಂಡವರಂತೆ ಭಾನುವಾರ ಪರದಾಡಲಿಲ್ಲ. ಹೀಗಾಗಿ ಸಾರ್ವಜನಿಕರು ರಸ್ತೆಗೆ ಬರದೆ ಮನೆಯಲ್ಲೇ ಉಳಿದರು.ಆಸ್ಪತ್ರೆ ಮತ್ತಿತರ ತುರ್ತು ಕೆಲಸಗಳಿಗೆ ಹೋಗಿ ಬರುವವರಿಗೆ ಬಸ್, ಆಟೋ ಇಲ್ಲದೆ ಜನರಿಗೆ ಸಮಸ್ಯೆಯಾಯಿತು. ಇದರ ಹೊರತಾಗಿ, ಲಾಕ್‍ಡೌನ್‍ನಿಂದ ಸಾರ್ವಜನಿಕರಿಗೆ ಅನಾನುಕಾಲವಾದಂತೆ ಕಂಡುಬರಲಿಲ್ಲ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link