ತುಮಕೂರು :ಚಿನ್ನರ ಗಣಪನ ಮುಂದೆ ಮಕ್ಕಳ ಕಲೆ ಅನಾವರಣ.

ತುಮಕೂರು

              ನಗರದ ಸಿದ್ಧಗಂಗಾ ಬಡಾವಣೆಯ ಮೊದಲನೇ ತಿರುವಿನ ನಿವಾಸಿಗಳು ಮತ್ತು ಪುಟ್ಟ ಪುಟ್ಟ ಮಕ್ಕಳು ಬಾಲಗಂಗಾಧರ ತಿಲಕ್ ಗಣಪತಿ ಬಳಗ ರಚಿಸಿ ಗಣಪತಿಯನ್ನು ಪ್ರತಿಷ್ಠಾಪನೆ ಮಾಡಿದು ಇದರ ಅಂಗವಾಗಿ ಮೂರನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಮಕ್ಕಳು ಹಾಡು, ನೃತ್ಯ, ವಚನ ಮತ್ತು ಶ್ಲೋಕ ಹಾಗೂ ವಿವಿದ ಕಲೆ ಪ್ರದರ್ಶನ ಮಾಡಿದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲಿಕೆ ಸದಸ್ಯೆ ಕೆ. ಎಸ್. ಮಂಜುಳಾ ಆದರ್ಶ ಮಕ್ಕಳ ಸಾಹಿತಿ ಸಿದ್ದರಾಜು ಐವಾರ್, ಪುಷ್ಪ ರಮೇಶ್, ಸುಮಾ ಉಮೇಶ್, ಮಂಜುಳಾ, ಮಲ್ಲೇಶ್, ಮಮತಾ ಟಿ. ಎಂ ಹಾಗೂ ಬಡಾವಣೆ ನಿವಾಸಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಶ್ರೀಮತಿ ಸುಮಾ ಉಮೇಶ್ ಅವರು ಮಾತನಾಡಿ ಮಕ್ಕಳಿಗೆ ಗಣಪತಿ ಹಬ್ಬದ ಮಹತ್ವ ಬಾಲಗಂಗಾಧರ ತಿಲಕ್ ಜೀವನ ಶೈಲಿ ಮತ್ತು ಪರಿಸರ ಸಂರಕ್ಷಣೆ ಬಗ್ಗೆ ಮಾಹಿತಿ ನೀಡಿದರು ಪಾಲಿಕೆ ಸದಸ್ಯೆ ಕೆ. ಎಸ್. ಮಂಜುಳಾ ಆದರ್ಶ ಮಕ್ಕಳ ಪ್ರತಿಭೆಯನ್ನು ಶ್ಲಾಘಿಸಿ ಮಕ್ಕಳು ಸದಾ ಉತ್ಸಾಹ ಮತ್ತು ಲವಲವಿಕೆಇಂದ ಇರಲು ಈ ರೀತಿ ಕಾರ್ಯಕ್ರಮಗಳಲ್ಲಿ ಭಾಗವಹಿಸ ಬೇಕು, ಜನರೊಂದಿಗೆ ಬೆರೆತು ಸಮಾಜಕ್ಕೆ ಉತ್ತಮ ಪ್ರಜೆಯಾಗಿ ರೂಪುಗೊಳ್ಳ ಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
              ಶ್ರೀಯುತ ಸಿದ್ದರಾಜು ಐವಾರ್ ಅವರು ಮಕ್ಕಳಿಗೆ ಕಲೆ, ಸಾಹಿತ್ಯ ಸಂಸ್ಕೃತಿ ಇನ್ನೂ ಇತರೆ ವಿಚಾರದಲ್ಲಿ ಮಕ್ಕಳು ಆಸಕ್ತಿ ವಹಿಸಬೇಕು ಮತ್ತು ಇದಕ್ಕೆ ಪೋಷಕರು ಪ್ರೋತ್ಸಾಹ ನೀಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಪುಷ್ಪ ರಮೇಶ್ ಅವರು ಮಕ್ಕಳಿಗೆ ಉಡುಗೊರೆ ನೀಡಿದರು. ಕಾರ್ಯಕ್ರಮದಲ್ಲಿ ಮಂಜುಳಾ ಆದರ್ಶ ಅವರಿಗೆ ಸನ್ಮಾನ ಮಾಡಲಾಯಿತು.
ಶ್ರೀ ಬಾಲಗಂಗಾಧರ ತಿಲಕ್ ಗಣಪತಿ ಬಳಗವು ಮಕ್ಕಳಿಂದ ಒಳಗೊಂಡು ಇದರ ಅಧ್ಯಕ್ಷ ಯಶವಂತ. ಕೆ. ಎಸ್, ಉಪಾಧ್ಯಕ್ಷೆ – ದಿವ್ಯ ಟಿ. ಎಂ ಹಾಗೂ ಪದಾಧಿಕಾರಿಗಳು ಹರ್ಷಿತ ಟಿ. ಎಂ, ತೇಜಸ್ವಿನಿ ಎಂ. ಸಿ, ಹಿತೈಷಿ, ಶರಣ್, ನಿಧಿ, ದೀಪಾಲಿ, ಶೀತಲ್ ಮತ್ತಿತರರು ಉಪಸ್ಥಿತರಿದ್ದರು

Recent Articles

spot_img

Related Stories

Share via
Copy link