ತುಮಕೂರು ನೆಲವನ್ನು ಸಾಂಸ್ಕೃತಿಕವಾಗಿ ಹೊನ್ನ ನೆಲವನ್ನಾಗಿ ಮಾಡಿದ ಭಾವದಲೆಯಲಿ ಕವಿತಾಗಾಯನ.

ತುಮಕೂರು

               ನಗರದ ಬಿರ್ಲಾ ಸಭಾಂಗಣದಲ್ಲಿ ಭಾವಾಲಯ ಟ್ರಸ್ಟ್ ಆಯೋಜಿಸಿದ್ದ “ಭಾವದಲೆಯಲಿ ಕವಿತಾಗಾಯನ” ಕಾರ್ಯಕ್ರಮದ ಮುಖ್ಯಅತಿಥಿಗಳಾಗಿದ್ದ ಖ್ಯಾತ ರಂಗಕರ್ಮಿ ಹಾಗು ನಟ ಶ್ರೀ ಶ್ರೀನಿವಾಸಫ್ರಭು ಅವರು ಕವಿ ದಿ. ಎಂ.ಎನ್.ವ್ಯಾಸರಾವ್ ಅವರ “ನಮ್ಮ ನೆಲವಿದು ಹೊನ್ನ ನೆಲವಿದು ಚೆಲುವಕನ್ನಡ ನಾಡಿದು” ಕವಿತೆಯ ಸಾಲುಗಳನ್ನು ಉಲ್ಲೇಖಿಸಿ ಮಾತನಾಡಿದರು. ದಿವಂಗತ ಕವಿಗಳ ನೆನಪಿನಲ್ಲಿ ಕಾರ್ಯಕ್ರಮ ಆಯೋಜಿಸಿ, ವಾರಗಟ್ಟಲೆ ನೂರಾರು ವಿದ್ಯಾರ್ಥಿಗಳಿಗೆ ಭಾವಗೀತೆಗಳ ತರಬೇತಿ ನೀಡಿ, ಆರುನೂರುಕ್ಕೂ ಹೆಚ್ಚು ಗಾಯಕರನ್ನು ಒಂದೇ ವೇದಿಕೆಯಲ್ಲಿ ಹಾಡಿಸುವುದೆಂದರೆ ಅದು ಸಾಹಸವೇ ಸರಿ. ಇಂತಹ ಒಂದು ಊಹಿಸಲೂ ಅಸಾಧ್ಯವಾದ ಪ್ರಯೋಗವನ್ನು ಭಾವಾಲಯ ಸಂಸ್ಥೆ ಗಾಯಕಿ ಶ್ರೀಮತಿ. ರೂಪನಾಗೇಂದ್ರ ಅವರ ಸಾರಥ್ಯದಲ್ಲಿ ಯಶಸ್ವಿಯಾಗಿ ನಿಭಾಯಿಸಿರುವುದು ಅಭಿನಂದನಾರ್ಹವಾಗಿದೆ. ಇಂತಹ ಕಲಾಕೈಂಕರ್ಯದಲ್ಲಿ ಅವರೊಂದಿಗೆ ಕೈಜೋಡಿಸಿದ ಶಾಲೆಗಳು, ವಿದ್ಯಾರ್ಥಿಗಳು, ಪೋಷಕರು, ಪ್ರಾಯೋಜಕರು ಹಾಗು ಸಾವಿರಕ್ಕೂ ಹೆಚ್ಚು ಸಂಖ್ಯೆಯಲ್ಲಿ ನೆರೆದಿರುವ ಸಂಗೀತಾಸಕ್ತ ಸಭಿಕರು ಸಮಾಜಕ್ಕೆ ಮಾದರಿಯಾಗಿದ್ದಾರೆಂದರು. ಎಲ್ಲರ ನಿರಂತರ ಪ್ರೋತ್ಸಾಹದಿಂದ ಭಾವಾಲಯದ ವೇದಿಕೆಗಳಲ್ಲಿ ಇದೇ ರೀತಿ ಕವಿತಾಗಾಯನ ಕಾರ್ಯಕ್ರಮಗಳು ನಡೆದು, ಕವಿರಚನೆಗಳು ಮನೆಮನಗಳನ್ನು ಮುಟ್ಟಲಿ ಎಂದು ಹಾರೈಸಿದರು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಉತ್ತಮ ಗುಣಮಟ್ಟದ ಭಾವಗೀತೆಗಳನ್ನು ಆಲಿಸಿದ್ದು ಮನಸ್ಸಿಗೆ ತುಂಬಾ ಸಂತೋಷ ನೀಡಿದ ವಿಚಾರವೆಂದರು.

                    ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ತುಮಕೂರು ನಗರ ಶಾಸಕರಾದ ಶ್ರೀ ಜೋತಿಗಣೇಶ್ ಮಾತನಾಡುತ್ತಾ, ಭಾವಾಲಯ ಹಲವಾರು ವರ್ಷಗಳಿಂದ ವಿದ್ಯಾರ್ಥಿ ಸಮುದಾಯಕ್ಕೆ ಸಂಗೀತ ಶಿಕ್ಷಣ ನೀಡುತ್ತಾ ಬಂದಿರುವುದನ್ನು ಗಮನಿಸದ್ದೇನೆ. ಸಂಗೀತದೊಂದಿಗೆ ಸಂಸ್ಕಾರವನ್ನೂ ನೀಡಿ ಮಕ್ಕಳ ವ್ಯಕ್ತಿತ್ವವನ್ನು ಹದಗೊಳಿಸುವ ಕೆಲಸ ಶ್ಲಾಘನೀಯ. ಭಾವಾಲಯದಂತಹ ಸಾಂಸ್ಕøತಿಕ ಸಂಸ್ಥೆಗಳು ನಮ್ಮ ಸಮಾಜಕ್ಕೆ ಮಾದರಿಯಾಗಿದ್ದು, ಸಾಂಸ್ಕøತಿಕ ಕಲೆಗಳ ಉತ್ತೇಜನಕ್ಕೆ ಶಾಸಕನಾಗಿ ಹೆಚ್ಚು ಪ್ರೋತ್ಸಾಹ ನೀಡುವುದಾಗಿ ತಿಳಿಸಿದರು. ಇದೇ ಸಂದರ್ಭದಲ್ಲಿ ಭಾವಾಲಯದ ತಾಂತ್ರಿಕ ಸಹಕಾರದಲ್ಲಿ ತುಮಕೂರು ನಗರ ಸಂಚಾರ ಪೊಲೀಸ್ ಇಲಾಖೆ ನಿರ್ಮಿಸಿದ ಸುರಕ್ಷತೆ ಅರಿವು ಹೆಚ್ಚಿಸುವ ಕಿರುಚಿತ್ರಗಳನ್ನು ಬಿಡುಗಡೆಗೊಳಿಸಿದರು.

               ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ. ದಿವ್ಯಾ.ವಿ.ಗೋಪಿನಾಥ್ ಮಾತನಾಡುತ್ತಾ, ಕಲೆಯ ಮೂಲಕ ಸಾಮಾಜಿಕ ಜವಾಬ್ದಾರಿ ನಿರ್ವಹಿಸುವ ಭಾವಾಲಯ ತಂಡದ ಕಾರ್ಯಕ್ರಮಗಳೇ ವಿನೂತನವಾಗಿದ್ದು ಪ್ರಶಂಸೆಗೆ ಅರ್ಹವಾಗಿದೆ. ಸಂಚಾರ ಸುರಕ್ಷತೆಯ ಅರಿವು ಹೆಚ್ಚಿಸಲು ಕಿರುಚಿತ್ರ ಮಾಡಬೇಕೆಂಬ ಇಂಗಿತ ವ್ಯಕ್ತಪಡಿಸುತ್ತಿದ್ದಂತೇ, ಕಥೆ, ತಂತ್ರಜ್ಞರ ತಂಡ, ಪಾತ್ರವರ್ಗವನ್ನು ಸಿದ್ದಗೊಳಿಸಿ ಕಡಿಮೆ ಅವಧಿಯಲ್ಲಿ ಕಿರುಚಿತ್ರಗಳನ್ನು ನಿರ್ಮಿಸಿದ್ದು ನಾಗೇಂದ್ರ ಕಾರ್ಯ ಕ್ಷಮತೆಯನ್ನು ಸೂಚಿಸುತ್ತದೆ. ಕಿರುಚಿತ್ರಗಳು ತುಮಕೂರಿನ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡು ಸಾರ್ವಜನಿಕರಲ್ಲಿ ಸುರಕ್ಷತೆಯ ಅರಿವು ಮೂಡಿಸುವಲ್ಲಿ ಸಫಲವಾಗಿದೆಯೆಂದರು. ಚಲನಚಿತ್ರಗಳಲ್ಲಿ ತೋರಿಸಿದಂತೆ ಎಲ್ಲ ಪೊಲೀಸರೂ ಕೆಟ್ಟವರಿರುವುದಿಲ್ಲ, ಇಲಾಖೆ ಇರುವುದು ಸಾರ್ವಜನಿಕರ ಹಿತಕಾಪಾಡಲೆಂದರು. ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಪೊಲೀಸ್ ಇಲಾಖೆಯ ಸದಾಶಯಗಳನ್ನು ಪ್ರಸರಿಸುವ ಮೂಲಕ ಪೊಲೀಸ್ ಇಲಾಖೆಯ ಗೌರವವನ್ನು ಹೆಚ್ಚಿಸುವ ಕೆಲಸ ಮಾಡಿರುವುದಕ್ಕೆ ಭಾವಾಲಯ ಹಾಗು ನಾಗೇಂದ್ರ ದಂಪತಿಗಳನ್ನು ಅಭಿನಂದಿಸಿದರು.

                 ಕಾರ್ಯಕ್ರಮದಲ್ಲಿ 600ಕ್ಕೂ ಹೆಚ್ಚು ಗಾಯಕರು ಖ್ಯಾತ ಕವಯತ್ರಿ ಶ್ರೀಮತಿ ರಂಜಿನಿಫ್ರಭು ಅವರ ಅಗೋಚರ ಈ ಚೆಲುವಿನ ಕಲೆಗಾರ ಗೀತೆಗೆ ದನಿಯಾದರು.

                 ಪ್ರಾಸ್ತಾವಿಕ ನುಡಿಗಳನ್ನಾಡಿದ ಶ್ರೀ.ನಾಗೇಂದ್ರ ಅವರು, ವಿದ್ಯಾರ್ಥಿಗಳಿಗೆ ಗಣಿತ, ವಿಜ್ಞಾನಗಳ ಅಂಕಗಳು ಉದ್ಯೋಗ ದೊರಕಿಸಿಕೊಡುತ್ತವೆ, ಬದುಕನ್ನು ಕಟ್ಟಿಕೊಡುವುದು ಭಾಷೆಯೆಂದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆ, ತುಮಕೂರು ಹಾಗು ಒಕ್ಕೂಟ, ಫಿಟ್ವೆಲ್ ಸಂಸ್ಥೆ, ಎಕ್ಸೈಡ್ ಲೈಫ್ ಇನ್‍ಸೂರೆನ್ಸ್, ಸಿ.ಐ.ಟಿ ಗುಬ್ಬಿ, ಶ್ರೀ ಕೃಷ್ಣ ಏಜೆನ್ಸೀಸ್, ಭಗವತಿ ರೈಸ್ ಮಿಲ್ ಪ್ರಾಯೋಜಿಸಿದ ಕಾರ್ಯಕ್ರಮದಲ್ಲಿ ಉದ್ಯಮಿ ಶ್ರೀ ಡಿ.ಆರ್.ಸುಬ್ರಮಣ್ಯ, ಯೋಗತಜ್ಞ ಶ್ರೀ ಎಂ.ಕೆ.ನಾಗರಾಜರಾವ್, ಲೆಕ್ಕಪರಿಶೋಧಕರಾದ ಶ್ರೀ ಪ್ರಸನ್ನ, ಶ್ರೀ ದಯಾನಂದ ಕುಲಕರ್ಣಿ, ಸಂಗೀತ ವಿದುಷಿ. ಶ್ರೀಮತಿ ಲಲಿತಾಚಲಂ ಉಪಸ್ಥಿತರಿದ್ದರು. ಕಾರ್ಯಕ್ರಮದ ಅರ್ಥಪೂರ್ಣ ನಿರೂಪಣೆ ಕು.ವಸುಧ ಹಾಗು ಕು. ಶೃತಿಯವರಿಂದ ನಡೆಯಿತು.

Recent Articles

spot_img

Related Stories

Share via
Copy link