ತಿಪಟೂರು
ಭಾತರದ ಮಾಜಿ ಪ್ರಧಾನಿಯಾಗಿ ಸೇವೆ ಸಲ್ಲಿಸಿ, ಹಾಲಿ ಸಂಸದರಾಗಿದ್ದು, ಜಾತ್ಯತೀತ ಜನತಾದಳದ ರಾಷ್ಟ್ರೀಯ ಅಧ್ಯಕ್ಷರಾಗಿರುವ ಹೆಚ್.ಡಿ.ದೇವೇಗೌಡರು ಕಲ್ಪತರು ನಾಡಿನಿಂದ ಸ್ಪರ್ಧಿಸಬೇಕೆಂದು ತಾಲ್ಲೂಕು ಜೆಡಿಎಸ್ ಮುಖಂಡ ಲೋಕೇಶ್ವರ್ ಒತ್ತಾಯ ಮಾಡಿದ್ದಾರೆ.
ನಗರದ ತಮ್ಮ ನಿವಾಸದಲ್ಲಿ ಏರ್ಪಡಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರಮಟ್ಟದಲ್ಲಿ ತುಮಕೂರು ಜಿಲ್ಲೆ ಸಮಗ್ರ ಜಿಲ್ಲೆಯಾಗಬೇಕಾದರೆ ಹೆಚ್.ಡಿ.ದೇವೆಗೌಡರು ಈ ಕ್ಷೇತ್ರದಿಂದ ಸ್ಫರ್ಧಿಸಿದರೆ, ಸುಮಾರು 2 ರಿಂದ 3 ಲಕ್ಷ ಅಂತರದ ಮತಗಳಿಂದ ಗೆಲುವನ್ನು ಸಾಧಿಸಲಿದ್ದಾರೆ. ಇವರು ಪ್ರತನಿಧಿಸಿದ ಹಾಸನ, ರಾಮನಗರ, ಮಂಡ್ಯ ಕ್ಷೇತಗಳಂತೆ ತುಮಕೂರನ್ನು ಅಭಿವೃದ್ಧಿ ಪಥದತ್ತ ಕೊಂಡಯುತ್ತಾರೆಂಬ ಭರವಸೆಯಿದೆ. ಈ ದೃಷ್ಟಿಯಿಂದ ಹಿರಿಯ ಸಂಸದರಾಗಿರುವ ಹೆಚ್.ಡಿ.ದೇವೆÀಗೌಡರ ಅವಶ್ಯಕತೆ ಈ ನಾಡಿಗೆ ಇದೆ. ರಾಜ್ಯದಲ್ಲಿ ಮೈತ್ರಿ ಸರ್ಕಾರದ ಉತ್ತಮ ಆಡಳಿತದಿಂದಾಗಿ ಜಿಲ್ಲೆಯಲ್ಲಿ ಜೆಡಿಎಸ್‍ಗೆ ಸ್ಫರ್ಧಿಸಲು ಅವಕಾಶ ಸಿಕ್ಕಿರುವುದು ಸಂತಸದ ಸಂಗತಿ. ಜೆಡಿಎಸ್‍ನಿಂದ ದೇವೇಗೌಡರಲ್ಲದೇ ಬೇರೆ ಯಾರೇ ಅಭ್ಯರ್ಥಿಯಾಗಿ ಸ್ಫರ್ಧಿಸಿದರೂ ಕೂಡ ಭಾರಿ ಮತಗಳಿಂದ ಗೆಲ್ಲಿಸಲು ಕಾರ್ಯಕರ್ತರುಗಳು ಸಿದ್ದರಿದ್ದಾರೆಂದು ತಿಳಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಸೊಪ್ಪು ಗಣೇಶ್, ಕಾರ್ಯಾಧ್ಯಕ್ಷ ಶಿವಸ್ವಾಮಿ, ಮಹಿಳಾ ಅಧ್ಯಕ್ಷೆ ಲಲಿತಾ ಸಂತೋಷ್, ಎ.ಪಿ.ಎಂ.ಸಿ ನಿರ್ದೇಶಕರಾದ ತರಕಾರಿ ನಾಗರಾಜು, ಸಾರ್ಥವಳ್ಳಿ ಶಿವಕುಮಾರ್, ನಗರಸಭಾ ಮಾಜಿ ಸದಸ್ಯರುಗಳಾದ ರೇಖಾ ಅನೂಪ್, ನಿಜಗುಣ, ಮುಖಂಡರುಗಳಾದ ಕರಡಿ ದೇವರಾಜು, ಹರೀಶ್, ಫೈರೋಜ್ ಮುಂತಾದವರಿದ್ದರು.
ತುಮಕೂರು ಕ್ಷೇತ್ರದಿಂದ ಗೆದ್ದ ಸಂಸದರ ಪಕ್ಷ ಕೇಂದ್ರದಲ್ಲಿ ಎಂದೂ ಆಡಳಿತ ನಡೆಸಿಲ್ಲ. ಯಾವಾಗಲೂ ವಿರೋಧ ಪಕ್ಷದ ಆಡಳಿತವೇ ಇರುತ್ತದೆ. ಈ ಬಾರಿ ಈ ಕ್ಷೇತ್ರದಿಂದ ಜೆಡಿಎಸ್ ಗೆದ್ದರೆ ಕೇಂದ್ರದಲ್ಲಿ ಏನಾಗುತ್ತದೆ ನೋಡಬೇಕು ಎಂದು ಲೋಕೇಶ್ವರ್ ಮಾರ್ಮಿಕವಾಗಿ ನುಡಿದರು.