ತಿಪಟೂರು :
ಭಾತರದ ಮಾಜಿ ಪ್ರಧಾನಿಯಾಗಿ ಸೇವೆ ಸಲ್ಲಿಸಿ ಹಾಲಿ ಸಂಸದರಾಗಿರುವ ಜಾತ್ಯಾತೀತ ಜನತದಳದ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ.ದೇವೇಗೌಡರು ಕಲ್ಪತರು ನಾಡಿನಿಂದ ಮೈತ್ರಿ ಮೂಲಕ ಸ್ಪರ್ಧಿಸಿರುವುದು ನಮ್ಮೆಲ್ಲರ ಅದೃಷ್ಟ ಎಂದು ಜೆಡಿಎಸ್ ಮುಖಂಡ ಲೋಕೇಶ್ವರ್ ತಿಳಿಸಿದರು.
ನಗರದ ಖಾಸಗಿ ಹೊಟೇಲ್‍ನಲ್ಲಿ ಗುರುವಾರ ಏರ್ಪಡಿಸಿದ್ದ ತಾ.ಕಾಂಗ್ರೇಸ್ ಮತ್ತು ತಾ.ಜೆಡಿಎಸ್ ಜೆಂಟಿ ಪತ್ರಿಕಾ ಘೋಷ್ಠಿಯಲ್ಲಿ ಮಾತನಾಡಿದ ಅವರು ರಾಷ್ಟ್ರಮಟ್ಟದಲ್ಲಿ ತುಮಕೂರು ಜಿಲ್ಲೆಯಲ್ಲಿ ಹೆಚ್.ಡಿ.ದೇವೇಗೌಡರು ಈ ಕ್ಷೇತ್ರದಿಂದ ಸ್ಫರ್ಧಿಸಿ ಸುಮಾರು 2 ರಿಂದ 3 ಲಕ್ಷದ ಅಂತರದ ಮತಗಳಿಂದ ಗೆಲುವನ್ನು ಸಾಧಿಸಲಿದ್ದಾರೆ.
ಈ ದೃಷ್ಠಿಯಿಂದ ಹಿರಿಯ ಸಂಸದರಾಗಿರುವ ಹೆಚ್.ಡಿ.ದೇವಗೌಡರ ಅವಶ್ಯಕತೆ ಈ ನಾಡಿಗೆ ಇದ್ದು, ರಾಜ್ಯದಲ್ಲಿ ಮೈತ್ರಿ ಸರ್ಕಾರದ ಉತ್ತಮ ಆಡಳಿತದಿಂದಾಗಿ ಜಿಲ್ಲೆಯಲ್ಲಿ ಜೆ.ಡಿ.ಎಸ್‍ಗೆ ಸ್ಫರ್ಧಿಸಲು ಅವಕಾಶ ಸಿಕ್ಕಿರುವುದು ಸಂತಸದ ಸಂಗತಿ. ಜೆ.ಡಿ.ಎಸ್‍ನಿಂದ ದೇವೇಗೌಡರಲ್ಲದೇ ಬೇರೆ ಯಾರೇ ಅಭ್ಯರ್ಥಿಯಾಗಿ ಸ್ಫರ್ಧಿಸಿದರು ಕೂಡ ಭಾರಿ ಮತಗಳಿಂದ ಜಯಭೇರಿ ಭಾರಿಸಲು ಕಾರ್ಯಕರ್ತರುಗಳು ಸಿದ್ದರಿದ್ದು,
ಈ ಬಾರಿ ನಮಗೆ ಮೈತ್ರಿ ಪಕ್ಷವಾದ ಕಾಂಗ್ರೇಸ್ ಕೂಡ ನಮ್ಮ ಜೊತೆ ಕೈ ಜೋಡಿಸಿದ್ದು ಆನೆ ಬಲ ಬಂದಿದ್ದು ಈ ಬಾರಿ ತುಮಕೂರಿನಲ್ಲಿ ಜಯ ನಮ್ಮದೆ ಹಾಗಾಗಿ ಇದೇ ಏಪ್ರಿಲ್ 1 ನೇ ತಾರೀಖು ನಗರದ ವಿನೋದ ಚಿತ್ರಮಂದಿರದ ಪಕ್ಕದಲ್ಲಿ ಮಾನ್ಯ ದೇವೆಗೌಡರ ನೇತೃತ್ವದಲ್ಲಿ ಹಾಗು ಉಪಮುಖ್ಯಮಂತ್ರಿ ಜಿ ಪರಮೇಶ್ವರ್ ರವರ ಮುಂದಾಳತ್ವದಲ್ಲಿ ಬಾರಿ ಬಹಿರಂಗ ಸಭೆ ಆಯೋಜಿಸಲಾಗಿದ್ದು ಕಾಂಗ್ರೇಸ್ ಹಾಗು ಜೆಡಿಎಸ್ ನ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸುವ ನಿರೀಕ್ಷೆ ಇದೇ ಎಂದರು.
ತಾಲ್ಲೂಕು ಕಾಂಗ್ರೇಸ್ ಅದ್ಯಕ್ಷ ಕಾಂತರಾಜು ಮಾತನಾಡಿ ಹೀಗಾಗಲೇ ಪಕ್ಷದ ವರಿಷ್ಟರ ಆದೇಶದಂತೆ ಮಾನ್ಯ ಮಾಜಿ ಪ್ರದಾನಿಗಳಾದ ದೇವೆಗೌಡರು ಈ ಬಾರಿ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿದ್ದು ಇವರ ಗೆಲುವಿಗೆ ಕಾಂಗ್ರೇಸ್ ಪಕ್ಷದ ಎಲ್ಲಾ ಕಾರ್ಯಕರ್ತರುಗಳು ದುಡಿಯುವುದಾಗಿ ತಿಳಿಸಿದರು. ಏನೇ ಆಗಲಿ ಈ ಬಾರಿ ತುಮಕೂರಿನಲ್ಲಿ ಕಾಂಗ್ರೇಸ್ ಹಾಗು ಜೆಡಿಎಸ್ ಪಕ್ಷದ ಅಭ್ಯರ್ಥಿಯಾದ ಮಾನ್ಯ ದೇವೇಗೌಡರು ಗೆಲ್ಲುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.
ಪತ್ರಿಕಾ ಘೋಷ್ಠಿಯಲ್ಲಿ ತಾಲ್ಲೂಕು ಪಂಚಾಯತ್ ಅದ್ಯಕ್ಷ ಶಿವಸ್ವಾಮಿ.ತಾಲ್ಲೂಕು ಜೆ.ಡಿ.ಎಸ್ ಅಧ್ಯಕ್ಷ ಸೊಪ್ಪು ಗಣೇಶ್, ತಾಲ್ಲೂಕು ಪಂಚಾಯತ್ ಅದ್ಯಕ್ಷ ಶಿವಸ್ವಾಮಿ ,ಮಾಜಿ ನಗರಸಭೆಯ ಅದ್ಯಕ್ಷ ಪ್ರಕಾಶ್, ಎಪಿಎಂಸಿ ಅದ್ಯಕ್ಷ ಲಿಂಗರಾಜು, ನಗರಸಭಾ ಮಾಜಿ ಸದಸ್ಯರುಗಳು, ಮುಖಂಡರುಗಳು ಮುಂತಾದವರಿದ್ದರು.