ತುಮಕೂರು : 247 ಹೊಸ ಕೋವಿಡ್-19 ಪ್ರಕರಣ ದಾಖಲು

ತುಮಕೂರು :

     ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಬಿಡುಗಡೆ ಮಾಡಿರುವ ಇಂದಿನ ಕೊರೋನವೈರಸ್ ಪ್ರಕರಣದಲ್ಲಿ ಹೊಸದಾಗಿ 247 ಮಂದಿಗೆ ಕೋವಿಡ್ – 19 ದೃಢಪಟ್ಟಿದೆ ಎಂದು ಡಿಎಚ್ಒ ಡಾ. ನಾಗೇಂದ್ರಪ್ಪ ಮಾಹಿತಿಯನ್ನು ನೀಡಿದ್ದಾರೆ.

     ಇಂದು ಬಿಡುಗಡೆ ಮಾಡಿರುವ ವರದಿಯಲ್ಲಿ 246 ಜನರು ಸಂಪೂರ್ಣವಾಗಿ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಇದರಿಂದಾಗಿ ಒಟ್ಟು ಬಿಡುಗಡೆ ಹೊಂದಿರುವವರ ಸಂಖ್ಯೆ 12176 ಕ್ಕೆ ಏರಿಕೆ ಕಂಡಿದೆ ಹಾಗೂ 4 ಸಾವಾಗಿದ್ದು ಹೊಸ ಪ್ರಕರಣಗಳು 247 ಸೇರಿ 2458 ಜನರಿಗೆ ಜಿಲ್ಲೆಯ ಕೋವಿಡ್ – 19 ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ

     ಐಸಿಯುನಲ್ಲಿ 119 ಮಂದಿಗೆ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 14959 ಕ್ಕೆ ಏರಿಕೆಯಾಗಿದೆ ಎಂದರು. ತುಮಕೂರು ಜಿಲ್ಲೆಯಲ್ಲಿ ಒಟ್ಟಾರೆಯಾಗಿ 1,40,145 ಮಾದರಿಗಳನ್ನು ಪರೀಕ್ಷೆ ಮಾಡಲಾಗಿದೆ, ಅದರಲ್ಲಿ 1,20,930 ಮಾದರಿಗಳು ನೆಗೆಟಿವ್ ಎಂದು ವರದಿಯಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link