ತುರುವೇಕೆರೆ :
ತಾಲೂಕಿನ ಕಸಬಾ ಹೋಬಳಿ ತಾವರೆಕೆರೆ ಬಡಾವಣೆಯ ಜನರ ಸಂಚಾರಕ್ಕೆ ರಸ್ತೆ ಬಿಡಿಸಿಕೊಡುವಂತೆ ತಾಲೂಕು ಆಡಳಿತವನ್ನು ಬಡಾವಣೆಯ ಗ್ರಾಮಸ್ಥರು ಸೋಮವಾರ ಒತ್ತಾಯಿಸಿದರು.
ಕಳೆದ 50 ವರ್ಷಗಳ ಹಿಂದೆ ಸರ್ಕಾರದಿಂದ ಮನೆ ಕಟ್ಟಿಕೊಳ್ಳಲು ಇಲ್ಲಿ ನಿವೇಶನ ನೀಡಿತ್ತು. ಹಾಗಾಗಿ 45 ಕುಟುಂಬಗಳು ಇಂದಿಗೂ ವಾಸಮಾಡುತ್ತಿದ್ದು ಇದೇ ರಸ್ತೆಯಲ್ಲಿ ಸಂಚಾರ ಮಾಡುತ್ತಿದ್ದು ಆದರೆ ಗ್ರಾಮದ ಖಾಸಗಿ ವ್ಯಕ್ತಿಯೊಬ್ಬರು ಈ ಜಾಗ ನಮ್ಮ ಕಂದಾಯ ಜಮೀನಾಗಿದೆ, ನಾವು ರಸ್ತೆ ಬಿಡುವುದಿಲ್ಲ ಎಂದು ರಸ್ತೆಗೆ ಬೇಲಿ ಹಾಕಿಕೊಂಡಿದ್ದಾರೆ. ಇದರಿಂದ ಬಡಾವಣೆಯ ಜನರ ಓಡಾಟಕ್ಕೆ ಇದೊಂದೇ ದಾರಿ ಇದ್ದುದರಿಂದ ಸಂಚಾರಕ್ಕೆ ತೊಂದರೆಯಾದ ಹಿನ್ನೆಲೆಯಲ್ಲಿ ಶಾಶ್ವತ ರಸ್ತೆ ಮಾಡಿಕೊಡುವಂತೆ ತಾವರೆಕೆರೆ ಬಡಾವಣೆಯ ಗ್ರಾಮಸ್ಥರು ತಹಶೀಲ್ದಾರ್ ಹಾಗು ಲೋಕಮ್ಮನಹಳ್ಳಿ ಪಿಡಿಒ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯ ಕೆಂಪೇಗೌಡ, ವೆಂಕಟೇಶ್, ಮಂಜಣ್ಣ, ಬಸವರಾಜು ಮತ್ತು ಗ್ರಾಮಸ್ಥರುಗಳು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ