ಬ್ಯಾಂಕಾಕ್:
ಕಾಂಬೋಡಿಯಾದ ಮಾಜಿ ನಾಯಕನೊಂದಿಗಿನ ದೂರವಾಣಿ ಸಂಭಾಷಣೆ ಸೋರಿಕೆಯಾದ ಆರೋಪದ ಮೇಲೆ ತನಿಖೆ ನಡೆಯುವವರೆಗೂ ಥೈಲ್ಯಾಂಡ್‌ನ ಸಾಂವಿಧಾನಿಕ ನ್ಯಾಯಾಲಯವು ಪ್ರಧಾನಿ ಪೇಟೊಂಗ್‌ಟಾರ್ನ್ ಶಿನವಾತ್ರ ಅವರನ್ನು ಅಧಿಕಾರದಿಂದ ಅಮಾನತುಗೊಳಿಸಿದೆ. ಮಂಗಳವಾರ ನ್ಯಾಯಾಧೀಶರು ಅವರ ಮೇಲೆ ನೈತಿಕತೆಯ ಉಲ್ಲಂಘನೆ ಆರೋಪ ಹೊರಿಸಿ ಸಲ್ಲಿಸಲಾದ ಅರ್ಜಿಯನ್ನು ಸರ್ವಾನುಮತದಿಂದ ಅಂಗೀಕರಿಸಿದರು ಮತ್ತು ಅವರನ್ನು ಕರ್ತವ್ಯದಿಂದ ಅಮಾನತುಗೊಳಿಸಲು 7 ರಿಂದ 2 ಮತಗಳ ಮತ ಚಲಾಯಿಸಲಾಗಿದೆ.
ಮೇ 28 ರಂದು ನಡೆದ ಸಶಸ್ತ್ರ ಘರ್ಷಣೆಯಲ್ಲಿ ಒಬ್ಬ ಕಾಂಬೋಡಿಯನ್ ಸೈನಿಕ ಮೃತಪಟ್ಟ ಬಳಿಕ ಕಾಂಬೋಡಿಯಾದೊಂದಿಗಿನ ಇತ್ತೀಚಿನ ಗಡಿ ವಿವಾದವನ್ನು ನಿಭಾಯಿಸಿದ ಬಗ್ಗೆ ಪೇಟೊಂಗ್‌ಟಾರ್ನ್ ಹೆಚ್ಚುತ್ತಿರುವ ಅಸಮಾಧಾನವನ್ನು ಎದುರಿಸುತ್ತಿದ್ದಾರೆ. ಗಡಿ ವಿವಾದದ ಕುರಿತು ರಾಜತಾಂತ್ರಿಕತೆಯಲ್ಲಿ ತೊಡಗಿದ್ದಾಗ ಫೋನ್ ಕರೆ ದೂರುಗಳು ಸೋರಿಕೆಯಾಗಿವೆ. ಈ ಕುರಿತು ದೇಶದಲ್ಲಿ ಪ್ರತಿಭಟನೆಗಳು ಹೆಚ್ಚುತ್ತಿವೆ.
ಸೋಮವಾರ ಪೇಟೊಂಗ್‌ಟಾರ್ನ್ ಅವರು ನ್ಯಾಯಾಲಯದ ಪ್ರಕ್ರಿಯೆಯನ್ನು ಒಪ್ಪಿಕೊಳ್ಳುವುದಾಗಿ ಮತ್ತು ಅನುಸರಿಸುವುದಾಗಿ ಹೇಳಿದ್ದರು. ಮಂಗಳವಾರದಂದು, ಸೋರಿಕೆಯಾದ ಫೋನ್ ಕರೆಯ ಹಿನ್ನೆಲೆಯಲ್ಲಿ ಪ್ರಮುಖ ಪಕ್ಷವೊಂದು ಪೇಟೊಂಗ್‌ಟಾರ್ನ್‌ನ ಸಮ್ಮಿಶ್ರ ಸರ್ಕಾರವನ್ನು ತೊರೆದಿದೆ. ರಾಜ ಮಹಾ ವಜಿರಲಾಂಗ್‌ಕಾರ್ನ್ ಅವರು ಸಂಪುಟ ಪುನರ್ರಚನೆಯನ್ನು ಅನುಮೋದಿಸಿದ್ದಾರೆ. ರಾಷ್ಟ್ರೀಯ ಭ್ರಷ್ಟಾಚಾರ ನಿಗ್ರಹ ಆಯೋಗದ ಕಚೇರಿಯಿಂದ ನೀತಿ ಸಂಹಿತೆಯ ಉಲ್ಲಂಘನೆಯ ಆರೋಪದ ಮೇಲೆ ಪೇಟೊಂಗ್‌ಟಾರ್ನ್ ತನಿಖೆಗಳನ್ನು ಎದುರಿಸುತ್ತಿದ್ದಾರೆ.
ಫೋನ್ ಕರೆಯಲ್ಲಿ ಪೇಟೊಂಗ್‌ಟಾರ್ನ್ ಅವರು ದಂಗೆಯನ್ನು ಹತ್ತಿಕ್ಕಬೇಕು ಎಂದು ಹೇಳಿದ್ದು, ವರ ಬಹಿರಂಗವಾಗಿ ಮಾತನಾಡುವ ಪ್ರಾದೇಶಿಕ ಸೇನಾ ಕಮಾಂಡರ್ ಬಗ್ಗೆ ಮಾಡಿದ ಹೇಳಿಕೆಗಳು ಮತ್ತು ಗಡಿಯಲ್ಲಿನ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಕಾಂಬೋಡಿಯನ್ ಸೆನೆಟ್ ಅಧ್ಯಕ್ಷ ಹುನ್ ಸೇನ್ ಅವರನ್ನು ಸಮಾಧಾನಪಡಿಸಲು ಅವರು ಮಾಡಿದ ಪ್ರಯತ್ನಗಳು ಸಂಪೂರ್ಣ ಆಡಿಯೋ ಲೀಕ್ ಆಗಿದೆ.
