ದಂಡಿನಶಿವರದಲ್ಲಿ ಯಶಸ್ವಿ ರಕ್ತದಾನ ಶಿಬಿರ

ತುರುವೇಕೆರೆ.

ತಾಲ್ಲೂಕಿನ ದಂಡಿನ ಶಿವರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಿನಾಂಕ04.09.2018ರಂದು ಆಯೋಜಿಸಲಾಗಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವು ಅತ್ಯಂತ ಯಶಸ್ವಿಯಾಗಿ ಮೂಡಿಬಂದಿತು. ಈ ಶಿಬಿರವನ್ನು ಆರೋಗ್ಯ ರಕ್ಷಾಸಮಿತಿ, ಪ್ರಾಥಮಿಕ ಆರೋಗ್ಯ ಕೇಂದ್ರ, ದಂಡಿನಶಿವರ, ಶ್ರೀ ಹೊನ್ನಾದೇವಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್, ರೋವರ್ಸ್, ರೆಡ್‍ರಿಬನ್ ಮತ್ತು ಯುವ ರೆಡ್‍ಕ್ರಾಸ್‍ ಘಟಕಗಳು, ದಂಡಿನಶಿವರ ಗ್ರಾಮ ಪಂಚಾಯಿತಿ, ಉದಯ ರವಿ ಸ್ಪೋಟ್ರ್ಸ್ ಕ್ಲಬ್ ಮತ್ತು ತುರುವೇಕೆರೆಯ ಲಯನ್ಸ್   ಕ್ಲಬ್‍ ಇವರ ಸಹಯೊಗದೊಂದಿಗೆ ಹಮ್ಮಿಕೊಳ್ಳಲಾಗಿತ್ತು.ಶಿಬಿರದಲ್ಲಿ ದಂಡಿನಶಿವರದ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ವಿವಧ ಕಛೇರಿಗಳ ಸಿಬ್ಬಂದಿ ವರ್ಗ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಉತ್ಸಾಹದಿಂದ ಪಾಲ್ಗೊಂಡು ಸುಮಾರು 84 ಯುನಿಟ್‍ರಕ್ತ ಸಂಗ್ರಹಣೆಯಾಗುವಲ್ಲಿ ಸಹಕರಿಸಿದರು.
ರಕ್ತದಾನ ಶಿಬಿರವನ್ನು ಉದ್ಘಾಟಿಸಿದ ಲಯನ್ಸ್ ಕ್ಲಬ್‍ ಅಧ್ಯಕರಾದ ನಂಜೇಗೌಡರವರು ರಕ್ತದಾನದ ಮಹತ್ವದ ಕುರಿತು ವಿವರವಾಗಿ ತಿಳಿಸಿದರು. ಇಲ್ಲಿ ರಕ್ತದಾನ ಮಾಡಿದವರಿಗೆ ನೀಡಲಾಗುವ ಪ್ರಶಂಸಾ ಪತ್ರವನ್ನು ಸಧ್ಯದಲ್ಲೇ ತುರ್ತಿನ ಸಂದರ್ಭಗಳು ಎದುರಾದರೆ ಆಸ್ಪತ್ರೆಗಳಲ್ಲಿ ಹಾಜರುಪಡಿಸಿದಲ್ಲಿ ರಕ್ತದ ಪೂರ್ವಭಾವಿ ಪರೀಕೆ ನಡೆಸದೇ ನೇರ ಚಿಕಿತ್ಸೆಗೆ  ಅಂತಹವರ ರಕ್ತ ಬಳಸಲು ಅವಕಾಶವಿರುತ್ತದೆ ಎಂದು ಹೇಳಿದರು.ಅತಿಥಿಗಳಾಗಿ ಭಾಗವಹಿಸಿದ್ದ ಜಿಲ್ಲಾ ರಕ್ತನಿಧಿ ವೈದ್ಯಾಧಿಕಾರಿಗಳಾದ    ಡಾ.ರೇಖಾ ಮಾತನಾಡಿ ಇಂದು ಭಾರತದಲ್ಲಿ ಅಗತ್ಯವಿರುವ ರಕ್ತ ಮತ್ತು ಲಭ್ಯವಿರುವ ಆರೋಗ್ಯವಂತ ರಕ್ತದ ಪ್ರಮಾಣಗಳ ನಡುವೆ ಗಣನೀಯ ಅಂತರವಿದ್ದು ಹೆಚ್ಚು ಯುವಕರಿರುವ ದೇಶದಲ್ಲಿ ಇಂತಹ ಪರಿಸ್ಥಿತಿಯಿರುವುದು ಚಿಂತಾಜನಕ ಎಂದು ಅಭಿಪ್ರಾಯ ಪಟ್ಟರು. ಆರೋಗ್ಯವಂತ ಯುವಕರು ಸ್ವಯಂ ಪ್ರೇರಿತರಾಗಿ ರಕ್ತದಾನಕ್ಕೆ ಮುಂದೆ ಬಂದು ಈ ವೈರುಧ್ಯವನ್ನು ಹೋಗಲಾಡಿಸಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿಶ್ರೀ ಹೊನ್ನಾದೇವಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಎನ್. ಪಿ.ಶಿವಾನಂದಯ್ಯನವರು, ವೈದ್ಯಾಧಿಕಾರಿ ಡಾ.ಜೆ. ಎಸ್. ಸಿಂಧುರವರು, ತಾಲ್ಲೂಕು ಪಂಚಾಯಿತಿಯ ಸದಸ್ಯರಾದ ಡಿ. ಸಿ.ಕುಮಾರ್‍ರವರು ಹಾಗೂ ಲಯನ್ಸ್ ಕ್ಲಬ್ ಸದಸ್ಯರಾದ ಹಿರೇಮಠ್‍ರವರು ಉಪಸ್ಥಿತರಿದ್ದರು. ಶಿಬಿರದಲ್ಲಿ ಪಾಲ್ಗೊಂಡು ರಕ್ತದಾನಕ್ಕೆ ಮನಸ್ಸು ಮಾಡಿದ ಮಹನೀಯರಿಗೆ ಉಚಿತ ರಕ್ತಗುಂಪು ಹಾಗೂ ಇತ ರೆರಕ್ತ ಪರೀಕ್ಷೆಗಳನ್ನು ಮಾಡಲಾಯಿತು.ಬೆಳಗ್ಗೆ 10 ಘಂಟೆಗೆ ಪ್ರಾರಂಭದ ಶಿಬಿರಕ್ಕೆ ತುಮಕೂರು ಜಿಲ್ಲಾ ಆಸ್ಪತ್ರೆಯ ರಕ್ತ ನಿಧಿ ಕೇಂದ್ರದ ಸಹಕಾರವಿತ್ತು.ಶಿಬಿರದ ಪೂರ್ವ ಭಾವಿಯಾಗಿ ರಕ್ತದಾನದ ಮಹತ್ವವದ ಬಗ್ಗೆಜಾಗೃತಿ ಮೂಡಿಸುವ ಸಲುವಾಗಿ ದಿನಾಂಕ 03 ಸೆಪ್ಟೆಂಬರ್2018 ರಂದು ಡಾ.ಸಿಂಧು ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ್ದರು.ಡಾ. ಸಿಂಧುಜೆ.ಎಸ್ .ಮತ್ತವರ ಸಿಬ್ಬಂದಿ ವರ್ಗ ಶಿಬಿರವನ್ನು ಅಚ್ಚುಕಟ್ಟಾಗಿ ಏರ್ಪಡಿಸಿದ್ದರು.

Recent Articles

spot_img

Related Stories

Share via
Copy link
Powered by Social Snap