ದಂಪತಿ ಸುಲಿಗೆ ಪ್ರಕರಣ : ಇಬ್ಬರು ಪೊಲೀಸರ ವಜಾ..!

ಬೆಂಗಳೂರು:

        ಡಿ.8ರಂದು ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ ಬಳಿ  ನಡೆದುಕೊಂಡು ಹೋಗುತ್ತಿದ್ದ ದಂಪತಿಯನ್ನು ಅಡ್ಡಗಟ್ಟಿ ವಿನಃ ಕಾರಣ ಹಣ ವಸೂಲಿ  ಮಾಡಿದ್ದ ಇಬ್ಬರು ಪೊಲೀಸರನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ತಿಳಿದು ಬಂದಿದೆ . ಈಶಾನ್ಯ ವಿಭಾಗದ ಸಂಪಿಗೆಹಳ್ಳಿ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೆಬಲ್ ರಾಜೇಶ್ ಮತ್ತು ಕಾನ್‌ಸ್ಟೆಬಲ್ ನಾಗೇಶ್ ರನ್ನು ವಜಾಗೊಳಿಸಲಾಗಿದೆ. 

     ಘಟನೆ ಬೆಳಕಿಗೆ ಬಂದ ತಕ್ಷಣ ಇಲಾಖಾ ವಿಚಾರಣೆಗಾಗಿ ಇಬ್ಬರನ್ನು ಅಮಾನತುಗೊಳಿಸಲಾಗಿತ್ತು. ಇದೀಗ ಯುಪಿಐ ಮೂಲಕ ದಂಪತಿಯಿಂದ 1000 ರೂಪಾಯಿ ಸುಲಿಗೆ ಮಾಡಿರುವುದು ಇಲಾಖಾ ವಿಚಾರಣೆಯಲ್ಲಿ ಪತ್ತೆಯಾಗಿದ್ದು ಈ ಹಿನ್ನೆಲೆಯಲ್ಲಿ ಇಬ್ಬರೂ ಪೊಲೀಸರನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಡಿಸಿಪಿ(ಈಶಾನ್ಯ) ಅನೂಪ್ ಎ ಶೆಟ್ಟಿ ತಿಳಿಸಿದ್ದಾರೆ.

     ಬೆಂಗಳೂರು ನಗರ ಪೊಲೀಸರಿಗೆ ಟ್ಯಾಗ್ ಮಾಡಿ ಸಂತ್ರಸ್ತ ಸುಲಿಗೆ ಕುರಿತು ಟ್ವೀಟ್ ಮಾಡಿದ್ದರು. ಇನ್ನು ಇದೀಗ ಇಬ್ಬರೂ ಪೊಲೀಸರನ್ನು ಅಮಾನತುಗೊಳಿಸಲಾಗಿದೆ. ಬೆಂಗಳೂರು ನಗರ ಪೊಲೀಸರು ತಮ್ಮ ಸಿಬ್ಬಂದಿಯಿಂದ ವಿಕೃತ ವರ್ತನೆಯನ್ನು ಸಹಿಸುವುದಿಲ್ಲ ಎಂದು ಬೆಂಗಳೂರು ನಗರ ಪೊಲೀಸರ ಅಧಿಕೃತ ಟ್ವೀಟ್ ಹ್ಯಾಂಡಲ್ ನಲ್ಲಿ ತಿಳಿಸಿದ್ದು ಈ ಮೂಲಕ ಇತರರಿಗೂ ಕಟು ಎಚ್ಚರಿಕೆ ನೀಡಿದೆ.

      ಸಂತ್ರಸ್ತ ಕಾರ್ತಿಕ್ ಪಾತ್ರಿ, ಇಬ್ಬರು ಪೊಲೀಸರು ತಮ್ಮ ಮತ್ತು ಅವರ ಪತ್ನಿಯಿಂದ ಹೇಗೆ ಹಣ ಸುಲಿಗೆ ಮಾಡಿದ್ದಾರೆ ಎಂದು ಟ್ವೀಟ್ ಮಾಡಿದ್ದರು. ದಂಪತಿಗಳು ಸ್ನೇಹಿತನ ಮನೆಯಿಂದ ಮನೆಗೆ ಹಿಂದಿರುಗುತ್ತಿದ್ದಾಗ ಹೊಯ್ಸಳ ಗಸ್ತು ತಿರುಗುವ ವಾಹನದಲ್ಲಿದ್ದ ಪೊಲೀಸರು ಮಧ್ಯರಾತ್ರಿ ರಸ್ತೆಯಲ್ಲಿ ನಡೆದಾಡುವ ಉದ್ದೇಶವನ್ನು ಕೇಳುವ ಮೂಲಕ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದರು.

ದಂಪತಿಗಳು ತಮ್ಮ ಸಂಬಂಧ, ಕುಟುಂಬದ ವಿವರಗಳು ಮತ್ತು ಅವರು ಎಲ್ಲಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ಕೇಳಿದ್ದರು ಎಂದು ಆರೋಪಿಸಿದ್ದರು. ರಾತ್ರಿ 11 ಗಂಟೆಯ ನಂತರ ರಸ್ತೆಯಲ್ಲಿ ಓಡಾಡಬಾರದು ಎಂದೆಲ್ಲ ಪೊಲೀಸರು ದಂಪತಿಗೆ ಹೇಳಿದ್ದರು. ಪಾತ್ರಿ ಪತ್ನಿ ಅಳಲು ತೋಡಿಕೊಳ್ಳುತ್ತಿದ್ದಂತೆ ಇಬ್ಬರು ಪೊಲೀಸರು ಆರಂಭದಲ್ಲಿ 3000 ರೂ.ಗೆ ಬೇಡಿಕೆಯಿಟ್ಟರು ಮತ್ತು ನಂತರ 1000 ರೂ.ಗೆ ಒಪ್ಪಿಕೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link