ದಲಿತ ಕಾಲೋನಿ ರಸ್ತೆ ಒತ್ತುವರಿ ತೆರವಿಗೆ ಸಾರ್ವಜನಿಕರ ಮನವಿ

ಜಗಳೂರು:

    ದಲಿತರ ಕಾಲೋನಿಯಲ್ಲಿ ರಸ್ತೆ ಒತ್ತುವರಿಯಾಗಿದ್ದು ಶೀಘ್ರವೇ ತೆರವುಗೊಳಿಸುವಂತೆ ಒತ್ತಾಯಿಸಿ ದಲಿತ ಸಂಘರ್ಷಸಮಿತಿಯ ನೇತೃತ್ವದಲ್ಲಿ ಗೋಗುದ್ದು ಗ್ರಾಮಸ್ಥರ ಪ್ರತಿಭಟನೆ ನಡೆಸಿದರು.ಪಟ್ಟಣದ ತಾಲೂಕು ಕಛೇರಿಯ ಮುಂಬಾಗ ತೆರಳಿದ ಪ್ರತಿಭಟನಾಕಾರರು ಗ್ರಾಮಪಂಚಾಯ್ತಿ ಅಧಿಕಾರಿಗಳ ವಿರುದ್ದ ದಿಕ್ಕಾರ ಕೂಗಿ ನಂತರ ತಹಶೀಲ್ದಾರ್‍ಗೆ ಮನವಿ ಸಲ್ಲಿಸಿದರು.

    ಡಿಎಸ್‍ಎಸ್ ತಾಲೂಕು ಅಧ್ಯಕ್ಷ ಸತೀಶ್ ಮಾಚಿಕೆರೆ ಮಾತನಾಡಿ,ತಾಲೂಕಿನ ಗೋಗುದ್ದು ಗ್ರಾಮದಲ್ಲಿ ದಲಿತ(ಮಾದಿಗ) ಸಮುದಾಯದವರು 250 ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದ್ದು ಸಾರ್ವಜನಿಕ ಜೀವನಕ್ಕೆ ಸಂಬಂಧಿಸಿದಂತೆ ಮಾದಿಗ ಸಮುದಾಯದ ಕಾಲೋನಿಯಲ್ಲಿ ರಸ್ತೆಗೆ ಸೇರಿದ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಲಾಗಿದೆ ಇದರಿಂದ ಸಮುದಾಯದವರು ಸಂಚರಿಸಲು ತೀವ್ರ ತೊಂದರೆಯಾಗಿದೆ. ಇದರ ಬಗ್ಗೆ ಹಲವುಬಾರಿ ಮನವಿಮಾಡಿದರೂ ಸಂಬಂಧಿಸಿದ ಗ್ರಾಮಪಂಚಾಯ್ತಿ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ ಎಂದು ಆರೊಪಿಸಿದರು.

     ಗ್ರಾಮದಲ್ಲಿ ಸಾರ್ವಜನಿಕರ ಸ್ವತ್ತನ್ನು ವಿಚಾರಿಸಿದರೆ ರಸ್ತೆ ಒತ್ತುವರಿ ಮಾಡಿದ ಮುಸ್ಲಿಂ ಸಮುದಾಯದ ವ್ಯಕ್ತಿ ದಲಿತ ಸಮುದಾಯದ ಬಗ್ಗೆ ಅವಾಚ್ಯಶ್ಬ್ದಗಳಿಂದ ನಿಂದನೆ ಮಾಡುತ್ತಾರೆ. ಅಲ್ಲದೆ ನಿರುಪಯುಕ್ತ ವಸ್ತುಗಳು,ಚರಂಡಿ ನೀರು,ಘನ ತ್ಯಾಜ್ಯವಸ್ತುಗಳು,ಮನೆಯ ಬಾಗಿಲ ಮುಂದೆ ಬಿದ್ದಿದರ ಪರಿಣಾಮ ಸುಗಮ ಜೀವನಕ್ಕೆ ಅಸ್ತವಸ್ತ್ಯವಾಗಿದೆ ಕೂಡಲೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

    ಈ ಸಮದರ್ಭದಲ್ಲಿ ದಲಿತ ಒಕ್ಕೂಟದ ತಾಲೂಕು ಅದ್ಯಕ್ಷ ರಾಜಪ್ಪ ವ್ಯಾಸಗೊಂಡನಹಳ್ಳಿ ಎಐಎಸ್ ಎಫ್ ನ ರಾಜ್ಯ ಸಹಕಾರ್ಯದರ್ಶಿ ಮಾದಿಹಳ್ಳಿ ಮಂಜುನಾಥ್ ದಲಿತ ಮುಖಂಡ ಸತ್ಯಮೂರ್ತಿಗೌರಿಪುರ ಗ್ರಾಮಸ್ಥರಾದ ರಾಜಪ್ಪ ರಾಮಪ್ಪ ಸಣ್ಣೆಲ್ಲಪ್ಪ ಪರುಶರಾಮ್ ನಾಗರಾಜ್ ಮಂಜುನಾಥ್ ತಿಪ್ಪೇಸ್ವಾಮಿ ಮಂಜು ಸೇರಿಂದತೆ ಇತರರು ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link